|
|
|
ರಾಮಕ್ಷತ್ರಿಯ ಸಂಘ, ಕುವೈಟ್ : ಸಚಿವ, ಶಾಸಕದ್ವಯರಿಗೆ ಅಭಿನಂದನೆ |
ಪ್ರಕಟಿಸಿದ ದಿನಾಂಕ : 2008-06-19
ರಾಮಕ್ಷತ್ರಿಯ ಸಮಾಜದ ಮುಖಂಡರು, ಹಿರಿಯ ಧುರೀಣರು, ರಾಜಕೀಯ ನೇತಾರರುಗಳಾಗಿದ್ದು, ಇತ್ತೀಚೆಗೆ ನೆಡೆದ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷ ದಿಂದ ಸ್ಪರ್ಧಿಸಿ, ಬೈಂದೂರು ಕ್ಷೇತ್ರದಿಂದ ಆರಿಸಿ ಬಂದು ಶಾಸಕರಾದ ಶ್ರೀಯುತ ಲಕ್ಷೀನಾರಾಯಣರವರಿಗೆ ಹಾಗೂ ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕರಾಗಿ ಆರಿಸಿ ಬಂದು, ಮೀನುಗಾರಿಕೆ, ಬಂದರು, ಸಣ್ಣ ಉಳಿತಾಯ ಖಾತೆ ಸಚಿವರು ಹಾಗೂ ಮಂಗಳೂರು, ಕೊಡಗು ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ, ಶ್ರೀಯುತ ಕೃಷ್ಣ ಪಾಲೇಮಾರ್ ರವರಿಗೆ ರಾಮಕ್ಷತ್ರಿಯ ಸಂಘ, ಕುವೈಟ್ (ಖಏ Sಚಿಟಿghಚಿ,ಏuತಿಚಿiಣ)ಇದರ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಇವರ ಆಡಳಿತಾವದಿಯಲ್ಲಿ, ಕ್ಷೇತ್ರದ ಹಾಗೂ ರಾಜ್ಯದ ಜನತೆಯ ಏಳಿಗೆಗೆ ಮತ್ತು ರಾಮಕ್ಷತ್ರಿಯ ಸಮಾಜ ಭಾಂದವರ ಆಶೋತ್ತರಗಳಿಗೆ ಸ್ಪಂದಿಸುವ ಸಲುವಾಗಿ ಮನವಿ ನೀಡುವ ಬಗ್ಗೆ, ನಿರ್ಣಯ ಕೈಗೊಳ್ಳಲಾಯಿತು. ಅಭಿನಂದನಾ ಸೂಚನಾ ಸಭೆಯಲ್ಲಿ, ಆಡಳಿತ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.
ನಿಕಟಪೂರ್ವ ಅಧ್ಯಕ್ಷ ಸುರೇಶ್ ಶ್ಯಾಮ್‌ರಾವ್ ನೇರಂಬಳ್ಳಿ ಇವರು ಶಾಸಕ, ಸಚಿವರ ಬಗ್ಗೆ ವಿವರಗಳನ್ನು ತಿಳಿಸಿದರು. ಕಾರ್ಯದರ್ಶಿ ಕಿರಣ್ ನಾಯ್ಕ್ ಸಭೆಯನ್ನು ಆಯೋಜಿಸಿದ್ದರು.
ವರದಿಯ ವಿವರಗಳು |
 |
ಕೃಪೆ : ಮೋಹನ್ ದಾಸ್ ಕಾಮತ್ ಮಂಜೇಶ್ವರ,ಕುವೈತ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-19
|
|
|
|
|