ಕೋವಿಡ್ ಭಯ:ಮಂಗಳೂರಿನಲ್ಲಿ ಇಂದು 54 ಮಂದಿಯ ಗಂಟಲುದ್ರವ ಪರೀಕ್ಷೆಗೆ ರವಾನೆ


ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 54  ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.  ಇಂದು  54  ವರದಿ ಸೇರಿದಂತೆ 349  ಮಂದಿಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. 
ಇಂದು  198  ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು ಇದರಲ್ಲಿ 14  ಪಾಸಿಟಿವ್ ಮತ್ತು  184  ನೆಗೆಟಿವ್ ಬಂದಿದೆ. ಈವರೆಗೆ  119  ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.ಇದರಲ್ಲಿ ಏಳು ಮಂದಿ ಸಾವನ್ನಪ್ಪಿದ್ದು 44  ಮಂದಿ ಗುಣಮುಖರಾಗಿದ್ದಾರೆ. 68  ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ

Comments