ಮೋಮಿನಪುರ ಪ್ರದೇಶದ 9 ಜನ ಸೇರಿ ಕೊರೋನಾ ಸೋಂಕಿನಿಂದ ಒಟ್ಟು 10 ಜನ ಗುಣಮುಖ



ಕಲಬುರಗಿ.: ಸೋಮವಾರ ಆರೋಗ್ಯ ಇಲಾಖೆಯ ಬೆಳಗಿನ ಬುಲೆಟಿನ್ ಪ್ರಕಟವಾಗಿದ್ದು, ಕಲಬುರಗಿ‌ ನಗರದ ಮೋಮಿನಪುರ ಪ್ರದೇಶದ 9 ಮತ್ತು ಮಿಜಗುರಿ ಪ್ರದೇಶದ ಓರ್ವ ವ್ಯಕ್ತಿ ಸೇರಿದಂತೆ ಕೋರೋನಾ ಪೀಡಿತ ಒಟ್ಟು 10 ಜನ‌ ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ಕಲಬುರಗಿ ನಗರದ ಮೋಮಿನಪುರ ಪ್ರದೇಶದ 35 ವರ್ಷದ ಯುವಕ (P-848),
30 ವರ್ಷದ ಮಹಿಳೆ (P-953), 33 ವರ್ಷದ ಮಹಿಳೆ (P-1080), 15 ವರ್ಷದ ಬಾಲಕಿ (P-1081), 14 ವರ್ಷದ ಬಾಲಕಿ (P-1082), 55 ವರ್ಷದ ಮಹಿಳೆ (P-1083), 50 ವರ್ಷದ ಮಹಿಳೆ (P-1085), 60 ವರ್ಷದ ವೃದ್ಧ (P-1086),
10 ವರ್ಷದ ಬಾಲಕಿ (P-1087) ಹಾಗೂ
ಮಿಜಗುರಿ ಪ್ರದೇಶದ 38 ವರ್ಷದ ಯುವಕ (P-849) ಸೋಂಕಿನಿಂದ ವಾಸಿಯಾಗಿ ಬಿಡುಗಡೆಗೊಂಡವರು.

ಜಿಲ್ಲೆಯಲ್ಲಿ ಇದೂವರೆಗಿನ ಕೊರೋನಾ‌ ಪೀಡಿತ 155 ಜನರಲ್ಲಿ 72 ಜನ ಗುಣಮುಖರಾಗಿದ್ದಾರೆ. 7 ಜನ‌ ನಿಧನ ಹೊಂದಿದ್ದು, 76 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.

Comments