ಮಸ್ಕತ್ ನಿಂದ ಬಂದ 40 ಜನರಿಗೆ ಕ್ವಾರಂಟೈನ್ಮಂಗಳೂರು: ಮಸ್ಕತ್‌ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರು ಮೂಲಕ ಬುಧವಾರ ಮಂಗಳೂರಿಗೆ ಆಗಮಿಸಿದ 64 ಪ್ರಯಾಣಿಕರ ಪೈಕಿ ದ.ಕ. ಜಿಲ್ಲೆಯ 40 ಮಂದಿಯನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ.

64 ಮಂದಿಯ ಪೈಕಿ 23 ಮಂದಿ ಉಡುಪಿ ಮತ್ತು ಒಬ್ಬ ಪ್ರಯಾಣಿಕನನ್ನು ಕಾರವಾರಕ್ಕೆ ಕಳುಹಿಸಿಕೊಡಲಾಗಿದೆ. ಉಳಿದ 40 ಮಂದಿ ದ.ಕ.ಜಿಲ್ಲೆಯ ಪ್ರಯಾಣಿಕರ ಪೈಕಿ 15 ಮಂದಿಯನ್ನು ಸರಕಾರಿ ಉಚಿತ ಕ್ವಾರಂಟೈನ್ ಮತ್ತು 25 ಮಂದಿಯನ್ನು ಅವರ ಇಚ್ಛೆಯ ಖಾಸಗಿ ಲಾಡ್ಜ್/ಹೊಟೇಲಿನಲ್ಲಿ ಕ್ವಾರಂಟೈನ್‌ಗೊಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.

Comments