ಬಾಗಲಕೋಟೆ ಜಿಲ್ಲೆಯ ಮತ್ತೆ 17 ಜನ ಕೋವಿಡ್‍ನಿಂದ ಗುಣಮುಖ


-------------------------------------------
ಬಾಗಲಕೋಟೆ: : ಜಿಲ್ಲೆಯಲ್ಲಿ ಮತ್ತೆ 17 ಜನ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಮಂಗಳವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಗುಣಮುಖರಾದವರ ಸಂಖ್ಯೆ 62ಕ್ಕೆ ಏರಿಕೆಯಾಗಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಒಂದೇ ದಿನ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೋವಿಡ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವುದನ್ನು ಕಂಡ ಜಿಲ್ಲಾಧಿಕಾರಿಗಳು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಜವಳಿ ಸೇರಿದಂತೆ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳನ್ನು ಕಾರ್ಯವನ್ನು ಶ್ಲಾಘಿಸಿದರು. ಕೋವಿಡ್‍ನಿಂದ ಗುಣಮುಖರಾಗಿ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿರುವವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಬೀಳ್ಕೊಟ್ಟರು. ಗುಣಮುಖರಾದವರು ಹೊರಗಡೆ ಸಂಚಾರ ಮಾಡದಂತೆ 14 ದಿನ ಮನೆಂiÀiಲ್ಲಿಯೇ ಇರುವಂತೆ ಸೂಚನೆ ನೀಡಲಾಯಿತು.
ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ 19 ವರ್ಷದ ಯುವತಿ ಪಿ-704, ಜಮಖಂಡಿಯ 22 ವರ್ಷದ ಯುವಕ ಪಿ-893, 17 ವರ್ಷದ ಬಾಲಕ ಪಿ-894, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸರಿತ್ತಿ ಗ್ರಾಮದ 32 ವರ್ಷದ ಪುರುಷ ಪಿ-892 ಸೇರಿದಂತೆ ಮುಧೋಳನ ಶ್ರೀನಗರದ 68 ವರ್ಷದ ಮಹಿಳೆ ಪಿ-605, 60 ವರ್ಷದ ಮಹಿಳೆ ಪಿ-606, ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ಸೋಂಕು ತಗಲಿದ್ದ 55 ವರ್ಷದ ಪುರುಷ ಪಿ-865 ಕೋವಿಡ್ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.
ಅದೇ ರೀತಿ ತಬ್ಲೀಘಿ ಜಮಾತೆ ನಂಟಿನಿಂದ ಕೋವಿಡ್ ಸೋಂಕು ತಗಲಿದ್ದ ಮುಧೋಳನ 16 ವರ್ಷದ ಬಾಲಕ ಪಿ-870, 14 ವರ್ಷದ ಬಾಲಕ ಪಿ-871, 33 ವರ್ಷದ ಪುರುಷ ಪಿ-872, 21 ವರ್ಷದ ಯುವಕ ಪಿ-873, 19 ವರ್ಷದ ಯುವಕರಾದ ಪಿ-874, ಪಿ-875, 34 ವರ್ಷದ ಪುರುಷ ಪಿ-876, 20 ವರ್ಷದ ಯುವಕ ಪಿ-896, 18 ವರ್ಷದ ಬಾಲಕ ಪಿ-897, 20 ವರ್ಷದ ಯುವಕ ಪಿ-899 ಸಹ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ.
ಪ್ರಾರಂಭದಲ್ಲಿ ಕೋವಿಡ್‍ನಿಂದ ಗುಣಮುಖರಾದವರು ಆಸ್ಪತ್ರೆಯಿಂದ ಹೊರಗೆ ಬರುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ ಬೋಳ್ಕೊಟ್ಟರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಜವಳಿ ಸೇರಿದಂತ ಇತರರು ಉಪಸ್ಥಿತರಿದ್ದರು.

Comments