ದಾವಣಗೆರೆ :ಇಂದು ಹೊಸದಾಗಿ 11 ಕೊರೊನಾ ಪಾಸಿಟಿವ್ ಪ್ರಕರಣ ವರದಿ : ಹೆಡ್ ಕಾನ್ಸ್‍ಟೇಬಲ್ ಸೇರಿದಂತೆ 15 ಗುಣಮುಖರಾದವರ ಬಿಡುಗಡೆ


ದಾವಣಗೆರೆ :
ದಾವಣಗೆರೆಯಲ್ಲಿ ಇಂದು 11 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಇವರೆಲ್ಲರೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗಿ ಸಂಖ್ಯೆ 2208 ಇವರು 47 ವರ್ಷದ ಮಹಿಳೆ ಆಗಿದ್ದು ಇವರು ತೀವ್ರ ಸ್ವರೂಪದ ಉಸಿರಾಟದ ತೊಂದರೆ ಇರುವ(SಂಖI) ಪ್ರಕರಣದವರಾಗಿದ್ದಾರೆ.
ರೋಗಿ ಸಂಖ್ಯೆ 2257 ಇವರು 28 ವರ್ಷದ ಮಹಿಳೆ ಆಗಿದ್ದು ರೋಗಿ ಸಂಖ್ಯೆ 933 ಇವರ ಸಂಪರ್ಕಿತರಾಗಿದ್ದಾರೆ. ರೋಗಿ ಸಂಖ್ಯೆ 2274 ಇವರು 55 ವರ್ಷದ ಮಹಿಳೆ ಯಾಗಿದ್ದು ಇವರು ಶೀತ, ಜ್ವರ(IಐI) ಪ್ರಕರಣದವರಾಗಿದ್ದಾರೆ.
ರೋಗಿ ಸಂಖ್ಯೆ 2275 ಇವರು 38 ವರ್ಷದ ಪುರುಷ, ರೋಗಿ ಸಂಖ್ಯೆ 2276 ಇವರು 9 ವರ್ಷದ ಬಾಲಕ, ರೋಗಿ ಸಂಖ್ಯೆ 2277 ಇವರು 36 ವರ್ಷದ ಮಹಿಳೆ, ರೋಗಿ ಸಂಖ್ಯೆ 2278 ಇವರು 17 ವರ್ಷದ ಬಾಲಕ ಇವರು ರೋಗಿ ಸಂಖ್ಯೆ 1378 ಇವರ ಸಂಪರ್ಕಿತರಾಗಿದ್ದಾರೆ.
ರೋಗಿ ಸಂಖ್ಯೆ 2279 63 ವರ್ಷದ ಮಹಿಳೆಯಾಗಿದ್ದು ಇವರು ರೋಗಿ ಸಂಖ್ಯೆ 627 ಇವರ ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ರೋಗಿ ಸಂಖ್ಯೆ 2280 ಇವರು 39 ವರ್ಷದ ಪುರುಷನಾಗಿದ್ದು ಇವರು ಗುಜರಾತ್ ನಿಂದ ಜಿಲ್ಲೆಗೆ ಬಂದವರಾಗಿದ್ದಾರೆ.
ರೋಗಿ ಸಂಖ್ಯೆ 2281 ಇವರು 9 ವರ್ಷದ ಬಾಲಕ ಹಾಗೂ ರೋಗಿ ಸಂಖ್ಯೆ 2282 ಇವರು 26 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 933 ಇವರ ಸಂಪರ್ಕಿತರಾಗಿದ್ದಾರೆ.
ಗುಣಮುಖರಾದ 15 ಜನರ ಬಿಡುಗಡೆ : ಇಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಹೆಡ್ ಕಾನ್ಸ್‍ಟೇಬಲ್ ಸೇರಿದಂತೆ ಕೊರೊನಾದಿಂದ ಗುಣಮುಖರಾದ 15 ಜನರನ್ನು ಐಜಿಪಿ ರವಿ.ಎಸ್, ಎಸ್‍ಪಿ ಹನುಮಂತರಾಯ, ಎಎಸ್‍ಪಿ ರಾಜೀವ್, ಎಡಿಸಿ ಪೂಜಾರ್ ಹಾಗೂ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಪುಷ್ಪ ಎರಚಿ, ಚಪ್ಪಾಳಿ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದರು. ಜಿಲ್ಲೆಯಲ್ಲಿ ಒಟ್ಟು 136 ಪ್ರಕರಣಗಳ ಪೈಕಿ 65 ಜನರು ಬಿಡುಗಡೆ ಹೊಂದಿದ್ದಾರೆ.

Comments