ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟಿನಲ್ಲಿ ಭಾರತೀಯ ಕಾರ್ಮಿಕರ ಪ್ರತಿಭಟನೆ

ಕುವೈಟ್, ಡಿಸೆಂಬರ್ ೧೪: ಸುಮಾರು ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾರತೀಯ ಕಾರ್ಮಿಕರು ಬುಧವಾರದಂದು ಭಾರತೀಯ ದೂತಾವಸದೆದುರು ಪ್ರತಿಭಟನೆ ನಡೆಸಿದರು.  ಎರೆಡು ತಿಂಗಳ ಹಿಂದೆ ವೇತನ ನೀಡದೇ ಇರುವ, ಕಾನೂನು ಮುರಿದಿರುವ ಮತ್ತು ಇತರ ಆಪಾದನೆಗಳನ್ನು ಹೊರಿಸಿ ಕಾರ್ಮಿಕರ ನಿಯೋಗವು ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ವಿರುದ್ಧ ದೂರು ನೀಡಿದ್ದರು.  ಈ ದೂರಿನಿಂದ ಉದ್ರಿಕ್ತಗೊಂಡ ಸಂಸ್ಥೆಯ ಅಧಿಕಾರಿಗಳು ಪೋಲೀಸರಿಗೆ ದೂರು ನೀಡಿ ಕಾರ್ಮಿಕರನ್ನು ಬಂಧಿಸಲು  ಆಜ್ಞೆ ನೀಡಿದ್ದರು. ಆ ಪ್ರಕಾರ ಮಂಗಳವಾರ ನಾಲ್ವರು ಪೋಲಿಸರು ಕಾರ್ಮಿಕರ ವಸತಿಸ್ಥಳದ ಮೇಲೆ ಧಾಳಿನಡೆಸಿ ಮನಬಂದಂತೆ ಕಾರ್ಮಿಕರನ್ನು ಥಳಿಸಿ ೨೯ ಭಾರತೀಯರನ್ನು ಬಂಧಿಸಿದ್ದಾರೆ. ಸೇಡು ತೀರಿಸಿಕೊಳ್ಳುವ ಸಂಸ್ಥೆಯ ಈ ಮನೋಭಾವದಿಂದ ನಡೆದ ಈ ಧಾಳಿಯ ವಿರುದ್ಧ ಕಾರ್ಮಿಕರ ನಿಯೋಗವು ಭಾರತೀಯ ದೂತಾವಾಸದ ಎದುರು ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂತಾವಾಸವನ್ನು ಒತ್ತಾಯಿಸಿದ್ದಾರೆ. ಇವರ ದೂರನ್ನು ಆಲಿಸಿದ ದೂತಾವಾಸದ ಅಧಿಕಾರಿಗಳು ಸಂಸ್ಥೆಯ ವಿರುದ್ಧ ಕಾರ್ಮಿಕ ಸಚಿವಾಲಯದಲ್ಲಿ ದೂರು ಸಲ್ಲಿಸಿದೆ.


ಹಲವರಿಗೆ ಒಂದು ವರ್ಷದಿಂದ ವೇತನ ನೀಡದೇ ಇರುವುದು, ಉತ್ತಮ ವಸತಿ ಸೌಲಭ್ಯ ಒದಗಿಸದೇ ಇರುವುದು, ಸೂಕ್ತ ವಸತಿ ಒದಗಿಸದೇ ಇದ್ದುದರಿಂದ ದುಬಾರಿ ಬಾಡಿಗೆ ಕೊಟ್ಟು ಮನೆಯೊಂದನ್ನು ಬಾಡಿಗೆಗೆ ಕೊಳ್ಳಬೇಕಾಗಿರುವುದು ಮೊದಲಾದ ಹಲವಾರು ಆರೋಪಗಳಿವೆ.

ಈ ಕಾರ್ಮಿಕರಲ್ಲಿ  ಹಲವರು ಅವಧಿ ಮುಗಿದ ರೆಸಿಡೆನ್ಸಿ ಪರ್ಮಿಟ್ ಪತ್ರಗಳನ್ನು ಹೊಂದಿರುವರೆಂದೂ, ಹಲವರು ಸಂಸ್ಥೆಗೆ ಸುಳಿವು ನೀಡದೇ ಓಡಿಹೋಗಿದ್ದಾರೆಂದೂ ಬಂಧನಕ್ಕೆ ಪ್ರಮುಖ ಕಾರಣವಾಗಿದೆ ಎಂದು  ಕಾರ್ಮಿಕರ ಪರ ವಾದಿಸುತ್ತಿರುವ ವಕೀಲರಾದ ನಾಸರ್ ಬದರ್ ಅಲ್ ಮುಥೈರಿಯವರು ತಿಳಿಸಿದ್ದಾರೆ.

ಕಾರ್ಮಿಕರಿಗೆ ಸಂಬಳ ನೀಡದೇ ಇರುವ ದೂರನ್ನು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗಿದೆಯೆಂದೂ ಅದರ ವಿಚಾರಣೆ ಡಿಸೆಂಬರ್ ೨೪ರಂದು ದಿನಾಂಕ ನಗದಿಗೊಳಿಸಲಾಗಿದೆಯೆಂದೂ ಅವರು ತಿಳಿಸಿದ್ದಾರೆ.  ಅಂತೆಯೇ ಭಾರತೀಯ ದೂತಾವಾಸವೂ ಸಂಸ್ಥೆಯ ಅಧಿಕಾರಿಗಳ ಮತ್ತು ಕಾರ್ಮಿಕ ನಿಯೋಗದೊಂದಿಗೆ ಮುಖಾಮುಖಿ ಭೇಟಿ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲು ಪ್ರಯತ್ನ ನಡೆಸುತ್ತಿದೆ ಎಂದು ದೂತಾವಾಸದ ಅಧಿಕಾರಿಯಾಗಿರುವ ವಿ.ಕೆ. ಮಹಾಜನ್ ತಿಳಿಸಿದ್ದಾರೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕುವೈಟ್ ಟೈಮ್ಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-14


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri