ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಈ ಬಾರಿಯ ಆದಾಯ 98 ಕೋ.92 ಲಕ್ಷ


ಮಂಗಳೂರು;ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನವು 2019-20 ಸಾಲಿನಲ್ಲಿ 98 ಕೋ.92 ಲಕ್ಷ ಆದಾಯವನ್ನು ಗಳಿಸಿದ್ದು ಇದರಲ್ಲಿ 34,25,92,052 ಉಳಿಕೆ ಕಂಡು ಬಂದಿದೆ ಎಂದು ತಿಳಿದುಬಂದಿದೆ.

 ಕುಕ್ಕೆ ದೇವಸ್ಥಾನವು 2019 ರ ಎಪ್ರಿಲ್ ನಿಂದ 2020 ರ ಮಾ.31ರ ವರೆಗೆ 98,92,24,193 ಆದಾಯ ಗಳಿಸಿದ್ದು, 64,66,32,141 ಖರ್ಚಾಗಿದೆ. 
ಭೂಮಿ ಸಂಬಂಧ 1,60,40,094 ತೋಟದ ಇಳುವರಿಯಿಂದ 9,33,715 ಅಂಗಡಿಗಳ ಬಾಡಿಗೆಯಿಂದ 60,13,565, ಕಾಣಿಕೆಯಿಂದ 3, 45,14,804, ಹುಂಡಿ ಸಂಗ್ರಹಣೆಯಿಂದ 18,26,50,156, ಸೇವಾ ಕಾಣಿಕೆಯಿಂದ 42,62,92,881, ಅನುದಾನದಿಂದ 87000, ಹೂಡಿಕೆಯಿಂದ ಬಂದ ಬಡ್ಡಿ 21,38,03,033, ಉಳಿತಾಯ ಖಾತೆ ಹಾಗೂ ಇತರ ಬಡ್ಡಿ 82,48,317, ಸಂಕೀರ್ಣ ಜಮೆಯಿಂದ 4,81,71,851, ಅನ್ನ ಸಂತರ್ಪಣೆ ನಿಧಿಯಾಗಿ 4,69,09,782, ಅಭಿವೃದ್ಧಿ ನಿಧಿ 10,40,890, ಶಾಶ್ವತ ಸೇವಾ ಮೂಲಧನ 54,78,101, ಚಿನ್ನದ ರಥ ನಿರ್ಮಾಣ ದೇಣಿಗೆ 40’001 ಆದಾಯ ಬಂದಿದೆ. ಇದರಲ್ಲಿ ಸಿಬ್ಬಂದಿ ವರ್ಗಕ್ಕೆ ವೇತನಕ್ಕೆ 8,59,87,508, ನಿತ್ಯ ಕಟ್ಟೆ 24,28,340, ಹೆಚ್ಚು ಕಟ್ಟೆ 95,04,500, ರಥೋತ್ಸವಕ್ಕಾಗಿ 2,01,93,309, ಇತರ ವಿಶೇಷ ಸಂದರ್ಭಗಳಲ್ಲಿ 9,48,647, ಹರಿಕೆ ಸೇವೆಗಳ ಖರ್ಚು 13,84,63,865, ಭೂಮಿಗಳಿಗೆ 6,35,959, ಕಟ್ಟಡಗಳಿಗೆ 36,26,797, ತೆರಿಗೆಗಳಿಗೆ 7,97,596, ಸಾಧನ ಸರಂಜಾಮು 1,19,31,160, ಜನಾರೋಗ್ಯ 5,40,48,735, ಶಿಕ್ಷಣ ,ಧಾರ್ಮಿಕ ಮತ್ತು ಧರ್ಮಾದಾಯಗಳು 10,03,48,106 ಸಾಮಾನ್ಯ ಸಂಗ್ರಹಣಾ ನಿಧಿಗೆ ವಂತಿಗೆಯಾಗಿ 2,85,59,371, ವ್ಯಾಜ್ಯಾದ ವೆಚ್ಚ 6,82,835, ದೇವಸ್ಥಾನದ ನೌಕರರಿಗೆ ಸೇವಾಂತ್ಯ ಸೌಲಭ್ಯಗಳು 85,20,684, ಹೊಸ ಕಟ್ಟಡಗಳ ನಿರ್ಮಾಣ ಬಾಬ್ತು 2,48,97,149, ಸುತ್ತು ಗೋಪುರ ನವೀಕರಣ 14,00,00,000, ಕಟ್ಟಡ ಕಾಮಗಾರಿಗಳ ಹೊರತು ಕಾಮಗಾರಿಗಳಿಗೆ 1,50,57,607 ಖರ್ಚಾಗಿರುವುದಾಗಿ ತಿಳಿದು ಬಂದಿದೆ.

Comments