ಜೂನ್ 1 ಕ್ಕೆ ಕೊರೊನಾ ನಿಗ್ರಹವಾಗಲು ಕುದ್ರೋಳಿ ದೇವಸ್ಥಾನದಲ್ಲಿ ಧನ್ವಂತರಿ ಹೋಮ


ಮಂಗಳೂರು: ಸರಕಾರದ ಆದೇಶದಂತೆ ಜೂನ್ 1ರಿಂದ ರಾಜ್ಯದ ದೇವಸ್ಥಾನಗಳು ತೆರೆಯುವ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಪೂರ್ವ
 ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಸಂಪೂರ್ಣ ಸ್ಯಾನಿಟೈಸೇಷನ್ ಸಿಂಪಡಿಸಿ ಸ್ವಚ್ಚತಾ ಕಾರ್ಯ ನಡೆಯುತ್ತಿದೆ.

ಅಲ್ಲದೆ ಮುಜರಾಯಿ ಇಲಾಖೆಯ ಎಲ್ಲಾ  ಸೂಚನೆಗಳನ್ನು ಪಾಲಿಸಲಾಗುತ್ತಿದ್ದು, ಜೂನ್ 1 ರಿಂದ ಭಕ್ತರ ಪ್ರವೇಶಕ್ಕೆ ಯಾವುದೇ ರೀತಿ ನಿರ್ಬಂಧ ಇರದಿದ್ದರೂ, ದೇವಾಲಯ ಪ್ರವೇಶಕ್ಕೆ ಮುನ್ನ  ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಲಿದೆ.  ಅಲ್ಲದೆ ಕೊರೋನಾ ಮಹಾಮಾರಿ ಶೀಘ್ರ ಶಮನವಾಗಲು ಜೂನ್ 1 ರಂದು ಮಂಗಳೂರಿನ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಧನ್ವಂತರಿ ಹೋಮ, ಶ್ರೀ ಗೋಕರ್ಣನಾಥ ದೇವರಿಗೆ
ಶತ ಸೀಯಾಳಾಭಿಷೇಕ ನಡೆಯಲಿದೆ‌.

Comments