2500 ಕೋಟಿ ವಂಚಿಸಿದ 3ಎನ್‌ಆರ್‌ಐಗಳಿಗೆ ಜೈಲು |
ಪ್ರಕಟಿಸಿದ ದಿನಾಂಕ : 2008-06-07
ಲಂಡನ್: ಅಮೆರಿಕ ಹಾಗೂ ಬ್ರಿಟನ್‌ನ ವಿವಿಧ ಬ್ಯಾಂಕ್‌ಗಳಿಗೆ 2500 ಕೋಟಿ ರು.ಗೂ ಹೆಚ್ಚಿನ ವಂಚನೆ ಮಾಡಿದ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ ಮೂವರು ಭಾರತೀಯ ಮೂಲದ ವ್ಯಕ್ತಿಗಳಿಗೆ ಲಂಡನ್‌ನ ನ್ಯಾಯಾಲಯ ಕ್ರಮವಾಗಿ ಒಂಬತ್ತೂವರೆ, ಎಂಟೂವರೆ ಹಾಗೂ ಏಳೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವೀರೇಂದ್ರ ರಸ್ತೋಗಿ, ಆನಂದ್ ಜೈನ್ ಹಾಗೂ ಗೌತಮ್ ಮಜುಂದಾರ್ ಶಿಕ್ಷೆಗೊಳಗಾದ ಎನ್‌ಆರ್‌ಐಗಳಾಗಿದ್ದಾರೆ. ಇದೊಂದು ದೊಡ್ಡ ಅಪರಾಧ ಪ್ರಕರಣವಾಗಿದೆ ಅಲ್ಲದೇ ವಿಚಾರಣೆ ವೇಳೆ ಈ ಮೂವರು ತಮ್ಮ ತಪ್ಪಿನ ಬಗ್ಗೆ ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ.
ಹೀಗಾಗಿ ಈ ಮೂವರು ಈ ಪ್ರಮಾಣದ ಶಿಕ್ಷೆಗೆ ಅರ್ಹರು ಎಂದು ನ್ಯಾಯಾಲಯ ತೀರ್ಪು ನೀಡಿತು. ಈ ಮೂವರು ಆರ್‌ಬಿಜಿ ರಿಸೋರ್ಸ್ ಎಂಪೈರ್ ಹೆಸರಿನ ಕಂಪನಿ ಮೂಲಕ 324 ಕಂಪನಿಗಳೊಂದಿಗೆ ಲೋಹದ ವಹಿವಾಟು ಉದ್ಯಮ ನಡೆಸುತ್ತಿರುವುದಾಗಿ ಹೇಳಿ ಬ್ಯಾಂಕ್‌ಗಳಿಂದ ಭಾರಿ ಪ್ರಮಾಣದಲ್ಲಿ ಹಣ ಪಡೆದಿದ್ದರು. ವಿಚಾರಣೆ ವೇಳೆ ಇವರು ನೀಡಿದ್ದ ಭಾರತದಲ್ಲಿದ್ದ ಒಂದು ಕಂಪನಿ ದನದ ಕೊಟ್ಟಿಗೆಯಾಗಿರುವುದು ಪತ್ತೆಯಾಗಿತ್ತು, ಅಮೆರಿಕದಲ್ಲಿನ ಕಂಪನಿ ವಿಳಾಸ ಲಾಂಡ್ರಿಯದ್ದಾಗಿತ್ತು, ಬ್ರಿಟನ್‌ನಲ್ಲಿ ನೀಡಿದ ವಿಳಾಸದ ಕೊಠಡಿಯಲ್ಲಿ ಇದ್ದಿದ್ದು ಕೇವಲ ಒಂದು ಟೇಬಲ್ ಹಾಗೂ ಒಂದು ಕುರ್
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-07
|
|
|