ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್: ಅತಿನಿರೀಕ್ಷಿತ ಕುವೈಟ್ - ಮಂಗಳೂರು ನೇರ ವಿಮಾನಯಾನ ಜುಲೈ 17 ರಿಂದ

ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರಕಟಣೆ : ವಾರದೊಳಗೆ ಆಲ್ ಲೈನ್ ಸೇವೆ ಪ್ರಾರಂಭ

ಕುವೈಟ್, ಜೂನ್ 27: ಬಹುನಿರೀಕ್ಷಿತ ಕುವೈಟ್ ಮಂಗಳೂರು ನೇರ ವಿಮಾನಯಾನ ಸರಿಸುಮಾರಾಗಿ ಖಚಿತವಾಗಿದ್ದು ಜುಲೈ 17  ರಿಂದ ಪ್ರಾರಂಭವಾಗಲಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.  ಈ ಮಾರ್ಗದ ಯಾನಕ್ಕಾಗಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದು ಸುಮಾರು ಒಂದು ವರದೊಳಕ್ಕೆ ಆನ್ ಲೈನ್ ಸೇವೆಯಲ್ಲಿ ಕುವೈಟ್ ಯಾನದ ವಿವರಗಳನ್ನು ಅಳವಡಿಸಲಾಗುವುದು.

ಪ್ರಾರಂಭಿಕ ಅವಧಿಯಲ್ಲಿ ಪ್ರತಿವಾರದಲ್ಲಿ ಎರೆಡು ಯಾನಗಳನ್ನು ಆಯೋಜಿಸಲಾಗಿದ್ದು ಭಾನುವಾರ ಮತ್ತು ಗುರುವಾರಗಳಂದು ಮಸ್ಕತ್ ಮೂಲಕ ಮಂಗಳೂರಿಗೆ ತೆರಳಲಿವೆ. 

ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಲವು ಹೊಸ ವಿಮಾನಗಳನ್ನು ಖರೀದಿಸಿದ್ದು ಜೂನ್ ೨೩ ರಂದು ಆಗಮಿಸಿದ ಹೊಸ ವಿಮಾನದಿಂದ ಕುವೈಟ್ - ಮಂಗಳೂರು ಯಾನ ಸುಗಮವಾಗಿದೆ.  ವಿಮಾನ ಚಿಕ್ಕದಾದುದರಿಂದ ಮಸ್ಕತ್ ನಗರದಲ್ಲಿ ಇಂಧನ ತುಂಬಿಕೊಳ್ಳಬೇಕಾದ ಅನಿವಾರ್ಯತೆ ಒಂದು ನಿಲುಗಡೆಗೆ ಒಳಪಟ್ಟಿದೆ.  ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಅವಲಂಬಿಸಿ ದೊಡ್ಡ ವಿಮಾನ ಹಾಗೂ ಹೆಚ್ಚಿನ ಯಾನಗಳನ್ನು ಪ್ರಾರಂಭಿಸಲಾಗುವುದು ಎಂದು ಏರ್ ಇಂಡಿಯಾ  ಎಕ್ಸ್ ಪ್ರೆಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂಲಕ ಮುಂಬೈ, ಗೋವಾ ಮೊದಲಾದ ನಿಲ್ದಾಣಗಳ ಮುಖಾಂತರ ತಮ್ಮ ಊರುಗಳಿಗೆ ತಲುಪಲು ಪಡುವ ಪಾಡು ತಪ್ಪಿದಂತಾಗಿದೆ.

ಈ ಮಾರ್ಗದ ವಿವರಗಳು ಇಂತಿವೆ:
ಫ್ಲೈಟ್ ಸಂಖ್ಯೆ:IX 389 / IX 390

ಕೊಚಿನ್ ನಿಂದ ಮಂಗಳೂರಿಗೆ ಆಗಮನ ಸಮಯ : ಸಂಜೆ 6:50
ಮಂಗಳೂರಿನಿಂದ ಮಸ್ಕತ್ ಮೂಲಕ ಕುವೈಟಿಗೆ : ಸಂಜೆ 7:35

ಕುವೈಟಿನಿಂದ ಮಸ್ಕತ್ ಮಾರ್ಗವಾಗಿ ಮಂಗಳೂರಿಗೆ : ಮರುದಿನ ೦೦:೦೫ ಕ್ಕೆ

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮಂಜೇಶ್ವರ ಮೋಹನದಾಸ್ ಕಾಮತ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-27


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri