ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಅಮೆರಿಕದಲ್ಲಿ ರಾಮಾಯಣ ಕುರಿತು ವಿಶಿಷ್ಟ ಕಾರ್ಯಕ್ರಮ

.ಸೋಮವಾರ, 16 ಜೂನ್ 2008,

 ಕೌನ್ ಬನೇಗ ರಾಮಾಯಣ ಎಕ್ಸ್‌ಪರ್ಟ್! ಅರ್ರೆ ಇದ್ಯಾವ ಚಾನೆಲ್ಲಿನ ಕಾರ್ಯಕ್ರಮ? ಯಾವಗ ಬರುತ್ತೆ? ಬಹುಮಾನ ಎಷ್ಟು? ಅದರಲ್ಲಿ ಭಾಗವಹಿಸುವುದು ಹೇಗೆ? ಇನ್ನು ಅನೇಕ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಏಳುತ್ತಿರಬಹುದು ಬನ್ನಿ ಅದೆಲ್ಲಕ್ಕು ಉತ್ತರ ಪಡೆಯೋಣ.

ಹಿಂದೂ ಸ್ವಯಂಸೇವಕ ಸಂಘ (HSS)ದ ವತಿಯಿಂದ ಉತ್ತರ ಅಮೇರಿಕದಾದ್ಯಂತ ಮಕ್ಕಳಿಗಾಗಿ ಆಯೋಜಿಸಲ್ಪಟ್ಟ ಸ್ಪರ್ಧೆಯೇ ಕೌನ್ ಬನೇಗ ರಾಮಾಯಣ ಎಕ್ಸ್‌ಪರ್ಟ್ (KBRE). ಈ ಸ್ಪರ್ಧೆಯನ್ನು ಎರಡು ಹಂತದಲ್ಲಿ ಆಯೋಜಿಸಲಾಗಿತ್ತು.

ಮೊದಲನೆಯದು ಅಂತರ್ಜಾಲದ ಮುಖಾಂತರ ಮತ್ತು ಎರಡನೆಯದು ಮುಖತಃ ಪರೀಕ್ಷೆ. 4ರಿಂದ 15 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಎರಡನೆಯ ಹಂತದ ಪರೀಕ್ಷೆಯನ್ನು ಮಕ್ಕಳ ವಯಸ್ಸಿಗನುಗುಣವಾಗಿ ಹಲವು ರೀತಿಯಲ್ಲಿ ನಡೆಸಲಾಯಿತು. ಉದಾ: ರಾಮಾಯಣದ ಚಿತ್ರಗಳಿಗೆ ಬಣ್ಣ ತುಂಬುವುದು, ರಾಮಾಯಣದ ಬಗೆಗಿನ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯುವುದು ಹಾಗು ರಾಮಾಯಣದ ಯಾವುದಾದರು ಒಂದು ಪ್ರಸಂಗವನ್ನು ಸಭಿಕರ ಮುಂದೆ ವಿವರಿಸಿ ತೀರ್ಪುಗಾರರ ಪ್ರಶ್ನೆಗಳಿಗೆ ಉತ್ತರಿಸುವುದು. ಎಲ್ಲಾ ಮಕ್ಕಳು ಅತ್ಯುತ್ಸಾಹದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಈ ಎಲ್ಲಾ ಸ್ಪರ್ಧೆಗಳ ಸಮಾರೋಪ ಸಮಾರಂಭ ಕಳೆದ ಭಾನುವಾರ (ಜೂನ್ 8ರಂದು) ಇಲಿನಾಯ್ ರಾಜ್ಯದ ಬ್ಲ್ಯೂಮಿಂಗ್ಟನ್ ಪಟ್ಟಣದ ಶಾಖೆಯವರು ಸುಮಾರು 60 ಮಕ್ಕಳನ್ನೊಳಗೊಂಡ ರಾಮಾಯಣ ನಾಟಕವನ್ನು ಪ್ರದರ್ಶಿಸಿದರು. ಸುಮಾರು ಎರಡು ತಿಂಗಳಿನಿಂದ ತಯಾರಿ ನಡೆಸಲಾಗಿದ್ದ ಈ ನಾಟಕದಲ್ಲಿ ರಾಮಾಯಣದ ಹಲವು ಪ್ರಮುಖ ಪ್ರಸಂಗಗಳನ್ನು ಪ್ರದರ್ಶಿಸಲಾಯಿತು. ಅವುಗಳೆಂದರೆ ಬಾಲಕಾಂಡ, ವಿಶ್ವಾಮಿತ್ರರಲ್ಲಿನ ವಿದ್ಯಾಭ್ಯಾಸ, ಸೀತಾಸ್ವಯಂವರ, ರಾಮನವನವಾಸ, ಸೀತಾಪಹರಣ, ಲಂಕಾದಹನ, ಸೇತುಬಂಧನ, ಲಕ್ಷಣ - ಇಂದ್ರಜಿತ್ ನಡುವನ ಯುದ್ಧ, ಕುಂಭಕರ್ಣ ವಧೆ, ರಾವಣ ವಧೆ, ರಾಮನ ಅಯೋಧ್ಯಾ ಪ್ರವೇಶ, ಶ್ರೀರಾಮನ ಪಟ್ಟಾಭಿಷೇಕ.

