ಮಂಗಳೂರು ವಿಮಾನ ದುರಂತಕ್ಕೆ 10 ವರ್ಷ; ಅಗಲಿದವರ ಸಂಸ್ಮರಣೆಮಂಗಳೂರು: ಬಜ್ಪೆ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಮಹಾ ದುರಂತದಲ್ಲಿ ಮಡಿದವರ ಸ್ಮರಣಾರ್ಥ  ಇಂದು ಕೂಳೂರು- ತಣ್ಣೀರುಬಾವಿ ರಸ್ತೆಯಲ್ಲಿರುವ ಸ್ಮಾರಕ ಸ್ಥಳದಲ್ಲಿ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಸಂಸದ ನಳಿನ್ ಕುಮಾರ್ ಕಟೀಲ್, ಡಿಸಿಪಿ ಲಕ್ಷ್ಮಿ ಗಣೇಶ್ , ವಿಮಾನ ನಿಲ್ದಾಣ ಸಿಬ್ಬಂದಿಗಳು ವಿಮಾನ ದುರಂತದಲ್ಲಿ ಅಗಲಿದವರಿಗೆ  ಶೃದ್ದಾಂಜಲಿ ಸಮರ್ಪಿಸಿದರು. 
2010 ಮೇ 22 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ದುಬೈ ವಿಮಾನ ರನ್ ವೇ ಯಲ್ಲಿ ನಿಲ್ಲದೆ ಸೂಚನಗೋಪುರಕ್ಕೆ ಢಿಕ್ಕಿ ಹೊಡೆದು ಪ್ರಪಾತಕ್ಕೆ ಬಿದ್ದಿತ್ತು .ಘಟನೆಯಲ್ಲಿ 158 ಮಂದಿ ಸಾವನ್ನಪ್ಪಿ, ಎಂಟು ಜನ  ಬದುಕುಳಿದಿದ್ದರು.

Comments