ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ತುಳು ಕೂಟ ಕತರ್ ಸದಸ್ಯರಿಂದ ದಾಖಲೆ ರಕ್ತದಾನ

ಹಮದ್ ಮೆಡಿಕಲ್ ಕಾರ್ಪೋರೇಶನ್ ನಲ್ಲಿ ಸಂಭ್ರಮದ ವಾತಾವರಣ : ಜೀವ ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಉತ್ಸಾಹ

ದೋಹಾ, ಜೂನ್ ೧೩: ಇಂದು ಬೆಳಿಗ್ಗೆ ದೋಹಾ ಹಮದ್ ಮೆಡಿಕಲ್ ಕಾರ್ಪೋರೇಶನ್ ಬ್ಲಡ್ ಬ್ಯಾಂಕ್ ಯೂನಿಟ್ ನಲ್ಲಿ ತುಳು ಕೂಟ ಕತರ್ ಆಯೋಜಿಸಿದ್ದ ರಕ್ತದಾನ ಶಿಬಿರ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ರಕ್ತದಾನ ಮಾಡಲು ನೀಡಿದ್ದ ಕರೆಯನ್ನು ಮನ್ನಿಸಿ ದಾಖಲೆ ಸಂಖ್ಯೆಯಲ್ಲಿ ಸದಸ್ಯರು ಹಾಗೂ ಹಿತೈಷಿಗಳು ಆಗಮಿಸಿ ಅಮೂಲ್ಯವಾದ ರಕ್ತವನ್ನು ದಾನ ನೀಡಿದರು.  ಹೆಚ್. ಎಮ್. ಸಿ ಇತಿಹಾಸದಲ್ಲಿಯೇ ಇದು ದಾಖಲೆ ಸಂಖ್ಯೆಯ ರಕ್ತದಾನವಾಗಿದ್ದು ಪ್ರಥಮ ನಾಲ್ಕು ಘಂಟೆಗಳಲ್ಲಿ ನಲವತ್ತೈದು ಸದಸ್ಯರು ರಕ್ತದಾನ ನೀಡಿದ್ದು ಮತ್ತೊಂದು ದಾಖಲೆಯಾಗಿದೆ. ಒಟ್ಟು ನೂರಾಮೂವತ್ತೈದು ಜನರು ರಕ್ತದಾನ ನೀಡಲು ಶಕ್ತರಾದರು. ಸುಮಾರು ನಲವತ್ತೈದು ಸದಸ್ಯರನ್ನು ಇತರ ಕಾರಣಗಳಿಗಾಗಿ ರಕ್ತ ಪಡೆಯಲು ನಿರಾಕರಿಸಲಾಯಿತು.  ಈ ಅಭಿಯಾನದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಅರಬ್ ಮೂಲದ ವ್ಯಕ್ತಿಗಳೂ ಇವರಲ್ಲಿ ಸೇರಿದ್ದು ವಿಶಿಷ್ಟವಾಗಿತ್ತು.

ನಿಕಟಪೂರ್ವ ಐಸಿಸಿ ಅಧ್ಯಕ್ಷ ಹಾಗೂ ರಕ್ತದಾನಿ ಎಮ್.ಐ. ಫರೀದ್, ನಿಕಟಪೂರ್ವ ತುಳುಕೂಟ ಅಧ್ಯಕ್ಷ ವಾಮನ್ ಮಲ್ರೋಯ್, ಶ್ರೀ ಪ್ರಕಾಶ್ ಅಜಿಲ ಹಾಗೂ ದಿವಾಕರ ಪೂಜಾರಿ ಮೊದಲಾದ ಗಣ್ಯರು ಅಭಿಯಾನದಲ್ಲಿ ಉಪಸ್ಥಿತರಿದ್ದರು.

ಅಭಿಯಾನದ ಉದ್ಘಾಟನೆಯನ್ನು ಅಧ್ಯಕ್ಷರಾದ ರವಿಶೆಟ್ಟಿಯವರು ಸ್ವಾಗತಿಸಿದರು.  ಡಾ. ವಿಶ್ವನಾಥ್ ಹೆಚ್.ಕೆ.ಶೆಟ್ಟಿಯವರು ರಕ್ತದಾನದ ಅಮೂಲ್ಯತೆಯ ಬಗ್ಗೆ ವಿವರ ನೀಡಿದರು.  ಸಹಕಾರ್ಯದರ್ಶಿ ವಿವಿಯನ್ ಡಿಸೋಜಾರವರು ವಂದನಾರ್ಪಣೆ ಸಲ್ಲಿಸಿದರು.

ಟ್ಯಾಕ್ಸಿಯಲ್ಲಿ ಪ್ರಯಾಣಿಕರೊಬ್ಬರು ಮರೆತಿದ್ದ ಹಣವನ್ನು ಹಿಂತಿರುಗಿಸಿ ಮಾನವತೆಯನ್ನು ಮೆರೆದ ಭಾಲಕೃಷ್ಣ ಶೆಟ್ಟಿಯವರನ್ನು ಸಭೆಗೆ ಪರಿಚಯಿಸಿ ಅವರ ಪ್ರಾಮಾಣಿಕತೆಯನ್ನು ಪ್ರಶಂಸಿಸಲಾಯಿತು. ಬಾಲಕೃಷ್ಣರವರು ಮಂಗಳೂರಿನ ತೊಕ್ಕೊಟ್ಟಿನವರಾಗಿದ್ದಾರೆ.

ಹೆಚ್.ಎಮ್.ಸಿ  ಸುಪರ್ ವೈಸರ್ ಶ್ರೀಮತಿ ಸಾದಿಕಾ ಇಸ್ಮಾಯಿಲ್ ಅವರು ತುಳು ಕೂಟ ಕತರ್ ಸದಸ್ಯರಿಗೆ ಹಾಗೂ ಸಮಿತಿವೃಂದದವರಿಗೆ ಧನ್ಯವಾದ ಅರ್ಪಿಸಿದರು. ಇಂದಿನ ರಕ್ತಸಂಗ್ರಹ ಹೊಸ ದಾಖಲೆಯಾಗಿದ್ದು ರೋಗಿಗಳ ಪ್ರಾಣಗಳನ್ನು ಉಳಿಸಲು ಈ ರಕ್ತ ಕಾರಣವಾಗಲಿದೆ, ಈ ಕಾರ್ಯಕ್ಕೆ ಸಹಕರಿಸಿದ ಶ್ರೀ ಇಕ್ಬಾಲ್ ಮನ್ನಾ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು. 

ಇಂದು ವಿಶ್ವ ರಕ್ತದಾನ ದಿನಾಚರಣೆ ವಿಶ್ವದಾದ್ಯಂತ ನಡೆಯುತ್ತಿದ್ದು ನಾಳೆ ಈ ಬಗ್ಗೆ ಹಲವು ಕಾರ್ಯಕ್ರಮಗಳನ್ನು ನಗರದ ಪ್ರಮುಖ ಮಳಿಗೆಗಳಲ್ಲಿ ಹೆಚ್.ಎಮ್.ಸಿ. ಹಮ್ಮಿಕೊಂಡಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಇಕ್ಬಾಲ್ ಮನ್ನಾ, ಕತರ್ | ಕನ್ನಡ ಅನುವಾದ: ಅರ್ಶದ್.ಎಮ್.ಎಚ್
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-13