ಪೂರ್ವ ಧ್ವನಿಮುದ್ರಿತ ಈ ನಾಟಕಕ್ಕೆ ಮಕ್ಕಳು ಮನಸೆಳೆಯುವ ಅಭಿನಯ ನೀಡಿ ನೆರೆದ್ದಿದ್ದ 600ಕ್ಕೂ ಹೆಚ್ಚು ಪ್ರೇಕ್ಷಕರನ್ನು ರಂಜಿಸಿದರು. ತಾಳಕ್ಕೆ ಸರಿಯಾದ ಮೇಳ ಬೆರೆತಂತೆ ಅಂದು ಧ್ವನಿ ಹಾಗು ಬೆಳಕಿನ ಸಂಯೋಜನೆ ಎಲ್ಲೂ ಕೈ ಕೊಡದೆ ಇಡೀ ಕಾರ್ಯಕ್ರಮ ಅತ್ಯದ್ಭುತವಾಗಿ ಮೂಡಿ ಬಂದಿತು.

ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಹಾಗು ಇಲ್ಲಿನ (ಅಮೇರಿಕೆಯ) ಸಮಾಜಕ್ಕೆ ನಮ್ಮ ಸಂಸ್ಕೃತಿ ಹಾಗು ಧರ್ಮಗ್ರಂಥಗಳನ್ನು ಪರಿಚಯಿಸುವ ಮೂಲೋದ್ದೇಶದಿಂದ ಕೂಡಿರುವ ಇಂತಹ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಾ ಉತ್ತರ ಅಮೇರಿಕಾ ಮಧ್ಯ ಪ್ರಾಚ್ಯ HSSನ ವಿಭಾಗದ ಉಪಾಧ್ಯಕ್ಷರಾದ ನಾರಯಣ್ ಚಾಂದಕ್‌ರವರು, ರಾಮಾಯಣದಲ್ಲಿನ ಮೌಲ್ಯಗಳನ್ನು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಹೇಗೆ ಉತ್ತಮ ಪ್ರಜೆಗಳಾಗಬಹುದೆಂದು ಹೇಳಿದರು.

ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉತ್ತರ ಅಮೇರಿಕಾ HSSನ ಉಪಾಧ್ಯಾಯರಾದ ಸೌಮಿತ್ರ ಗೊಖಲೆಯವರು ಮಾತನಾಡುತ್ತಾ, ರಾಮಾಯಣದಲ್ಲಿ ಬರುವ ಜಟಾಯುವಿನ ಬಗ್ಗೆ ಪ್ರಸ್ತಾಪಿಸಿದರು. ಸೀತಾಪಹರಣದ ವಿರುದ್ಧ ಒಂದು ಸಣ್ಣಪಕ್ಷಿಯಾಗಿ ದೈತ್ಯ ರಾವಣನ ವಿರುದ್ಧ ಹೋರಾಡಿದ ಜಟಾಯುವಿನ ಪ್ರಸಂಗ ವಿವರಿಸಿ ಅನ್ಯಾಯ ಅಧರ್ಮದ ವಿರುದ್ಧ ಹೋರಾಡಲು ನಮಗೆ ದೇಹಬಲಕ್ಕಿಂತ ನಮ್ಮಲ್ಲಿರಬೇಕಾದ ಧೈರ್ಯ ಸ್ಥೈರ್ಯ ಹಾಗು ಮನೋಬಲದ ಪ್ರಾಮುಖ್ಯತೆಯನ್ನು ವಿವರಿಸಿದರು. ಹಾಗೆಯೆ ರಾಮನೊಂದಿಗೆ ಕಾಡಿಗೆ ಹೊರಡುವ ಲಕ್ಷ್ಮಣನ ಭ್ರಾತೃ ಪ್ರೇಮವನ್ನು ಕೂಡಾ ವಿವರಿಸಿ, ಒಟ್ಟಿನಲ್ಲಿ ರಾಮಾಯಣದ ಮೌಲ್ಯಗಳು ಇಂದಿಗು ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಸರಳವಾಗಿ ಸುಂದರವಾಗಿ ತೋರಿಸಿಕೊಟ್ಟರು.

