ಮಂಗಳೂರಿನಲ್ಲಿ ಇಂದು ಮೂರು ವರ್ಷದ ಮಗು ಸೇರಿದಂತೆ 12 ಮಂದಿ ಕೊರೊನಾ ಸೋಂಕಿತರು ಗುಣಮುಖಮಂಗಳೂರು; ಮಂಗಳೂರಿನಲ್ಲಿ ಇಂದು ಮೂರು ವರ್ಷದ ಮಗು ಸೇರಿದಂತೆ ಕೊರೊನಾ ಸೋಂಕಿತ 12 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
3 ಮತ್ತು 11 ವರ್ಷದ ಬಾಲಕಿ, 76, 71, 39,40, 44, 42,50 ವರ್ಷದ ಗಂಡಸು, 69,41,36 ವರ್ಷದ ಮಹಿಳೆ ಗುಣಮುಖರಾಗಿದ್ದಾರೆ. 
ಇದರಲ್ಲಿ ಗುಣಮುಖರಾದ 76 ವರ್ಷದ ಗಂಡಸು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ತೊಂದರೆ, ಕಾಲಿನ ಸೋಂಕು ಹಾಗೂ ಇತರ ತೀವ್ರ ಖಾಯಿಲೆಯಿಂದ ಬಳಲುತ್ತಿದ್ದು ಐಸಿಯುವಿಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ

Comments