ಅಮೆರಿಕದಲ್ಲಿ ಭಾರತ ಸ್ವಾತಂತ್ರ್ಯ ಪೆರೇಡ್‌ಗೆ ದೀಪಿಕಾ ಪಡುಕೋಣೆ |
ಪ್ರಕಟಿಸಿದ ದಿನಾಂಕ : 2008-06-12
ನ್ಯೂಯಾರ್ಕ್: ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅಮೆರಿಕದಲ್ಲಿ ಭಾರತದ 61 ನೇ ಸ್ವಾತಂತ್ರ್ಯೋತ್ಸವದಂಗವಾಗಿ ನಡೆಯಲಿರುವ 28 ನೇ ’ಇಂಡಿಯಾ ಡೇ ಪೆರೇಡ್’ನಲ್ಲಿ ’ಗ್ರ್ಯಾಂಡ್ ಮಾರ್ಷಲ್’ ಗೌರವ ಪಡೆಯಲಿದ್ದಾರೆ.
ಈ ಆಚರಣೆ ಅಮೆರಿಕದ ಮ್ಯಾನ್‌ಹಟನ್‌ನ ಮ್ಯಾಡಿಸನ್ ಅವೆನ್ಯೂದಲ್ಲಿ ಆಗಸ್ಟ್ 17 ರಂದು ನಡೆಯಲಿದೆ. ಸಮಾರಂಭಕ್ಕೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಆಮಂತ್ರಿಸಲಾಗಿದೆ.
ಪ್ರತಿ ವರ್ಷ ಇಂಡಿಯಾ ಡೇ ದಿನಾಚರಣೆಯನ್ನು ಅಮೆರಿಕದ ಭಾರತೀಯ ಸಂಘಟನೆಗಳ ಒಕ್ಕೂಟ ಆಯೋಜಿಸುತ್ತದೆ.ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ಸಭೆಯ ನಂತರ ಎಫ್‌ಐಎ ಅಧ್ಯಕ್ಷ ಯಶ್ ಪಾಲ್ ಸೋಯಿ ಅವರು ಈ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ.
ಕಳೆದ ವರ್ಷದ ಆಚರಣೆಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಗ್ರ್ಯಾಂಡ್ ಮಾರ್ಷಲ್ ಆಗಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-12
|
|
|