ಉಳ್ಳಾಲದಲ್ಲಿ ಕಡಲು ಕೊರೆತ ತಡೆಗಟ್ಟಲು ಮಾದರಿ ಶಾಶ್ವತ ತಡೆಗೋಡೆ ನಿರ್ಮಾಣ- ಯು.ಟಿ ಖಾದರ್


ಉಳ್ಳಾಲ; ಉಳ್ಳಾಲ ಕಡಲ ಕಿನಾರೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಯು.ಟಿ‌ ಖಾದರ್ ಇಂದು ವಿಕ್ಷೀಸಿದರು.
ಈ ಸಂದರ್ಭದಲ್ಲಿ ‌ಮಾತನಾಡಿದ ಅವರು ಉಳ್ಳಾಲ ಕಡಲ ತೀರ ಪ್ರದೇಶ ಸಮುದ್ರದ ಅಲೆಗಳ ರಭಸಕ್ಕೆ ಸಾಕಷ್ಟು ಮನೆಗಳು ಹಾನಿಗೊಳಗಾಗಿ ಪ್ರಾಕೃತಿಕ ವಿಕೋಪ ನಡೆಯಿತು.ಕಡಲ ಕೊರೆತ ತಡೆಗಟ್ಟಲು ಹಲವು ಯೋಜನೆಗಳು ವಿಫಲವಾದಾಗ ಎಡಿಪಿ ಯೋಜನೆ ಮೂಲಕ ಶಾಶ್ವತ ಪರಿಹಾರ ರೂಪಿಸಲಾಯಿತು.ಅಂತೆಯೇ 22 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಶ್ವತ ತಡೆಗೋಡೆ ಮಾದರಿ ಕಾಮಗಾರಿ ಪ್ರಾರಂಭವಾಗಿದೆ.ಈ  ತಡೆಗೋಡೆ ನಿರ್ಮಾಣ ಎಲ್ಲಾ ಕಡಲು ಕೊರೆತ ಪ್ರದೇಶಗಳಿಗೆ ಮಾದರಿ ಆಗಲಿದೆ ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.

Comments