ಜಗತ್ತಿನಲ್ಲಿ ಭಾರತದ ವಿದ್ಯಾರ್ಥಿಗಳೇ ಬೆಸ್ಟ್:ಆಕ್ಸ್‌ಫರ್ಡ್ ವಿವಿ |
ಪ್ರಕಟಿಸಿದ ದಿನಾಂಕ : 2008-06-23
ಆಕ್ಸ್‌ಫರ್ಡ್, ಜೂ.೨೨.ವಿದ್ಯಾಭ್ಯಾಸದಲ್ಲಿ ಭಾರತೀಯ ವಿದ್ಯಾರ್ಥಿಗಳು ಜಗತ್ತಿನಲ್ಲಿಯೇ ಅತ್ಯುತ್ತಮರು ಎಂದು ಜಗತ್ತಿನ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಆಕ್ಸ್‌ಫರ್ಡ್ ವಿವಿಯ ಕುಲಪತಿ ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ, ಇನ್ನಷ್ಟು ವಿದ್ಯಾರ್ಥಿಗಳು ಆಕ್ಸ್‌ಫರ್ಡ್‌ಗೆ ಬಂದು ಸೇರುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ವಿವಿ ಕುಲಪತಿ ಕ್ರಿಸ್ ಪ್ಯಾಟನ್ ತಿಳಿಸಿದ್ದಾರೆ.
ಹಾಲಿ ವಿವಿಯಲ್ಲಿ 257 ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆಕ್ಸ್‌ಫರ್ಡ್‌ನಲ್ಲಿ ವ್ಯಾಸಂಗ ಮಾಡಿದವರ ಪೈಕಿ ಪ್ರಧಾನಿ ಮನಮೋಹನ್‌ಸಿಂಗ್, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮುಂತಾದವರು ಸೇರಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಪಿಟಿಐ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-23
|
|
|