ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕತರ್: ಪ್ರಯಾಣಿಕರು ಮರೆತ ಹಣವನ್ನು ಹಿಂತಿರುಗಿಸಿ ಮಾನವೀಯತೆ ಮೆರೆದ ಮಂಗಳೂರಿನ ಬಾಲಕೃಷ್ಣ

ಪ್ರಯಾಣಿಕರು ಮರೆತ ಹಣದ ಮೊತ್ತ 11,000ರಿಯಾಲ್ ಅಂದರೆ ಹದಿಮೂರು ಲಕ್ಷ ರೂಪಾಯಿಗೂ ಹೆಚ್ಚು

ದೋಹಾ, ಜೂನ್ ೧೩: ಹಣ ಯಾರಿಗೆ ಬೇಡ, ಅದೂ ಸುಲಭವಾಗಿ ಸಿಕ್ಕುತ್ತಿರುವಾಗ? ಮಂಗಳೂರಿನ ಬಾಲಕೃಷ್ಣ ಶೆಟ್ಟಿ ಸಹಾ ಉದ್ಯೋಗನಿಮಿತ್ತ ಕತರಿಗೆ ಬಂದ ಸಾಮಾನ್ಯ ಯುವಕ. ಸಾವಿರದಿನ್ನೂರು ರಿಯಾಲ್ ಅಥವಾ ಹದಿನಾಲ್ಕು ಸಾವಿರ ಭಾರತೀಯ ರೂಪಾಯಿ ಸಂಬಳ. ಏರುತ್ತಿರುವ ಜೀವನವೆಚ್ಚ, ಕಷ್ಟಕರ ಜೀವನ, ಸುಲಭವಾಗಿ ಪ್ರಯಾಣಿಕರೊಬ್ಬರು ಬಿಟ್ಟು ಹೋದ ಹದಿಮೂರು ಲಕ್ಷ ರೂಪಾಯಿ ಉಪಯೋಗಿಸಿ ಕೊಂಡು ಮನೆಯಲ್ಲಿ ಆರಾಮವಾಗಿರಬಹುದಾಗಿತ್ತು. ಆದರೆ ನಮ್ಮ ಮಣ್ಣಿನ ಮಹಿಮೆ, ಬಾಲಕೃಷ್ಣರ ಆತ್ಮಸಾಕ್ಷಿ ಇದಕ್ಕೆ ಒಪ್ಪಲಿಲ್ಲ. ಹಣ ಕಳೆದುಕೊಂಡವರು ಪಡಬಹುದಾದ ಪಾಡು, ಈ ಹಣವನ್ನು ತೆಗೆದುಕೊಂಡರೆ ಭಗವಂತನಿಗೆ ಹೇಳುವ ಮಾತು ಮನಸ್ಸಿಗೆ ಬಂದು ಮಾನವೀಯತೆಗೇ ಹೆಚ್ಚು ಒತ್ತು ನೀಡಿ ಸಿಕ್ಕ ಹಣವನ್ನು ಹಿಂತಿರುಗಿಸುವ ನಿರ್ಧಾರ ತೆಗೆದುಕೊಂಡರು. 

ಆ ಬಳಿಕ ಅವರು ಪ್ರಾಮಾಣಿಕವಾಗಿ ಟ್ಯಾಕ್ಸಿ ಕಂಪನಿಯ (ಮೋವಾಸಲಾತ್) ಕಛೇರಿಯಲ್ಲಿ ನೀಡಿ ಹಣ ಕಳೆದುಕೊಂಡವರು ಕರೆ ನೀಡಿದರೆ ಹಿಂತಿರುಗಿಸಲು ಕೇಳಿಕೊಂಡರು.  ಆ ಬಳಿಕ ನಿರೀಕ್ಷೆಯಂತೆ ಹಣ ಕಳೆದುಕೊಂಡವರು ಕರೆ ಮಾಡಿದಾಗ ಚೀಲದೊಳಗಿದ್ದ ವಸ್ತು ಹಾಗೂ ಹಣವನ್ನು ಪರಾಮರ್ಶಿಸಿ ನಿಜವಾದ ಮಾಲಿಕರಿಗೆ ಹಣವನ್ನು ಮೊವಾಸಲಾತ್ ಅಧಿಕಾರಿಗಳು ಹಿಂತಿರುಗಿಸಿದ್ದಾರೆ.

ಬಾಲಕೃಷ್ಣರವರ ಪ್ರಾಮಾಣಿಕತೆಯನ್ನು ಇಡಿಯ ಮೊವಾಸಲಾತ್ ತಂಡ ಕೊಂಡಾಡಿದೆ.  ಸಂಸ್ಥೆಯ ಅಧಿಕಾರಿಗಳು ಇವರ ಕಾರ್ಯಕ್ಷಮತೆ ಹಾಗೂ ಮಾನವೀಯತೆಯನ್ನು ಪ್ರಶಂಸಿಸಿ ಹಲವು ಬಹುಮಾನಗಳನ್ನು ನೀಡಿ ಗೌರವಿಸಿದ್ದಾರೆ.

ಹಿರಿಯ ಮೊವಾಸಲಾತ್ ಅಧಿಕಾರಿಗಳಾದ ಅಹ್ಮದ್ ಬುಶರ್ಬೆಕ್ ಅಲ್ ಮನ್ಸೂರಿ, ಅಹ್ಮದ್ ಅಲ್ ಅನ್ಸಾರಿ ಹಾಗೂ ಇನ್ನಿತರ ಅಧಿಕಾರಿಗಳು ಬಾಲಕೃಷ್ಣರನ್ನು ತಮ್ಮ ಕಛೇರಿಗೆ ಆಹ್ವಾನಿಸಿ ಬೆನ್ನು ತಟ್ಟಿ ಅಭಿನಂದಿಸಿದ್ದಾರೆ.

ಬಾಲಕೃಷ್ಣರವರ ಪ್ರಾಮಾಣಿಕತೆ ತುಳುನಾಡಿನವರಿಗೆ ಹೆಮ್ಮೆಯ ವಿಷಯವಾಗಿದೆ, ಹಾಗೂ ಈ ಗುಣಗಳಿಂದಾಗಿಯೇ ಗಲ್ಫ್ ರಾಷ್ಟ್ರಗಳಲ್ಲಿ ಮಂಗಳೂರಿನವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂದು ತುಳು ಕೂಟ ಕತರ್ ಅಧ್ಯಕ್ಷರಾದ ರವಿಶೆಟ್ಟಿಯವರು ತಿಳಿಸಿದ್ದಾರೆ.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷರಾದ ಜನಾಬ್ ಸೈಯದ್ ಅಬ್ದುಲ್ ಹಾಯ್ ಅವರೂ ಬಾಲಕೃಷ್ಣರವರನ್ನು ಪ್ರಶಂಸಿಸಿದ್ದಾರೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಇಕ್ಬಾಲ್ ಮನ್ನ, ದೋಹ. ಕನ್ನಡ ಅನುವಾದ: ಅರ್ಶದ್ ದುಬೈ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-13


ಪ್ರತಿಸ್ಪಂದನ
VIJAY BRAHMAVAR, BRAHMAVAR-UDUPI
2008-07-27
CONGRTS! MR. BALAKRISHNA! PROUD OF YOU. WHAT YOU DONE AND SHOWED HOW MANGALOREANS ARE LIVING IN MIDDLE EAST HELPING EACH OTHER BRINGING COASTAL NAME ON TOP IN WORLD KEEP IT UP - BEST REGARDS, - VIJAY BRAHMAVAR FROM BAHRAIN
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಏಷ್ಯನ್ ಒಳಾಂಗಣ ಕ್ರೀಡಾಕೂಟಕ್ಕೆ ೩೨ ಸದಸ್ಯರ ದಂಡು; ಭಾರತ ತಂಡಕ್ಕೆ ಅಂಜು ಬಾಬಿ ಜಾರ್ಜ್ ನೇತೃತ್ವ
»ಗಿನ್ನೆಸ್ ದಾಖಲೆ ಸೇರಿದ ಕತರ್ ಕೆ.ಎಫ್.ಸಿ.
»ತುಂಡಾದ ಕೇಬಲ್ : ಅಸ್ತವ್ಯಸ್ತವಾದ ಕತರ್ ಟೆಲಿಫೋನ್ ವ್ಯವಸ್ಥೆ
»ಅನಿವಾಸಿಗಳಿಂದ ಆಚರಿಸಲ್ಪಟ್ಟ ಗಣತಂತ್ರ ದಿವಸ : ಹಬ್ಬದ ವಾತಾವರಣ
»ಇನ್ನಷ್ಟು ದುಬಾರಿಯಾಗಲಿರುವ ಭಾರತದ ಅಕ್ಕಿ.
»ತಿಜೋರಿ ಕದ್ದು ಒಡೆಯಲನುವಾಗುತ್ತಿರುವಾಗಲೇ ಪೋಲೀಸರಿಗೆ ಸಿಕ್ಕಿಬಿದ್ದ ಕಳ್ಳರು
»ಜೆಟ್ ಏರ್ ವೇಸ್ ಪ್ರಾರಂಭಿಸಿರುವ ದೋಹಾ-ಮುಂಬೈ,ಕಲ್ಲಿಕೋಟೆ ನೇರ ವಿಮಾನಯಾನ
»ಉದ್ಯೋಗಕ್ಕಾಗಿ ಬಂದವರು ಒಂಟೆಕಾವಲಿಗೆ: ಭಾರತೀಯದ ಅಳಲು
»ದೋಹ: ಕರ್ನಾಟಕ ಶಾಸ್ತ್ರೀಯ ಸಂಗೀತಪ್ರಿಯರಿಗೆ ಅಪರೂಪದ ಉಪಚಾರ
»ಸಾರಿಗೆ ಕಾನೂನುಗಳ ಅನುವಾದ ಅಗತ್ಯ: ಏಶಿಯಾ ಮೂಲದ ಅನಿವಾಸಿಗಳ ಬೇಡಿಕೆ
»ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಬಂದರೆ ದಂಡ: ಕತರ್ ಸಾರಿಗೆ ಸಚಿವಾಲಯ
»ಏರುತ್ತಿರುವ ಮೊಟ್ಟೆ ಬೆಲೆ, ಆತಂಕದಲ್ಲಿ ಬೇಕರಿಗಳು.
»ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ವಿದೇಶಿಯರ ಸಂಖ್ಯೆ ೭೦ ಮಿಲಿಯನ್!
»ಡಾಲರ್ ಮೇಲಿನ ಅವಲಂಬನೆಯಲ್ಲಿ ಬದಲಾವಣೆ ಇಲ್ಲ, ಜಿಸಿಸಿ.
»ದಾನಿಗಳಿಗೆ ಸನ್ಮಾನ:(THE Indian Community Benevolent Fund (ICBF)
»ಐಸಿಸಿ ಉತ್ಸವದಲ್ಲಿ ಮನಸೆಳೆದ ಮಕ್ಕಳ ನೃತ್ಯ
»ಆಯಾಗಳ ನೇಮಕಕ್ಕೆ ತಾತ್ಕಾಲಿಕ ತಡೆಯಾಜ್ಞೆ ಇನ್ನೂ ಪ್ರಸ್ತುತ
»ಐಡಿಯಲ್ ಇಂಡಿಯನ್ ಸ್ಕೂಲ್ ವಿಧ್ಯಾರ್ಥಿ ಅಕಾಲಿಕ ಮ್ರತ್ಯು
»೧೫ ವರ್ಷ ಒಳಗಿನವರ ಕ್ರಿಕೆಟ್-ನಾಯಕತ್ವ ವಹಿಸಿದ ಮಂಗಳೂರಿನ ಬಾಲಕ
»500ಕ್ಕೂ ಹೆಚ್ಚು ಮಕ್ಕಳ ಉಚಿತ ನೇತ್ರ ತಪಾಸಣೆ
»2016ರ ಒಲಿಂಪಿಕ್ಸ್ ಕ್ರೀಡೆಗಳ ಪ್ರಯೋಜಕತೆಗೆ ಕತಾರ್ ಯತ್ನ
»೨೦ನೆ ಮಾಂಟ್ರಿಯಲ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕತಾರ್
»ಇಪ್ಪತ್ತು ವರ್ಷ ಪೂರೈಸಿದ ಮೊಬೈಲ್ ಟೆಲಿಕಾಂ ಕಂಪನಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri