ಮಂಗಳೂರಿನಲ್ಲಿ ಕೊರೊನಾ ಶಾಕ್: 16 ಮಂದಿಯಲ್ಲಿ ಕೊರೊನಾ ದೃಢ


ಮಂಗಳೂರು: ಮಂಗಳೂರಿನಲ್ಲಿ ಇಂದು ಈವರೆಗಿನ ಅತೀ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿ ಜಿಲ್ಲೆಯ ಜನತೆಗೆ ಶಾಕ್ ನೀಡಿದೆ. ದುಬೈ ಪ್ಲೈಟ್ ನಲ್ಲಿ ಬಂದವರು ಸೇರಿದಂತೆ  16  ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ  50  ಕ್ಕೆ ಏರಿಕೆಯಾಗಿದೆ.
ಇಂದು ದುಬೈ ನಿಂದ ಬಂದ  6  ವರ್ಷದ ಬಾಲಕ ಸೇರಿದಂತೆ  15  ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. ಒಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದವರಾಗಿದ್ದಾರೆ. ಇದರಲ್ಲಿ  12  ಮಂದಿ ಪುರುಷರು ಮತ್ತು 4  ಮಂದಿ ಮಹಿಳೆಯರು ಇದ್ದಾರೆ. ಈವರೆಗೆ  50  ಪ್ರಕರಣ ದೃಢಪಟ್ಟಿದ್ದು  ಇದರಲ್ಲಿ 16  ಮಂದಿ ಗುಣಮುಖರಾಗಿದ್ದಾರೆ. ಐವರು ಸಾವನ್ನಪ್ಪಿದ್ದು  29  ಮಂದಿ ಮಂಗಳೂರಿನ  ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Comments