ಮಂಗಳೂರಿನಲ್ಲಿ ಪೈಪ್ಲೈನ್ ದುರಸ್ತಿ: ಮೇ 26ರಂದು ನಗರದ ವಿವಿಧೆಡೆ ನೀರು ಪೂರೈಕೆ ಸ್ಥಗಿತಮಂಗಳೂರು: ಪೈಪ್ ಲೈನ್ ದುರಸ್ತಿ ಹಿನ್ನೆಲೆಯಲ್ಲಿ ಮೇ 26 ರಂದು ನಗರದ ವಿವಿಧ ಕಡೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್ಎಲ್ಪಿಎಸ್ -1 18 ಎಂಜಿಡಿ ರೇಚಕ ಸ್ಥಾವರದ ಪಂಪಿಂಗ್ ಮಾಡುವ 750 ಎಂಎಂ ಅಶ್ವಶಕ್ತಿಯ ಮುಖ್ಯ ಕೊಳವೆ ಸೋರಿಕೆ ಉಂಟಾಗಿದ್ದು, ತುರ್ತಾಗಿ ದುರಸ್ತಿಗೊಳಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಮೇ 26 ರಂದು ಬೆಳಗ್ಗೆ 8ರಿಂದ ಮೇ 27ರಂದು ಬೆಳಗ್ಗೆ 8ರವರೆಗೆ 24 ಗಂಟೆ ಅವಧಿಯಲ್ಲಿ ಸುರತ್ಕಲ್, ಪಣಂಬೂರು, ಕುಳಾಯಿ, ಕಾನ, ಕಾಟಿಪಳ್ಳ, ಎನ್ಐಟಿಕೆ, ಸಸಿಹಿತ್ಲು, ಕಾರ್ಸ್ಟ್ರೀಟ್, ಕೊಟ್ಟಾರ, ಭಾಗಶಃ ಬೆಂದೂರು ಲೋ ಲೆವೆಲ್ ಪ್ರದೇಶಗಳಾದ ಕುದ್ರೋಳಿ ಫಿಶಿಂಗ್ ಹಾರ್ಬರ್, ಕೊಡಿಯಾಲ್ಬೈಲ್ ಮುಂತಾದ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಇಂಜಿನಿಯರ್  ತಿಳಿಸಿದ್ದಾರೆ.

Comments