ಬಾಗಲಕೋಟೆ: 1533 ಸ್ಯಾಂಪಲ್‍ಗಳ ವರದಿ ನಿರೀಕ್ಷೆಯಲ್ಲಿ



ಬಾಗಲಕೋಟೆ:: ಕಳೆದ 2-3 ದಿನಗಳಿಂದ ಕಳುಹಿಸಲಾದ ಒಟ್ಟು 1533 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಿಂದ ಕಳುಹಿಸಲಾಗಿದ್ದ 978 ಸ್ಯಾಂಪಲ್‍ಗಳ ವರದಿ ಬರಬೇಕಾಗಿದೆ. ಮತ್ತೆ ಹೊಸದಾಗಿ 555 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಬಾಕಿ 978 ಹಾಗೂ ಹೊಸ ಸ್ಯಾಂಪಲ್ 555 ಸೇರಿ ಒಟ್ಟು 1533 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 2343 ಜನರ ಮೇಲೆ ನಿಗಾ ವಹಿಸಲಾಗುತ್ತಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 7197 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 5557 ನೆಗಟಿವ್ ಪ್ರಕರಣ, 77 ಪಾಜಿಟಿವ್ ಪ್ರಕರಣ ಹಾಗೂ ಒಂದು ಮೃತ ಪ್ರಕರಣ ವರದಿಯಾಗಿರುತ್ತದೆ. ಕೋವಿಡ್-19 ದಿಂದ ಒಟ್ಟು 62 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 14 ಜನ ಕೋವಿಡ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇನ್ನು 6 ಕಂಟೈನ್‍ಮೆಂಟ್ ಝೋನ್‍ಗಳಿವೆ. ಇಲ್ಲಿವರೆಗೆ ಒಟ್ಟು 13 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. 14 ದಿನಗಳ ಕಾಲ ಇನ್‍ಸ್ಟಿಟ್ಯೂಶನ್ ಕ್ವಾಂರಂಟೈನ್‍ನಲ್ಲಿದ್ದ 399 ಜನ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಸ್ಥಾಪಿಸಲಾದ 9 ಚೆಕ್‍ಪೋಸ್ಟಗಳ ಪೈಕಿ 4 ಚೆಕ್ ಪೋಸ್ಟಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿವರೆಗೆ ಚೆಕ್‍ಪೋಸ್ಟಗಳ ಮೂಲಕ 54066 ವಾಹನಗಳ ತಪಾಸಣೆ ಹಾಗೂ 2,08,886 ಜನರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments