ಕಲಬುರಗಿಯಲ್ಲಿ ಕೊರೋನಾ ಸೋಂಕಿನಿಂದ ಮತ್ತೆ 4 ಜನ ಗುಣಮುಖಕಲಬುರಗಿ: ಕಲಬುರಗಿಯಲ್ಲಿ ಕೋರೋನಾ ಸೋಂಕಿನಿಂದ ಗುಣಮುಕ್ತರಾಗಿ ರವಿವಾರ ಮತ್ತೆ 4 ಜನರು ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಇದೂವರೆಗೆ ಕೊರೋನಾ‌ ಪೀಡಿತ 104ರಲ್ಲಿ 51 ಜನ ಗುಣಮುಖರಾಗಿದ್ದಾರೆ.

ಕಲಬುರಗಿ ನಗರದ ಮೋಮಿನಪುರ ಪ್ರದೇಶದ 20 ವರ್ಷದ ಯುವತಿ (P-588),
13 ವರ್ಷದ ಬಾಲಕಿ (P-602), 54 ವರ್ಷದ ಪುರುಷ (P-603) ಹಾಗೂ ಸಂತ್ರಾಸವಾಡಿ ಪ್ರದೇಶದ 22 ವರ್ಷದ ಯುವಕ (P-611) ಆಸ್ಪತ್ರೆಯಿಂದ‌ ಬಿಡುಗಡೆ ಹೊಂದಿದವರು.

Comments