ಮದೀನಾ ನಗರದಲ್ಲಿ ನೀರಿನ ಆಭಾವ : ದುಪ್ಪಟ್ಟಾದ ಟ್ಯಾಂಕರ್ ನೀರಿನ ಬೆಲೆ |
ಪ್ರಕಟಿಸಿದ ದಿನಾಂಕ : 2008-06-20
ನೀರಿಲ್ಲದ ಬಗ್ಗೆ ನಿವಾಸಿಗಳಿಂದ ದೂರುಗಳ ಮಹಾಪೂರ
ಮದೀನಾ, ಜೂನ್ 20: ತಾಂತ್ರಿಕ ದೋಷಗಳಿಂದ ನಗರದ ಹಲವು ಬಡಾವಣೆಗಳಲ್ಲಿ ನೀರಿನ ಪೂರೈಕೆ ಬಾಧಿತವಾಗಿದ್ದು ನಾಗರಿಕರು ಅತೀವ ತೊಂದರೆಗೊಳಗಾಗಿದ್ದಾರೆ. ಕಿಂಗ್ ಅಬ್ದುಲ್ ಅಜೀಜ್ ರಸ್ತೆಯ ಬಳಿಯಿರುವ ಅಲ್ ಅರೀಧ್ ಬಡಾವಣೆ ಅತಿಹೆಚ್ಚಿನ ತೊಂದರೆಗೊಳಗಾಗಿದೆ. ನೀರಿಲ್ಲದೇ ಟ್ಯಾಂಕರ್ ನೀರನ್ನು ತರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ನಿವಾಸಿಗಳ ಬೇಡಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ಟ್ಯಾಂಕರ್ ಸಂಸ್ಥೆಗಳು ನೀರಿನ ಬೆಲೆಯನ್ನು ನೂರು ರಿಯಾಲ್ ಪ್ರತಿ ಟ್ಯಾಂಕರಿಗೆ ಇದ್ದಿದ್ದನ್ನು ನೇರ ಇನ್ನೂರು ರಿಯಾಲ್ ಗಳಿಗೆ ಏರಿಸಿವೆ.
ಈ ನೀರಿನ ಬವಣೆ ತಾತ್ಕಾಲಿಕವಾಗಿದ್ದು ನೀರು ಪೂರೈಕೆಯನ್ನು ಮರುಪೂರೈಸಲು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರದ ನೀರು ಸರಬರಾಜು ಇಲಾಖೆಯ ಮುಖ್ಯಸ್ಥರಾದ ಅಹ್ಮದ್ ಅಲ್ ತೈಹಾನಿಯವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಒಕಾಜ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-20
|
|
|