ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಭಾರತೀಯ ಸಾಂಸ್ಕೃತಿಕ ಕ್ಲಬ್ ಸಂಗೀತ ಸ್ಪರ್ಧೆ-೨೦೦೭: ಭರ್ಜರಿ ಯಶಸ್ಸು

ಮಸ್ಕತ್, ಡಿಸೆಂಬರ್ ೧೪: ಮಸ್ಕತ್ ಭಾರತೀಯ ಸಾಂಸ್ಕೃತಿಕ ಕ್ಲಬ್ ಆಯೋಜಿಸಿದ್ದ ಸಂಗೀತ ಸ್ಪರ್ಧೆ-೨೦೦೭ ಯಲ್ಲಿ ಆಗಾಧ ಪ್ರಮಾಣದಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ನವೆಂಬರ್ ೨೨ರಿಂದ ತೊಡಗಿದ್ದ ಸಂಗೀತ ಸ್ಪರ್ಧೆಯಲ್ಲಿ ೩೧೫ ಸ್ಪರ್ಧೆಗಳು ಭಾಗವಹಿಸಿದ್ದು ೭೭ ಸ್ಪರ್ಧಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದರು. ಅಂತಿಮ ಸುತ್ತು ನಾಲ್ಕು ವಿಭಾಗಗಳಲ್ಲಿ ವಯೋಮಾನಕ್ಕನುಗುಣವಾಗಿ ನಡೆಸಲಾಯಿತು.

ಇತ್ತೀಚೆಗೆ ನಡೆದ ಅಂತಿಮಸ್ಪರ್ಧೆಯಲ್ಲಿ ಒಮಾನಿನಲ್ಲಿ ಭಾರತದ ರಾಯಭಾರಿಯಾಗಿರುವ ಅನಿಲ್ ವಾಧ್ವಾ ಮುಖ್ಯ ಅತಿಥಿಗಳಾಗಿದ್ದರು. ಪ್ರಮುಖ ಗಾಯಕರಾದ ಪದ್ಮಭೂಷಣ ಡಾ. ಕೆ.ಜೆ. ಏಸುದಾಸ್ ಸಹಾ ಇನ್ನೊಬ್ಬ ಪ್ರಮುಖ ಅತಿಥಿಯಾಗಿದ್ದರು. ಅರೀಜ್ ವೆಜಿಟೆಬಲ್ ಆಯಿಲ್ ಅಂಡ್ ಡೆರೈವೇಟೀಸ್ ಸಂಸ್ಥೆಯ ನಿರ್ದೇಶಕರಾದ  ಪ್ರೇಮ್ ಮೇಕರ್,  ಕಿರಣ್ ಅಶರ್ ಹಾಗೂ ಕಣಕ್ ಖಿಮ್ಜಿ ಸಹಿತ ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಸ್ವಾಗತ ಭಾಷಣ ಹಾಗೂ ಇತರ ಕಾರ್ಯಕ್ರಮಗಳ ಬಳಿಕ ನಡೆದ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಮೆರೆದರು. ಡಾ. ಕೆ.ಜೆ. ಏಸುದಾಸ್ ಅವರು ಉದಯೋನ್ಮುಖ ಗಾಯಕರಿಗೆ ತಮ್ಮ ಧ್ವನಿಯನ್ನು ಹೇಗೆ ಕಾಪಾಡಿಕೊಂಡು ಬರಬೇಕೆಂಬ ಹಿತವಚನ ನೀಡಿದರು. ಬಳಿಕ ವಿಜೇತರಿಗೆ ಬಹುಮಾನಗಳನ್ನು ಮತ್ತು ತೀರ್ಪುಗಾರರಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಿದರು.

