ಉಡುಪಿಯಲ್ಲಿ ಕೊರೊನಾ ಸ್ಪೋಟ: 27 ಜನರಿಗೆ ಸೋಂಕು ದೃಢಉಡುಪಿ : ಉಡುಪಿಯಲ್ಲಿ  27 ಮಂದಿಗೆ  ಇಂದು ಕೊರೊನಾ ಸೋಂಕು ದೃಢಪಟ್ಟಿದೆ.

ಇಂದು ಸೋಂಕು ಹೊರರಾಜ್ಯದಿಂದ ಬಂದವರಿಗೆ ಕಾಣಿಸಿಕೊಂಡಿದೆ.


 
 27 ಪ್ರಕರಣಗಳ ಪೈಕಿ 16 ಸೋಂಕಿತರು 10 ವರ್ಷಕ್ಕಿಂತ ಕೆಳಗಿನ ಮಕ್ಕಳಾಗಿದ್ದಾರೆ.
ಮಹಾರಾಷ್ಟ್ರದ ಮಲ್ಲಚಾಂದಿವಲ್ಲಿ, ಮುಂಬೈ, ಸಾಯಿಲ್, ಥಾಣೆ, ಪುಣೆ ಸೇರಿದಂತೆ, ತೆಲಂಗಾಣ, ಕೇರಳದಿಂದ ಬಂದವರಿಗೆ ಸೋಂಕು  ದೃಢಪಟ್ಟಿದೆ. ಉಡುಪಿ ಜಿಲ್ಲೆಗೆ ಸೇರಿದ ಇಬ್ಬರು ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದ 23, ತೆಲಂಗಾಣದಿಂದ 3, ಕೇರಳದಿಂದ ಆಗಮಿಸಿದ ಓರ್ವ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಇದರಲ್ಲಿ ಆರು ಮಂದಿ ಗಂಡಸರು, ಐದು ಮಂದಿ ಹೆಂಗಸರು, 16 ಮಕ್ಕಳಾಗಿದ್ದಾರೆ.

Comments