ಮಂಗಳೂರಿಗೆ ದುಬೈ ವಿಮಾನದಲ್ಲಿ ಬಂದ ಆರು ಮಂದಿಗೆ ಕೊರೊನಾ ದೃಢ


ಮಂಗಳೂರು; ಮೇ 18 ರಂದು ದುಬೈನಿಂದ ಮಂಗಳೂರಿಗೆ ಬಂದ ವಿಮಾನದಲ್ಲಿ ಬಂದ ಆರು ಮಂದಿಗೆ ಕೋವಿಡ್ 19 ದೃಢಪಟ್ಟಿದೆ.
ಮೇ 18 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ 178  ಪ್ರಯಾಣಿಕರು ಆಗಮಿಸಿದ್ದರು. ಇದರಲ್ಲಿ 110 ಮಂದಿಯನ್ನು ದ.ಕ ಜಿಲ್ಲೆಯ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.‌ಈ 110 ಮಂದಿಯಲ್ಲಿ ಆರು ಮಂದಿಗೆ ಕೊರೊನಾ ದೃಢಪಟ್ಟಿದೆ.  ಇದರಲ್ಲಿ ಐದು ಮಂದಿ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಾಗಿದ್ದು , ಓರ್ವ ಕಲ್ಬುರ್ಗಿ ಜಿಲ್ಲೆಯ ನಿವಾಸಿಯಾಗಿದ್ದಾರೆ. 60, 44, 42, 44, 29 , 35 ವರ್ಷದ ಪುರುಷರಿಗೆ ಕೊರೊನಾ ದೃಢಪಟ್ಟಿದ್ದು ಇವರನ್ನು ಮಂಗಳೂರಿನ ಕೋವಿಡ್ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 61 ಕ್ಕೆ ಏರಿಕೆಯಾಗಿದ್ದು 36 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments