ಕತರ್: ಜೂನ್ 13 ರಂದು ರಕ್ತದಾನ ಶಿಬಿರ : ತುಳು ಕೂಟ ಕತರ್ ಆಯೋಜನೆ |
ಪ್ರಕಟಿಸಿದ ದಿನಾಂಕ : 2008-06-09
ಅಮೂಲ್ಯ ರಕ್ತದಾನ ಮಾಡಿ ಜೀವ ಉಳಿಸಲು ಕರೆ : ರವಿ ಶೆಟ್ಟಿ
ಕತರ್, ಜೂನ್ 9: ತುಳು ಕೂಟ ಕತರ್, ಎಂದಿನಂತೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಜೊತೆ ವಿಭಿನ್ನವಾದ ರಕ್ತದಾನ ಶಿಬಿರವನ್ನು ಬರುವ ಶುಕ್ರವಾರದಂದು ಹಮ್ಮಿಕೊಂಡಿದೆ. ದೋಹಾದ ಹಮದ್ ಮೆಡಿಕಲ್ ಕಾರ್ಪೋರೇಶನ್ (ಹೆಚ್.ಎಮ್.ಸಿ), ಬ್ಲಡ್ ಡೋನರ್ಸ್ ಯುನಿಟ್, ಬ್ಲಡ್ ಬ್ಯಾಂಕ್ ಗೇಟ್ ಸಂಖ್ಯೆ ೩ ರಲ್ಲಿ ಆಯೋಜಿತವಾಗಿರುವ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅಮೂಲ್ಯ ಜೀವಗಳನ್ನುಳಿಸುವಲ್ಲಿ ತುಳು ಬಾಂಧವರು ಮುಂದೆ ಬರಬೇಕೆಂದು ತುಳು ಕೂಟ ಕತರ್ ಕರೆ ನೀಡಿದೆ.
ಬೆಳಿಗ್ಗೆ ಎಂಟು ಘಂಟೆಯಿಂದ ಪ್ರಾರಂಭವಾಗುವ ಅಭಿಯಾನ ಹನ್ನೊಂದು ಘಂಟೆಯವರೆಗೂ ನಡೆಯಲಿದ್ದು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಹಾಗೂ ಸಹೃದಯರು ರಕ್ತದಾನ ಮಾಡಬೇಕೆಂದು ತುಳು ಕೂಟ ಕತರ್ ಅಧ್ಯಕ್ಷ ರವಿಶೆಟ್ಟಿಯವರು ಮನವಿ ಮಾಡಿಕೊಂಡಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಹಾಗೂ ನೋದಣೆಗಾಗಿ ಸಂಪರ್ಕಿಸಿ:
ರವಿ ಶೆಟ್ಟಿ : 5569578 ಇಕ್ಬಾಲ್ ಮನ್ನಾ : 4416430 / 5253904 ಶ್ರೀಧರ್ ನಾಯಕ್ : 5182799 ಶ್ರೀಮತಿ ವೀಣಾ ರಾವ್ : 4427270 ವಿವಿಯನ್ ಡಿ’ಸೋಜಾ : 5823008
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ, ಕತರ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-09
|
|
|