ಇದೇ ಸಮಯದಲ್ಲಿ ಸೈಬೀರಿಯಾ, ಇಂಡೋನೇಶಿಯಾ, ಥೈಲ್ಯಾಂಡ್, ಸಿಂಗಾಪುರ ಹಾಗು ಇನ್ನು ಅನೇಕ ದೇಶಗಳಲ್ಲಿನ ಸಂಸ್ಕೃತಿಯಲ್ಲಿ ರಾಮಾಯಣ ನಾಟಕಗಳ ಪ್ರಯೋಗಗಳ ಬಗ್ಗೆ ಒಂದು ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. HSSನ ವತಿಯಿಂದ ವಾರಕ್ಕೊಮ್ಮೆ (ಶನಿವಾರ/ಭಾನುವಾರ) ಮಕ್ಕಳಿಗಾಗಿ ನಡೆಯುವ ಬಾಲಗೋಕುಲಂ ಶಾಲೆಯ ಬಗ್ಗೆ ಸಹ ಒಂದು ಕಿರುಚಿತ್ರ ಪ್ರದರ್ಶಿಸಲಾಯಿತು. ಈ ಕಿರುಚಿತ್ರದಲ್ಲಿ ಮಕ್ಕಳು ಬಾಲಗೋಕುಲಂನಲ್ಲಿ ಹೇಗೆ ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಹಾಗು ನಮ್ಮ ಧರ್ಮ, ಶಾಸ್ತ್ರ ಗ್ರಂಥಗಳ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂಬುದನ್ನು ಮಕ್ಕಳ ಧ್ವನಿ ಮುದ್ರಣದೊಂದಿಗೆ ಪ್ರಸ್ತುತಪಡಿಸಿದ್ದು ಅಭಿನಂದನೀಯವಾಗಿತ್ತು.

ಇದೇ ಸಂದರ್ಭದಲ್ಲಿ KBRE ಪರೀಕ್ಷೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಫಲಕಗಳನ್ನು ವಿತರಿಸಲಾಯಿತು. ಹಾಗೆಯೆ ರಾಮಾಯಣ ನಾಟಕದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗು ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು. ಎರಡು ತಿಂಗಳ ಕಾಲ ಸತತ ಪರಿಶ್ರಮದೊಂದಿಗೆ ಮಕ್ಕಳನ್ನು ತರಬೇತುಗೊಳಿಸಿದ ತಂಡ, ಪ್ರತಿದೃಶ್ಯಕ್ಕೆ ವೇದಿಕೆಯನ್ನು ಅಣಿಗೊಳಿಸುತ್ತಿದ್ದ ತಂಡ, ದೃಶ್ಯ ಹಾಗು ಧ್ವನಿ ಸಂಯೋಜನೆಯ ಹಿಂದೆ ಪರಿಶ್ರಮಿಸಿತ್ತಿದ್ದ ತಂಡ, ಎಲ್ಲಾ ಕಾರ್ಯಕರ್ತರಿಗೂ ಹಾಗೂ ಇನ್ನು ಅನೇಕ ಕಾಣದ ಕೈಗಳಿಗೂ ಕಾರ್ಯಕ್ರಮ ಮುಗಿದಾಗ ಧನ್ಯತಾಭಾವ. ಕೊನೆಯೆ ದೃಶ್ಯಕ್ಕೆ ನೆರೆದಿದ್ದ ಪ್ರೇಕ್ಷಕರಿಂದ ಕಿವಿಗಡಚಿಕ್ಕುವ ಕರತಾಡನವಾದಾಗಲಂತು ಕೆಲವರ ಕಣ್ಣುಗಳು ಸಂತೋಷದಿಂದ ತುಂಬಿ ಬಂದದ್ದು ಕಂಡು ಬಂತು.

ಅಮೇರಿಕಾದಾದ್ಯಂತ ಅನೇಕ ಪಟ್ಟಣಗಳಲ್ಲಿ HSSನವರು ಸ್ಥಳೀಯ ಮಕ್ಕಳನ್ನೊಳಗೊಂಡ ರಾಮಾಯಣ ನಾಟಕ ಪ್ರದರ್ಶಿಸಲಿದ್ದಾರೆ. ನಿಮ್ಮ ಊರಿನಲ್ಲಿ ನಡೆದರೆ ದಯವಿಟ್ಟು ಭೇಟಿ ಇತ್ತು ವೀಕ್ಷಿಸಿ, ಈಗಾಗಲೆ ನಡೆದಿದ್ದರೆ ಎಲ್ಲರೊಂದಿಗೆ ಹಂಚಿಕೊಳ್ಳಿ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಲೇಖನ : ಶರತ್ ಯಳಂದೂರು, ಇಲಿನಾಯ್, ಅಮೆರಿಕ| ದಟ್ಸ್ ಕನ್ನಡ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-17


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಬ್ರಿಟನ್ ರಾಣಿ ಪ್ರಶಸ್ತಿ18 ಮಂದಿ ಅನಿವಾಸಿ ಭಾರತೀಯರ ಆಯ್ಕೆ
»ಅಮೆರಿಕದಲ್ಲಿ ಭಾರತ ಸ್ವಾತಂತ್ರ್ಯ ಪೆರೇಡ್‌ಗೆ ದೀಪಿಕಾ ಪಡುಕೋಣೆ
»ಜರ್ಮನಿಯ ವಿದ್ವಾಂಸರಿಗೆ ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ
»ನ್ಯೂಜೆರ್ಸಿಯಲ್ಲಿ ‘ರಾಜ್‌ಕುಮಾರ್ ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್’ ಕೃತಿ ಬಿಡುಗಡೆ
»2500 ಕೋಟಿ ವಂಚಿಸಿದ 3ಎನ್‌ಆರ್‌ಐಗಳಿಗೆ ಜೈಲು
»ಸೂರ್ಯ ಮುಳುಗದ ನಾಡಿನಲ್ಲಿ ಜೂನ್‌ನಲ್ಲಿ ಕನ್ನಡ ಕಲರವ
»ಚಿಕಾಗೋ: ಮಂಗಳೂರು ಕೊಂಕಣ್ಸ್ ಆಯೋಜಿಸಿರುವ ಕೊಂಕಣ್ ಫೆಸ್ಟ್-2008
»ಸ್ಕಾಟ್ಲೆಂಡ್‌ನಲ್ಲಿ ಅಪಘಾತ: ಕರ್ನಾಟಕ ಮಹಿಳೆ ಸಾವು
»ಆಕ್ಲೆಂಡಿನಲ್ಲಿ ಸಂಗೀತೋಲ್ಲಾಸದ ಹೂಮಳೆ
»ಉದಯರವಿಯ ನಾಡಿನಲ್ಲಿ ಕನ್ನಡ ಕಲರವ
»ಚಿಕಾಗೋದಲ್ಲಿ ಡಾ. ಆಸ್ಟಿನ್ ಪ್ರಭು ರವರಿಗೆ ೫-ಡೈಮಂಡ್ ಎಂ.ಜೆ.ಎಫ್. (ಮೆಲ್ವಿನ್ ಜೋನ್ಸ್ ಫೆಲೋ) ಪ್ರಶಸ್ತಿ
»ಉಪಾಧ್ಯಕ್ಷ ಹುದ್ದೆಗೆ ಬಾಬ್ಬಿ ಜಿಂದಲ್ ಸ್ಪರ್ಧೆ?
»ನಯಾಗರ ಫಾಲ್ಸ್ಗ್ ಗೆ ತೆರಳುವಾಗ ಅಪಘಾತ - 6 ಭಾರತಿಯರ ಮರಣ
»ಅಂಧ್ರ ವಿದ್ಯಾರ್ಥಿನಿ ಕೊಲೆ ಪ್ರಕರಣ: ಭಾರತೀಯನ ವಿಚಾರಣೆ
»ಹಿಲರಿ ಕ್ಲಿಂಟನ್‌ಗೆ ಬೆಳಗಾವಿಯ ಫಂಡ್‌ರೈಸರ್!: ಕನ್ನಡಿಗನ ಸಾಧನೆ
»ಇಬ್ಬರು ಅಪ್ರಾಪ್ತ ಮಕ್ಕಳ ಶವ ಕಾರಿನಲ್ಲಿ ಪತ್ತೆ
»ಶಿಕಾಗೊ 'ಅಕ್ಕ' ವಿಶ್ವಕನ್ನಡ ಸಮ್ಮೇಳನದ ವಿಶೇಷಗಳು
»ಲಂಡನ್ ಬ್ಯಾಂಕ್‌ಗೆ 564 ಕೋಟಿ ವಂಚಿಸಿದ ಭಾರತೀಯನ ಬಂಧನ
»ಉಪಾಧ್ಯಕ್ಷ ಪಟ್ಟ ಬೇಡ: ಜಿಂದಾಲ್
»ಲಕ್ಷ್ಮಿ ಮಿತ್ತಲ್‌ಗೆ ಸತತ ನಾಲ್ಕನೇ ವರ್ಷ ಬ್ರಿಟನ್ ಶ್ರೀಮಂತ ಉದ್ಯಮಿ ಪಟ್ಟ
»ಇಂಗ್ಲೆಂಡಿನಲ್ಲೊಂದು ಯುಗಾದಿ ಆಚರಣೆ
»ಆಕ್ಲೆಂಡ್ ಕನ್ನಡ ಕೂಟದಲ್ಲಿ ಸಂಭ್ರಮದ ಯುಗಾದಿ
»ಸ್ವತಃ ಜ್ಯೋತಿ ಓಟ ಆಯೋಜಿಸಿದ ಟಿಬೆಟಿಯನ್ನರು
»ಅಮೆರಿಕದಲ್ಲಿದ್ದ ಎಂಜಿನಿಯರ್ ಚುನಾವಣೆ ಕಣಕ್ಕೆ
»ರೋಬಿನ್ ಹುಡ್‌ನ ನಾಟಿಂಗ್‌ಹ್ಯಾಮ್‌ನಲ್ಲಿ `ಯಕ್ಷಗಾನ'
»ನ್ಯೂಜಿಲೆಂಡ್‌ನಲ್ಲೂ ಬಸವಣ್ಣನ ಪ್ರಭಾವ: ಸಚಿವ ಕ್ರಿಸ್ ಕಾರ್ಟರ್
»ಮೀರಾ ನಾಯರ್‌ಗೆ `ವರ್ಷದ ವ್ಯಕ್ತಿ' ಪ್ರಶಸ್ತಿ
»ಇಂದ್ರಾ ನೂಯಿ ವೇತನ 14.74 ದಶಲಕ್ಷ ಡಾಲರ್
»ಕಂಬನಿ: ರೋಸ್ ಡಿ’ಸೋಜ ನಮ್ಮನ್ನಗಲಿದರು
»ಲಂಡನ್ ನಗರದಲ್ಲಿ ಒಂಟಿ ಬಾಲಕ ಯಾರೀತ?
»ಎನ್.ಆರ್.ಐ ಗಳು ವರ್ಷಕ್ಕೆ 27 ಬಿಲಿಯನ್ ಡಾಲರನ್ನು ಮಾತ್ರಭೂಮಿಗೆ ಕಳಿಸುತ್ತಾರೆ
»ಇಂದ್ರಾ ನೂಯಿ ಆದರ್ಶ ಮಹಿಳೆ
»ಅಮೇರಿಕಾ: ರಾಷ್ಟ್ರೀಯ ವಿದ್ಯಾರ್ಥಿವೇತನ ಪಡೆದ ಭಾರತೀಯ ವಿದ್ಯಾರ್ಥಿನಿ
»ಭಾರತ ಮೂಲದ 'ಡಾ.ಡೆತ್' ಅಮೆರಿಕದಲ್ಲಿ ಬಂಧನ
»ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯ ಹತ್ಯೆ
»ಮುಂಬೈ ಬೆಡಗಿ ಶಗುನ್ ಭಾರತೀಯ ಭುವನಸುಂದರಿ
»ಯುನಿವರ್ಸಿಟಿಯಲ್ಲಿ ಮಾರಕ ಕೊಲೆ!
»ಕೆನಡಾದ ೪ನೇ ದೊಡ್ಡ ಭಾಷೆ ಪಂಜಾಬಿ
»ಬಾಬಿ ಜಿಂದಾಲ್ ಅಮೆರಿಕ ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿ?
»ಸಿಲಿಕಾನ್ ವ್ಯಾಲಿಯಲ್ಲಿ ಜೋಕುಮಾರನ ಮೋಡಿ
»`ಜೂನಿಯರ್ ನೊಬೆಲ್' ಫೈನಲ್‌ಗೆ ೭ ಭಾರತೀಯ ಮೂಲದ ವಿದ್ಯಾರ್ಥಿಗಳು
»ಮಲ್ಲಿಗೆ ಚಪ್ಪರದ ಕೆಳಗೆ ಸಂಕ್ರಾಂತಿ ಹಾಡು
»ಹಲವು ರಾಷ್ಟ್ರಗಳ್ಲಲಿ ಗಣರಾಜ್ಯೋತ್ಸವ ಆಚರಣೆ
»ಭಾರತೀಯ ಉದ್ಯಮಿ ರಾಬರ್ಟ್ ಸಾವು
»ಇಂಟರ್‌ನೆಟ್‌ನಲ್ಲಿ ಪ್ರವಾಸಿ ಭಾರತೀಯ ದಿವಸ ನೇರಪ್ರಸಾರ
