ಕಲಬುರಗಿಯಲ್ಲಿ ಹೊಸ 10 ಕೊರೋನಾ ಸೋಂಕು ಪತ್ತೆಕಲಬುರಗಿ: ಜಿಲ್ಲೆಯಲ್ಲಿ ಇತ್ತೀಚೆಗೆ ಮುಂಬೈನಿಂದ ವಲಸೆ ಬಂದ ಕಾರ್ಮಿಕರು ಸೇರಿ ರವಿವಾರ ಹೊಸ 10 ಕೊರೋನಾ ಸೋಂಕು‌ ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ತೆ 104ಕ್ಕೆ ಏರಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ರೋಜಾ‌ (ಬಿ) ಪ್ರದೇಶದ 35 ವರ್ಷದ ಮಹಿಳೆ (P-1129-ಸೋಂಕಿನ ಜಾಲ ಪತ್ತೆ‌ ಕಾರ್ಯ ಮುಂದುವೆರೆದಿದೆ), ಕಂಟೇನ್ ಮೆಂಟ್ ಝೋನ್ ಸಂಪರ್ಕಕ್ಕೆ‌ ಬಂದ ವಿಶಾಲ ನಗರದ 55 ವರ್ಷದ ಪುರುಷ (P-1130), ರೋಗಿ ಸಂಖ್ಯೆ-927 ಸಂಪರ್ಕಕ್ಕೆ ಬಂದ ಕಲಬುರಗಿಯ ಮೋಮಿನಪುರದ ಸದರ ಮೋಹಲ್ಲಾ ಪ್ರದೇಶದ 55 ವರ್ಷದ ಪುರುಷ (P-1132) ಮತ್ತು 50 ವರ್ಷದ ಮಹಿಳೆಗೆ (P-1134) ಕೋವಿಡ್-19 ಸೋಂಕು ತಗುಲಿದೆ.

ಮಹಾರಾಷ್ಟ್ರದ ಮುಂಬೈ ಪ್ರವಾಸ ಹಿನ್ನೆಲೆಯಲ್ಲಿ ಚಿಂಚೋಳಿ ತಾಲೂಕಿನ ಕೊಂಚಾವರಂನ ಸಂಗಾಪುರ ತಾಂಡಾ‌ ಮೂಲದ 10 ವರ್ಷದ ಬಾಲಕ (P-1131), ಕಾಳಗಿ ತಾಲೂಕಿನ ಅರಣಕಲ್ ತಾಂಡಾ‌ ಮೂಲದ  36 ವರ್ಷದ ಯುವಕ (P-1133) ಮತ್ತು 7 ವರ್ಷದ ಬಾಲಕನಿಗೂ (P-1136) ಮಹಾಮಾರಿ ಸೋಂಕು ಅಂಟುಕೊಂಡಿದೆ.

ಇನ್ನೂ ಮುಂಬೈ ಪ್ರವಾಸ ಹಿನ್ನೆಲೆಯಿಂದ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಆಳಂದ ತಾಲೂಕಿನ ಧಂಗಾಪೂರ ಮೂಲದ 13 ವರ್ಷದ ಬಾಲಕ (P-1135), 40 ವರ್ಷದ ಪುರುಷ (P-1137) ಹಾಗೂ  55 ವರ್ಷದ ಪುರುಷ (P-1138) ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಮುಂಬೈ ಪ್ರವಾಸ ಹಿನ್ನೆಲೆಯ ಎಲ್ಲಾ ಕೊರೋನಾ ಸೋಂಕಿತರನ್ನು ಕ್ವಾರಂಟೈನ್ ಸೆಂಟರ್‌ನಿಂದ ಕೋವಿಡ್-19 ಆಸ್ಪತ್ರೆಗೆ ಈಗಾಗಲೆ ದಾಖಲಿಸಲಾಗಿದೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ‌ ಪೀಡಿತ 104 ರೋಗಿಗಳಲ್ಲಿ 7 ಜನ ನಿಧನ‌ರಾಗಿದ್ದು, 51 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 46 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ.

Comments