ಸೂರ್ಯ ಮುಳುಗದ ನಾಡಿನಲ್ಲಿ ಜೂನ್‌ನಲ್ಲಿ ಕನ್ನಡ ಕಲರವ |
ಪ್ರಕಟಿಸಿದ ದಿನಾಂಕ : 2008-06-06
ಬ್ರಿಟನ್: ಸೂರ್ಯ ಮುಳುಗದ ನಾಡು ಬ್ರಿಟನ್‌ನಲ್ಲಿ ಜೂನ್ ತಿಂಗಳ ತುಂಬಾ ಕನ್ನಡದ ಕಲರವ. ಜೂನ್ ತಿಂಗಳಲ್ಲಿ ಹಲವು ಕಾರ್ಯಕ್ರಮಗಳು ಬ್ರಿಟನ್‌ನ ಹಲವೆಡೆ ನಡೆಯಲಿವೆ.
ಮೈಸೂರು ಚಿತ್ರಕಲೆ ಪ್ರದರ್ಶನ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಜೂ.೫ರಿಂದ ಜೂ.೧೨ರವರೆಗೆ ಪ್ರಭಾ ಮಲ್ಲೇಶ್ ಅವರು ರಚಿಸಿದ ಮೈಸೂರು ಚಿತ್ರಕಲೆಗಳ ಪ್ರದರ್ಶನ ನಡೆಯಲಿದೆ.
ರುದ್ರಪಟ್ಟಣಂ ಸಹೋದರರಿಂದ ಕರ್ನಾಟಕ ಸಂಗೀತ ಜೂ.೮ರಂದು ಸಂಜೆ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ರುದ್ರಪಟ್ಟಣಂ ಸಹೋದರರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ರುದ್ರಪಟ್ಟಣಂ ಸಹೋದರರರಾದ ಆರ್.ಎನ್. ತ್ಯಾಗರಾಜನ್ ಹಾಗೂ ಆರ್.ಎನ್. ತಾರಾನಾಥನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವಯಲಿನ್‌ನಲ್ಲಿ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಹಾಗೂ ಬಾಲಚಂದ್ರನ್ ಮೃದಂಗದಲ್ಲಿ ಇವರಿಗೆ ಸಾಥ್ ನೀಡಲಿದ್ದಾರೆ.
೨೧ರಂದು ಪಂಡಿತ್ ಮಾಧವಗುಡಿ ಸಂಗೀತ ಸಂಜೆ ಇಲ್ಲಿನ ನೆಹರೂ ಕೇಂದ್ರದಲ್ಲಿ ಪಂಡಿತ ಮಾಧವಗುಡಿ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಮಾಧವ್ ಅವರು ೨೭ ಹಾಗೂ ೨೮ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿಯೂ ಇವರ ಕಾರ್ಯಕ್ರಮ ನಡೆಯಲಿದೆ. ನೆಹರೂ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ ಬ್ರಿಟನ್ ಕನ್ನಡಿಗರ ಸಂಘದ ಪವನ್ ಮೈಸೂರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-06
|
|
|