ಬ್ರಿಟನ್ ರಾಣಿ ಪ್ರಶಸ್ತಿ18 ಮಂದಿ ಅನಿವಾಸಿ ಭಾರತೀಯರ ಆಯ್ಕೆ |
ಪ್ರಕಟಿಸಿದ ದಿನಾಂಕ : 2008-06-15
ವಿಧವೆಯರ ಹಕ್ಕಿಗಾಗಿ ಹೋರಾಡುತ್ತಿರುವ ರಾಜ್ ಲೂಂಬಾ ಮತ್ತು ಭಾರತದಲ್ಲಿಯ ಬೀದಿ ಮಕ್ಕಳ ಕಲ್ಯಾಣಕ್ಕೆ ಕೆಲಸ ಮಾಡುತ್ತಿರುವ ಸುರಿನಾ ನರುಲಾ ಸೇರಿದಂತೆ 18 ಜನ ಅನಿವಾಸಿ ಭಾರತೀಯರು ಇಂಗ್ಲೆಡ್‌ನ ರಾಣಿ ಎಲಿಜಬತ್ ಅವರ ಈ ವರ್ಷದ ಹುಟ್ಟು ಹಬ್ಬದ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಲಂಡನ್ (ಪಿಟಿಐ): ಪಂಜಾಬ್‌ನ ಧಿಲ್ವಾನ್ ಮೂಲದ ಲೂಂಬಾ ಅವರು ಲೂಂಬಾ ಟ್ರಸ್ಟ್ ಮೂಲಕ ಭಾರತ ಮತ್ತು ಬ್ರಿಟನ್‌ನ್ಲಲಿಯ ಬಡ ವಿಧವೆಯರು ಹಾಗೂ ಅವರ ಮಕ್ಕಳ ಕಲ್ಯಾಣಕ್ಕೆ ಶ್ರಮಿಸುತ್ತ್ದಿದಾರೆ. ಅವರನ್ನು ಕಮಾಂಡರ್ ಆಫ್ ಬ್ರಿಟಿಷ್ ಎಂಪೈರ್ ಪ್ರಶಸ್ತಿಗೆ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ನುರಾಲಾ ಅವ ರನ್ನು ಮೆಂಬರ್ ಆಫ್ ದಿ ಬ್ರಿಟಿಷ್ ಎಂಪೈರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಇತರ ಅನಿವಾಸಿ ಭಾರತೀಯರೆಂದರೆ .......
ಜಸ್ವಂತ್ ಚವ್ಹಾಣ್, ಲೈಸೆಸ್ಟರ್, ಪ್ರೊ. ರಮೇಶ್‌ಚಂದ್ ಗುಪ್ತ, ಸಮತಿಬೆನ್ ದೇಸಾಯಿ, ಬಾಲರಾಜ್ ಸಿಂಗ್ ದೇಸಾಯಿ, ಸತಬೀರ್ ಸಿಂಗ್ ಗ್ಯಾನಿ, ತನಿಕಾ ಗುಪ್ತ, ಪ್ರಕಾಶ್‌ಚಂದ್ರ ಕಾಕೊಟಿ, ಕುಲ್ವಂತ್ ಕೌರ್, ಕುಮಾರ್ ಜಯವಂತ್ ಶರ್ಮಾ ರಾವ್,ಬಲವಂತ್ ಬಾಯಿ ದಯಾಬಾಯಿ ಉಂಕಾ ಪಟೇಲ್, ಹಿತೇಶ್ ಖಾಜಿ ಪಟೇಲ್, ಶೈಲಾಗ್ ಅನ್ನಾ ರಾಮ್, ಶೆಹೆನ್ ತಾಜ್, ಮಹೇಶ್ ಪೌಲ್ ಥಾಪರ್, ವಂದನಾ ಸಕ್ಸೇನಾ ಮತ್ತು ಶಾಲಿನಿ ಮಹಂತಿ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-15
|
|
|