ಇತರ ಸಂಭಂದಪಟ್ಟ ವರದಿಗಳು
»
»ಕತರ್: ಜೂನ್ 13 ರಂದು ರಕ್ತದಾನ ಶಿಬಿರ : ತುಳು ಕೂಟ ಕತರ್ ಆಯೋಜನೆ
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಏಷ್ಯನ್ ಒಳಾಂಗಣ ಕ್ರೀಡಾಕೂಟಕ್ಕೆ ೩೨ ಸದಸ್ಯರ ದಂಡು; ಭಾರತ ತಂಡಕ್ಕೆ ಅಂಜು ಬಾಬಿ ಜಾರ್ಜ್ ನೇತೃತ್ವ
»ಗಿನ್ನೆಸ್ ದಾಖಲೆ ಸೇರಿದ ಕತರ್ ಕೆ.ಎಫ್.ಸಿ.
»ತುಂಡಾದ ಕೇಬಲ್ : ಅಸ್ತವ್ಯಸ್ತವಾದ ಕತರ್ ಟೆಲಿಫೋನ್ ವ್ಯವಸ್ಥೆ
»ಅನಿವಾಸಿಗಳಿಂದ ಆಚರಿಸಲ್ಪಟ್ಟ ಗಣತಂತ್ರ ದಿವಸ : ಹಬ್ಬದ ವಾತಾವರಣ
»ಇನ್ನಷ್ಟು ದುಬಾರಿಯಾಗಲಿರುವ ಭಾರತದ ಅಕ್ಕಿ.
»ತಿಜೋರಿ ಕದ್ದು ಒಡೆಯಲನುವಾಗುತ್ತಿರುವಾಗಲೇ ಪೋಲೀಸರಿಗೆ ಸಿಕ್ಕಿಬಿದ್ದ ಕಳ್ಳರು
»ಜೆಟ್ ಏರ್ ವೇಸ್ ಪ್ರಾರಂಭಿಸಿರುವ ದೋಹಾ-ಮುಂಬೈ,ಕಲ್ಲಿಕೋಟೆ ನೇರ ವಿಮಾನಯಾನ
»ಉದ್ಯೋಗಕ್ಕಾಗಿ ಬಂದವರು ಒಂಟೆಕಾವಲಿಗೆ: ಭಾರತೀಯದ ಅಳಲು
»ದೋಹ: ಕರ್ನಾಟಕ ಶಾಸ್ತ್ರೀಯ ಸಂಗೀತಪ್ರಿಯರಿಗೆ ಅಪರೂಪದ ಉಪಚಾರ
»ಸಾರಿಗೆ ಕಾನೂನುಗಳ ಅನುವಾದ ಅಗತ್ಯ: ಏಶಿಯಾ ಮೂಲದ ಅನಿವಾಸಿಗಳ ಬೇಡಿಕೆ
»ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಬಂದರೆ ದಂಡ: ಕತರ್ ಸಾರಿಗೆ ಸಚಿವಾಲಯ
»ಏರುತ್ತಿರುವ ಮೊಟ್ಟೆ ಬೆಲೆ, ಆತಂಕದಲ್ಲಿ ಬೇಕರಿಗಳು.
»ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ವಿದೇಶಿಯರ ಸಂಖ್ಯೆ ೭೦ ಮಿಲಿಯನ್!
»ಡಾಲರ್ ಮೇಲಿನ ಅವಲಂಬನೆಯಲ್ಲಿ ಬದಲಾವಣೆ ಇಲ್ಲ, ಜಿಸಿಸಿ.
»ದಾನಿಗಳಿಗೆ ಸನ್ಮಾನ:(THE Indian Community Benevolent Fund (ICBF)
»ಐಸಿಸಿ ಉತ್ಸವದಲ್ಲಿ ಮನಸೆಳೆದ ಮಕ್ಕಳ ನೃತ್ಯ
»ಆಯಾಗಳ ನೇಮಕಕ್ಕೆ ತಾತ್ಕಾಲಿಕ ತಡೆಯಾಜ್ಞೆ ಇನ್ನೂ ಪ್ರಸ್ತುತ
»ಐಡಿಯಲ್ ಇಂಡಿಯನ್ ಸ್ಕೂಲ್ ವಿಧ್ಯಾರ್ಥಿ ಅಕಾಲಿಕ ಮ್ರತ್ಯು
»೧೫ ವರ್ಷ ಒಳಗಿನವರ ಕ್ರಿಕೆಟ್-ನಾಯಕತ್ವ ವಹಿಸಿದ ಮಂಗಳೂರಿನ ಬಾಲಕ
»500ಕ್ಕೂ ಹೆಚ್ಚು ಮಕ್ಕಳ ಉಚಿತ ನೇತ್ರ ತಪಾಸಣೆ
»2016ರ ಒಲಿಂಪಿಕ್ಸ್ ಕ್ರೀಡೆಗಳ ಪ್ರಯೋಜಕತೆಗೆ ಕತಾರ್ ಯತ್ನ
»೨೦ನೆ ಮಾಂಟ್ರಿಯಲ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕತಾರ್
»ಇಪ್ಪತ್ತು ವರ್ಷ ಪೂರೈಸಿದ ಮೊಬೈಲ್ ಟೆಲಿಕಾಂ ಕಂಪನಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri