ದ.ಕ ಜಿಲ್ಲೆಯಲ್ಲಿ 581 ಮಂದಿಯ ವರದಿ ನೆಗೆಟಿವ್


ದ.ಕ. ಜಿಲ್ಲೆಯಲ್ಲಿ ಇಂದು 581 ಮಂದಿಯ ವರದಿ ಲಭ್ಯವಾಗಿದ್ದು, ಈ ಪೈಕಿ ಯಾವುದೇ ಪಾಸಿಟಿವ್  ವರದಿ ಬಂದಿಲ್ಲ. ಈ ಮೂಲಕ ಜಿಲ್ಲೆಗೆ ಶುಕ್ರವಾರದಂದು ಶುಭಸುದ್ದಿ ಸಿಕ್ಕಿದಂತಾಗಿದೆ.
ಇನ್ನು ಶುಕ್ರವಾರದಂದು ಸುಮಾರು 170 ಮಂದಿಯ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. 593 ಮಂದಿಯ ವರದಿಯನ್ನು ನಿರೀಕ್ಷಿಸಲಾಗಿದೆ. ಇನ್ನು 11 ಮಂದಿಯನ್ನು ನಿಗಾ ಹಿನ್ನೆಲೆ ಕ್ವಾರಂಟೈನ್ ಕೇಂದ್ರಗಳಿಗೆ ದಾಖಲಿಸಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ 99 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದ್ದು, ಈ ಪೈಕಿ 59 ಮಂದಿ ಸದ್ಯ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯ ತನಕ 36 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 7 ಮಂದಿ ಚಿಕಿತ್ಸೆಗೆ ಸ್ಪಂಧಿಸದೆ ಸಾವನ್ನಪ್ಪಿದ್ದಾರೆ.

Comments