ವಿಜೇತರು:

ಶಾಸ್ತ್ರೀಯ ಗಾಯನ:(೫-೮ ವರ್ಶಗಳು): ಜಿ. ಸುಭೀಕ್ಶಾ ರಾವ್ (ವಿಜೇತೆ); ಚರ್ಮಿ ರಾಜನ್ (ಎರಡನೆಯ ಸ್ಥಾನ)
ಶಾಸ್ತ್ರೀಯ ಗಾಯನ:(೯-೧೨ವರ್ಶಗಳು): ಶ್ರೇಯ ಶ್ರೀರಾಮ(ವಿಜೇತೆ); ಮಾಳ್ವಿಕಾ ಮೆನನ್ (ಎರಡನೆಯ ಸ್ಥಾನ); ಅರ್ಚನಾ ಮುರಳಿ (ಮೂರನೆಯ ಸ್ಥಾನ)
ಶಾಸ್ತ್ರೀಯ ಗಾಯನ:(೧೩-೧೭ವರ್ಶಗಳು): ಜನನಿ ರಾಮಕೃಷ್ಣನ್(ವಿಜೇತೆ); ಪ್ರಿಯಾ ಪೈ (ಎರಡನೆಯ ಸ್ಥಾನ); ಅಶ್ವಥಿ ಮೆನನ್ (ಮೂರನೆಯ ಸ್ಥಾನ)

ವಾದ್ಯವಾದನೆ: (೧೩-೧೭ ವರ್ಷಗಳು): ರಾಹುಲ್ ರಾಜನ್ (ವಿಜೇತ); ಆಶೀಶ್ ರಾವ್ (ಎರಡನೆಯ ಸ್ಥಾನ)

ತಾಂತಿವಾದ್ಯ: (೧೩-೧೭ ವರ್ಷಗಳು): ಅಕ್ಷಯ್ ಗಣಪತಿ (ವಿಜೇತ); ಆದತಿ ಎಸ್. ಐಯರ್ (ಎರಡನೆಯ ಸ್ಥಾನ)

ಲಘು ಶಾಸ್ತ್ರೀಯ ಗಾಯನ: (೫-೮ ವರ್ಷಗಳು) :ಸಾಕ್ಷಿ ಭಾಗವತ್ (ವಿಜೇತೆ); ಫಾತಿಮ ಸಿದ್ದಿಕ್ (ಎರಡನೆಯ ಸ್ಥಾನ)

ಲಘು ಶಾಸ್ತ್ರೀಯ ಗಾಯನ: (೯-೧೨ ವರ್ಷಗಳು) :ರಿತಿಕಾ ನಾಯರ್(ವಿಜೇತೆ); ಅಲೀನಾ ಮೇರಿ ಜ್ಯೂಡ್(ಎರಡನೆಯ ಸ್ಥಾನ); ಪ್ರಿಯದರ್ಶಿನಿ ಅಶೋಕ್ (ಮೂರನೆಯ ಸ್ಥಾನ)

ಲಘು ಶಾಸ್ತ್ರೀಯ ಗಾಯನ: (೧೩-೧೭ ವರ್ಷಗಳು) :ಶರಣ್ಯ ರವಿಚಂದ್ರನ್(ವಿಜೇತೆ); ಅಮ್ಮು ಜಿ.ವಿ.(ಎರಡನೆಯ ಸ್ಥಾನ); ಸಂಜನಾ ಮೋಹನದಾಸ್ (ಮೂರನೆಯ ಸ್ಥಾನ)

ಲಘು ಶಾಸ್ತ್ರೀಯ ಗಾಯನ: (೧೮ವರ್ಷ ಮೇಲ್ಪಟ್ಟು) :ಸಿಜೇಶ್ ರಾಧಾಕೃಶ್ಣನ್(ಪ್ರಥಮ); ಇಂದ್ರಾಣಿ ಅಧಿಕಾರಿ(ಎರಡನೆಯ ಸ್ಥಾನ)

ಮುಕ್ತ ಯುಗಳಗಾನ: ಅಮ್ಮು ಜಿ.ವಿ./ ಸೂರಜ್ ಗೋಪಿನಾಥ್(ಪ್ರಥಮ); ಪಾರ್ವತಿ ನಂದಕುಮಾರ್/ಮಾಳವಿಕಾ ಮೆನನ್.(ಎರಡನೆಯ ಸ್ಥಾನ)

ಮುಕ್ತ ವಿಭಾಗ: ಸೂರ್ಯಮಾನಸಂ (ಪ್ರಥಮ ಸ್ಥಾನ) ಬೆಂಗಾಳಿ ಪರಿಶದ್ (ಎರಡನೆಯ ಸ್ಥಾನ)

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-14


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri