ಮಂಗಳೂರಿನಲ್ಲಿ ಐವರು ಕೊರೊನಾ ಸೋಂಕಿತರು ಗುಣಮುಖ; ಚಪ್ಪಾಳೆ ಮೂಲಕ ಬೀಳ್ಕೊಡುಗೆ


ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಐವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.
ಬಂಟ್ವಾಳ ಕಸಬಾದ ಒಂದೇ ಮನೆಯ ಮೂರು ಮಂದಿ ಮತ್ತು ಮಂಗಳೂರಿನ ಬೋಳೂರಿನ ಇಬ್ಬರು ಇಂದು ಗುಣಮುಖರಾಗಿದ್ದಾರೆ. ಇಂದು ಐವರು ಗುಣಮುಖ ರಾಗಿ ಡಿಸ್ಚಾರ್ಜ್ ಆಗಿದ್ದು ಐವರನ್ನು ಕೋವಿಡ್ ವೆನ್ಲಾಕ್ ಆಸ್ಪತ್ರೆಯಲ್ಲಿ ಚಪ್ಪಾಳೆ ತಟ್ಟಿ ಬೀಳ್ಕೊಡಲಾಯಿತು. 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65 ಪ್ರಕರಣಗಳು ದೃಢಪಟ್ಟಿದ್ದು ಇಂದಿಗೆ 26 ಮಂದಿ ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ ಒಂದು ಆತ್ಮಹತ್ಯೆ ಪ್ರಕರಣ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಇನ್ನು 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments