ಮಂಗಳೂರು ಏರ್‌‌ಪೋರ್ಟ್‌ನಿಂದ ಮುಂಬೈ ಮತ್ತು ಚೆನ್ನೈ ವಿಮಾನ ಹಾರಾಟ ರದ್ದುಮಂಗಳೂರು: ಪ್ರಯಾಣಿಕರ ಅಲಭ್ಯತೆ‌ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬೈ ಮತ್ತು ಚೆನ್ನೈ ವಿಮಾನ ಹಾರಾಟ ರದ್ದಾಗಿದೆ.ಇಂದು ಮಂಗಳೂರು ಮತ್ತು ಬೆಂಗಳೂರು ನಡುವೆ ಮಾತ್ರ ವಿಮಾನ ಸಂಚಾರ ನಡೆಯಲಿದೆ.  ಹಗಲಿನಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ವಿಮಾನ ಸಂಚಾರ ಕೂಡ  ಇಲ್ಲ. ಬೆಂಗಳೂರಿಗೆ ರಾತ್ರಿ 7.35ಕ್ಕೆ ಇಂಡಿಗೋ ವಿಮಾನ, ರಾತ್ರಿ 9.50ಕ್ಕೆ ಸ್ಪೈಸ್ ಜೆಟ್ ವಿಮಾನ ಪ್ರಯಾಣ ಮಾಡಲಿದೆ.

ಇಂದು ಒಟ್ಟು ಆರು ವಿಮಾನಗಳು ನಿಗದಿ ಮಾಡಲಾಗಿತ್ತು. ಆದರೆ ಇಂದು ಪ್ರಯಾಣಿಕರ ಅಲಭ್ಯತೆ‌ಯಿಂದಾಗಿ ನಾಲ್ಕು ವಿಮಾನ ಹಾರಾಟ ರದ್ದು ಮಾಡಲಾಗಿದ್ದು ಇಂದು ಕೇವಲ ಬೆಂಗಳೂರಿಗೆ ವಿಮಾನ ಸಂಚರಿಸಲಿದೆ.

Comments