ಮೇ 19: ಪತ್ರಕರ್ತರಿಗೆ ರೋಗ ನಿರೋಧಕಔಷಧಿ ವಿತರಣೆ, ಜಾಗೃತಿ ಕಾರ್ಯಕ್ರಮಮಂಗಳೂರು,:ಭಾರತೀಯ ಹೋಮಿಯೋಪತಿ ವೈದ್ಯರ ಸಂಘದ ಆಶ್ರಯದಲ್ಲಿ  ಪತ್ರಕರ್ತರಿಗೆ ರೋಗನಿರೋಧಕ ಔಷಧಿ ವಿತರಣೆ , ಸಾಂಕ್ರಾಮಿಕ ಮತ್ತು ಸೊಳ್ಳೆ ಗಳಿಂದ ಹರಡುವ  ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಮಂಗಳೂರು ಪತ್ರಿಕಾಭವನದಲ್ಲಿ ಮೇ 19 ರಂದು  ಬೆಳಗ್ಗೆ 11 ಗಂಟೆಗೆ  ನಡೆಯಲಿದೆ.
ಸಾಂಕ್ರಾಮಿಕ ರೋಗ ಕೋವಿಡ್ -19, ಮತ್ತು ಡೆಂಗ್ಯು ಮಲೇರಿಯಾ ಮತ್ತಿತರ ಸೊಳ್ಳೆಗಳಿಂದ ಹರಡುವ ರೋಗಗಳಿಂದ ಪಾರಾಗಲು ಕೈಗೊಳ್ಳಬೇಕಾದ ವಿಧಾನಗಳ ಬಗ್ಗೆ ತಜ್ಞ ವೈದ್ಯರು ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಿದ್ದಾರೆ.  ಭಾರತೀಯ ಹೋಮಿಯೋಪತಿ ವೈದ್ಯರ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಡಾ. ಪ್ರವೀಣ್ ಕುಮಾರ್ ರೈ,   ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣರಾಜ್ ಆಳ್ವ , ಮತ್ತು ಖ್ಯಾತ ತಜ್ಞ ವೈದ್ಯರಾದ ಡಾ. ಪ್ರಸನ್ನ ಕುಮಾರ್ , ಡಾ. ರಾಮಕೃಷ್ಣ  ರಾವ್ ,ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ, ದ.ಕ.ಜಿಲ್ಲಾ ಕಾರ್ಯ  ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ
 ನಿವಾಸ್  ನಾಯಕ್ ಇಂದಾಜೆ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಳೆದ ವರ್ಷ ದ.ಕ.ಜಿಲ್ಲೆಯಲ್ಲಿ 30ಕ್ಕೂ ಅಧಿಕ ಪತ್ರಕರ್ತರು ಡೆಂಗ್ಯುನಿಂದ ತೊಂದರೆ ಅನುಭವಿಸಿದ್ದರು. ಪತ್ರಕರ್ತರಿಗೆ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ರೋಗಗಳಿಂದ ಪಾರಾಗುವ  ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಗುವುದು.

Comments