ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ವರ್ಷದ ಬಾಲಕ ಸೇರಿದಂತೆ 10 ಮಂದಿ ಗುಣಮುಖಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಆರು ವರ್ಷದ ಬಾಲಕ ಸೇರಿದಂತೆ ಹತ್ತು ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.
ಮೇ 15 ರಂದು ಇವರೆಲ್ಲರೂ ಕೊರೊನಾ ದೃಢಪಟ್ಟ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. 45 ವರ್ಷದ ಗಂಡಸು, 33 ವರ್ಷದ ಹೆಂಗಸು, 27 ವರ್ಷದ ಹೆಂಗಸು, 27 ವರ್ಷದ ಗಂಡಸು, 6 ವರ್ಷದ ಬಾಲಕ, 65 ವರ್ಷದ ಹೆಂಗಸು  ,40 ವರ್ಷದ ಗಂಡಸು, 38 ವರ್ಷದ ಗಂಡಸು, 37 ವರ್ಷದ ಗಂಡಸು ಮತ್ತು 68 ವರ್ಷದ ಹೆಂಗಸು ಗುಣಮುಖರಾದವರು. ಇದರಲ್ಲಿ 68 ವರ್ಷದ ಮಹಿಳೆ ಹೃದಯಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆ ,ಮಧುಮೇಹ, ಅಧಿಕ ರಕ್ತದೊತ್ತಡ ದಿಂದಲೂ ಬಳಲುತ್ತಿದ್ದು ಇಂದು ಗುಣಮುಖರಾಗಿದ್ದಾರೆ.

Comments