»ಗುಜರಾತಿಗಳನ್ನುರಕ್ಷಿಸಿ:ಮೋದಿ
»ಭಾರತೀಯ ವೈದ್ಯ ವಿದ್ಯಾರ್ಥಿ ಹಂತಕರ ಸುಳಿವು ನೀಡಿದವರಿಗೆ ೫,೦೦೦ ಡಾಲರ್ ಬಹುಮಾನ
»ನಥಾಲ್ ಫೆಸ್ಟ್-೨೦೦೭; ನೈಸರ್ಗಿಕ ಅಡ್ಡಿಗಳ ನಡುವೆಯೂ ಸಂಭ್ರಮದ ಆಚರರಣೆ
»ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗುಂಡೇಟಿನಿಂದ ಸಾವು: ನರಹಂತಕನ ಭೀತಿ
»ಅಕ್ಕ ಸಮ್ಮೇಳನ 2008 : ಕತೆ,ಕವನ,ಲೇಖನ ಆಹ್ವಾನ
»ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ
»ಉ.ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿಗೆ ಆರರ ಸಡಗರ
»ಥೇಮ್ಸ್ ನದಿಯಲ್ಲಿ ಕಣ್ಣೀರಿನ ಪ್ರವಾಹ
»ನೆದರ್ ಲ್ಯಾಂಡಿನಲ್ಲಿ ಕನ್ನಡ ಡಿಂಡಿಮ
»ಸಿಡ್ನಿ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
»ಹೊಸ್ಟನ್ ವಿವಿ ಕುಲಪತಿಯಾಗಿ ಭಾರತೀಯ ಮೂಲದ ಖಾತೂರ್ ಆಯ್ಕೆ
»ನವಂಬರ್ 1 ರಿಂದ 18 ರವರೆಗೆ ಅಮೆರಿಕಾದಲ್ಲಿ ಹಾಸ್ಯದ ಹೊನಲು
»ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
»ಲ್ಯೂಸಿಯಾನಾ ಗವರ್ನರ್ ಆಗಿ ಭಾರತೀಯ ಮೂಲದ ಜಿಂದಾಲ್ ಆಯ್ಕೆ
»ನಗೆಗನ್ನಡಂ ಗೆಲ್ಗೆ ; ಅನಿವಾಸಿ ಕನ್ನಡಿಗರಿಗೆ ಥ್ಯಾಂಕ್ಸ್!
»ಸಿಂಗಪುರ ಕನ್ನಡಿಗರ ರಂಜಿಸಿದ ಹೈಟೆಕ್ ಹಯವದನಾಚಾರ್
»ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!
»ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...
»ಕೆರೊಲಿನಾ ಕನ್ನಡಿಗರು ಕೃಷ್ಣನ ಕಂಡು ಮೂಕರಾದರಯ್ಯಾ
»ನ್ಯೂಜೆರ್ಸಿ : ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
»ಸಿಡ್ನಿಯಲ್ಲಿ ಸ್ವಾತಂತ್ರ ಷಷ್ಟಿಪೂರ್ತಿ ಶಾಂತಿ
»ನನ್ನಿಂದ ಸಾಧ್ಯ ಅಂದುಕೊಂಡರೆ,ಅರ್ಧ ಕೆಲಸ ಪೂರ್ಣ!
»ಅನಿವಾಸಿ ಕನ್ನಡಿಗ,ಲೇಖಕ ಡಾ.ಪ್ರಸನ್ನ ಕುಮಾರ್ ನಿಧನ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri