ಗುಲಾಮಗಿರಿ: ಎನ್ಆರ್‌ಐ ಪತ್ನಿಗೆ 11 ವರ್ಷ ಜೈಲುಶಿಕ್ಷೆ |
ಪ್ರಕಟಿಸಿದ ದಿನಾಂಕ : 2008-06-28
ನ್ಯೂಯಾರ್ಕ್, ಶನಿವಾರ, 28 ಜೂನ್ 2008 ಮನೆ ಕೆಲಸದಾಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವ ಆರೋಪದಲ್ಲಿ ಭಾರತೀಯ ಅಮೆರಿಕನ್ ಮಿಲಿಯಾಧಿಪತಿಯ ಪತ್ನಿಗೆ ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯವು 11 ವರ್ಷಗಳ ಜೈಲು ಶಿಕ್ಷೆ ಮತ್ತು 25,000 ಡಾಲರ್ ದಂಡವನ್ನು ವಿಧಿಸಿದೆ.
ಇಂಡೋನೋಶಿಯಾ ಮೂಲದ ಮನೆಕೆಲಸದಾಳು ಮನೆಯಿಂದ ಪಲಾಯನ ಮಾಡಿ ಪೊಲೀಸರಿಗೆ ದೂರು ನೀಡಿದ ನಂತರ, ಅಂತಾರಾಷ್ಟ್ರೀಯ ಸುಗಂಧದ್ರವ್ಯ ನಿರ್ಮಾಪಕರಾದ 46 ವರ್ಷದ ವರ್ಷಾ ಮತ್ತು ಆಕೆಯ ಪತಿ ಮಹೇಂದ್ರ ಮುರಲೀಧರ್ ಶಬಾನಿ ಅವರನ್ನು ಡಿಸೆಂಬರ್ 2007ರಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.
ಅನೈಚ್ಛಿತ ಗುಲಾಮಗಿರಿ, ಒಳಸಂಚು ಮತ್ತು ಬಲವಂತದ ದುಡಿತ ಇತ್ಯಾದಿ ದೂರುಗಳ ಆಧಾರದಲ್ಲಿ ನ್ಯಾಯಾಲಯವು ಈ ಶಿಕ್ಷೆಯನ್ನು ನೀಡಿದೆ.
ಕೊಡೆ, ಹಿಡಿಸೂಡಿ, ಚೂರಿ ಮುಂತಾದವುಗಳಿಂದ ಕೆಲಸದಾಳುವಿಗೆ ದಂಪತಿಗಳು ದೈಹಿಕ ಶಿಕ್ಷೆ ನೀಡಿರುವುದಾಗಿ ತಿಳಿದುಬಂದಿದ್ದು, ಏನೇ ಆದರೂ, ವರ್ಷಾ ಅವರ ಈ ವರ್ತನೆಗೆ ಅವರ ಆನಾರೋಗ್ಯವೇ ಕಾರಣ ಎಂದು ಶಾಬಾನಿ ಅವರ ವಕೀಲರು ವಾದಿಸಿದ್ದಾರೆ.
ವರ್ಷಾ ಮುಖ್ಯ ಅಪರಾಧಿಯೆಂದು ಸಾಬೀತಾಗಿರುವುದರೊಂದಿಗೆ, ಮುಂದಿನ ಶುಕ್ರವಾರ ಹೊರಬೀಳಲಿರುವ ತೀರ್ಪಿನಲ್ಲಿ 51 ವರ್ಷದ ಮಹೇಂದ್ರ ಶಾಬಾನಿ ಕೂಡಾ ಶಿಕ್ಷೆಗೊಳಪಡುವ ಸಾಧ್ಯತೆಯಿದೆ.
ಅಮೆರಿಕನ್ ಪ್ರಾದೇಶಿಕ ನೌಕರರ ಪಂಗಡಗಳ ವಿಸ್ತೃತ ಪ್ರತಿಭಟನೆಯ ಮುಂದಾಗಿ ಈ ದಂಪತಿಗಳನ್ನು ಕಳೆದ ವರ್ಷ ತಪ್ಪಿತಸ್ಥರೆಂದು ನಿರ್ಣಯಿಸಲಾಗಿತ್ತು.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-28
|
|
|