ರಾಯಚೂರು:ಇಂದು ಮತ್ತೆ 4 ಪಾಸಿಟಿವ್ ದೃಢ


 ದೇವದುರ್ಗ ತಾಲೂಕಿನಿಂದ ೨೭೫, ಲಿಂಗಸೂಗೂರು ತಾಲೂಕಿನಿಂದ ೨೬೨, ಮಾನ್ವಿ ತಾಲೂಕಿನಿಂದ ೪೩೦, ಸಿಂಧನೂರು ತಾಲೂಕಿನಿಂದ ೭೨ ಮತ್ತು ರಾಯಚೂರು ತಾಲೂಕಿನಿಂದ ೬೧೫ ಸೇರಿದಂತೆ ಮೇ.೨೩ರ ಶನಿವಾರ ೧,೬೫೪ ಜನರ ಗಂಟಲಿನ ದ್ರವ್ಯ ಮಾದರಿಯನ್ನು ಕೋವಿಡ್-೧೯ ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೋವಿಡ್-೧೯ ಫಲಿತಾಂಶಕ್ಕಾಗಿ ಕಳುಹಿಸಲಾಗಿದ್ದ ಫಲಿತಾಂಶಗಳಲ್ಲಿ ಇಂದು ಬಂದ ವರದಿಗಳಲ್ಲಿ ೮೦೩ ನೆಗೆಟಿವ್ ಆಗಿದ್ದು, ೪೦ ವರದಿಗಳು ಪಾಸಿಟಿವ್ ಎಂದು ದೃಢಪಟ್ಟಿವೆ. ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ ೯,೦೮೫ ಜನರ ಗಂಟಲಿನ ದ್ರವ್ಯ ಮಾದರಿಯನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ ೪,೯೦೫ ವರದಿಗಳು ನೆಗೆಟಿವ್ ಆಗಿವೆ. ರೋಗ ಲಕ್ಷಣಗಳಿಲ್ಲದ ಕಾರಣ ೬ ವರದಿಗಳು ತಿರಸ್ಕೃತಗೊಂಡಿವೆ ಮತ್ತು ಉಳಿದ ೪,೧೦೯ ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ.
ಫಿವರ್ ಕ್ಲಿನಿಕ್‌ಗಳಲ್ಲಿಂದು ೫೫೨ ಜನರನ್ನು ಥರ್ಮಲ್ ಸ್ಕಿçÃನಿಂಗ್‌ಗೆ ಒಳಪಡಿಸಲಾಗಿದೆ. ರಾಯಚೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ೫,೧೦೭, ಸಿಂಧನೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ೪೮೯, ಮಾನವಿ ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ೧,೫೮೯, ದೇವದುರ್ಗ ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ೧,೮೭೧ ಹಾಗೂ ಲಿಂಗಸೂಗೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ೧,೦೨೪ ಜನರು ಸೇರಿದಂತೆ ೧೦,೦೮೦ ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಲ್ಲಿರಿಸಲಾಗಿದೆ. ಇದೂವರೆಗೂ ೧೦೬೧ ಜನರು ಬಿಡುಗಡೆಯಾಗಿರುತ್ತಾರೆ.
ಮೇ.೨೩ರಂದು ಕೋವಿಡ್-೧೯ನ ೪೦ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ೬೬ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments