ಹೃದಯಕಾಯಿಲೆಗೆ ಚಿಕಿತ್ಸೆಗೆ ಬಂದು ಸಾವನ್ನಪ್ಪಿದ ವ್ಯಕ್ತಿಗೆ ಕೊರೊನಾ; ಸಾವಿನ ಸಂಖ್ಯೆ 6 ಕ್ಕೇ ಏರಿಕೆಮಂಗಳೂರು;ಕೊರೊನಾಗೆ ಮಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದ್ದು ಸಾವಿನ ಸಂಖ್ಯೆ 6 ಕ್ಕೇ ಏರಿಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನ ವ್ಯಕ್ತಿ ಸಾವಿಗೀಡಾದವರು.

ಹೃದಯ ಕಾಯಿಲೆ ಸಂಬಂಧಿಸಿದಂತೆ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಗೆ ಬಂದ ನಂತರ ಸಾವನ್ನಪ್ಪಿದ್ದು ಈತನನ್ನು ಕೋವಿಡ್ ಟೆಸ್ಟ್  ಮಾಡಿದಾಹ ಕೊರೊನ ಪಾಸಿಟಿವ್ ಬಂದಿದೆ.

ಮೃತಪಟ್ಟ ಬಳಿಕ ಈತನ ಕೊರೊನಾ ಟೆಸ್ಟ್ ಮಾಡಲಾಗಿತ್ತು.
ವೇಣೂರಿನಲ್ಲಿ ಸಿಮೆಂಟ್ ಅಂಗಡಿಯ ಗೂಡ್ಸ್ ರಿಕ್ಷಾ ಚಾಲಕನಾಗಿದ್ದ. ಈತ 
ಶನಿವಾರ ರಾತ್ರಿ ಹೃದಯಾಘಾತವಾಗಿ ವೆನ್ಲಾಕ್ ಆಸ್ಪತ್ರೆ ಗೆ ದಾಖಲಾಗಿದ್ದರು
ಶನಿವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ.

Comments