ಮಂಗಳೂರಿನಲ್ಲಿ 3 ವರ್ಷದ ಮಗು, 11 ವರ್ಷದ ಬಾಲಕಿ ಸೇರಿದಂತೆ 11 ಮಂದಿಗೆ ಕೊರೊನಾ ದೃಢ


ಮಂಗಳೂರು; ದಕ್ಷಿಣ ಕನ್ನಡ ‌ಜಿಲ್ಲೆಯಲ್ಲಿ ಇಂದು 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಬಂದ 11 ಮಂದಿಗೆ ಕೊರೊನಾ ದೃಢಪಟ್ಟಿದ್ದು ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 81 ಕ್ಕೆ ಏರಿಕೆಯಾಗಿದೆ.
11 ಮಂದಿಯಲ್ಲಿ 7 ಮಂದಿ ಮಹಿಳೆಯರಿಗೆ 4 ಮಂದಿ ಪುರುಷರಿಗೆ ಕೊರೊನಾ ದೃಢಪಟ್ಟಿದೆ.
35 ವರ್ಷದ ಗಂಡು, 36 ವರ್ಷದ ಹೆಣ್ಣು, 46 ವರ್ಷದ ಗಂಡು, 11 ವರ್ಷದ ಬಾಲಕಿ, 59 ವರ್ಷದ ಮಹಿಳೆ, 3 ವರ್ಷದ ಹೆಣ್ಣು ಮಗು, 37 ವರ್ಷದ ಹೆಣ್ಣು, 45 ವರ್ಷದ ಹೆಣ್ಣು, 22 ವರ್ಷದ ಗಂಡು, 39 ವರ್ಷದ ಗಂಡು, 17 ವರ್ಷದ ಯುವತಿಗೆ ಕೊರೊನಾ ದೃಢಪಟ್ಟಿದೆ. ಇವರೆಲ್ಲರೂ ಮುಂಬಯಿನಿಂದ ಬಂದು ಕ್ವಾರಂಟೈನ್ ನಲ್ಲಿದ್ದು ಇದೀಗ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments