|
|
|
ಇಂಡಿಯನ್ ಎಜುಕೇಶನ್ ಸ್ಕೂಲ್-ಗ್ರೀನ್ ಒಲಿಂಪಿಯಾಡ್ ನಲ್ಲಿ ಉತ್ತಮ ಫಲಿತಾಂಶ |
ಪ್ರಕಟಿಸಿದ ದಿನಾಂಕ : 2007-12-11
ಕುವೈಟ್, ಡಿಸೆಂಬರ್ ೧೧: ಅಂತರ್ರಾಷ್ಟ್ರೀಯ ಮಟ್ಟದಲ್ಲಿ ೩೦೦ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದ ವಾರ್ಷಿಕ ಗ್ರೀನ್ ಒಲಿಂಪಿಯಾಡ್ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸ್ಪರ್ಧೆಯನ್ನು ಪರಿಸರ ಕಾಳಜಿಯನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ವರ್ಷ ತಮ್ಮ ಪ್ರಥಮ ವಾರ್ಶಿಕೋತ್ಸವವನ್ನು ಆಚರಿಸಿದ ಐಇಎಸ್ ೧೭ ಸ್ಪರ್ಧಿಗಳಲ್ಲಿ ೧೦ ವಿದ್ಯಾರ್ಧಿಗಳು ಜಯಗಳಿಸುವುದರೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿತು.
ಬಿ. ಸಾಯಿಶಿವಪ್ರಸಾದ್ ತಮ್ಮ ಅರ್ಹ ಪ್ರತಿಭೆಗೆ ಮೊದಲ ರ್‍ಯಾಂಕ್ ಪಡೆದರು. ಮೇಘನಾ ಮೆನನ್ ಮತ್ತು ಜೋಸೆಲೀನ್ ಮೋನಿ ಸಮಾನ ಅಂಕಗಳೊಂದಿಗೆ ಎರಡನೆಯ ಶ್ತಾನ ಹಂಚಿಕೊಂಡರು. ಮೂರನೆಯ ಸ್ಥಾನವನ್ನು ಸಮಾನ ಅಂಕಗಳಿಂದ ಗಾಧಕೃಷ್ಣ, ಫವಾಜ್ ಮೊಹಮ್ಮದ್ ಹಾಗೂ ನಿಸರ್ಗ್ ಸಂಚೇಲಾ ಹಂಚಿಕೊಂಡರು. ವಿದ್ಯಾ ವೆಂಕಟೇಶನ್ ೭ನೆಯ ಸ್ಥಾನ ಪಡೆದರು. ವಿಷ್ಣು ಸುನಿಲ್ ಕುಮಾರ್, ಕ್ರಿಸ್ಟೀ ಸ್ಯಾಮ್ ರಾಯ್ ಮತ್ತು ತನ್ವಿ ಜೋಶಿ ಎಂಟನೆಯ ಸ್ಥಾನ ಹಂಚಿಕೊಂಡರು. ಒಟ್ಟಾರೆ ಐಇಎಸ್ ಮೊದಲ ಬಾರಿಗೆ ಭಾಗವಹಿಸಿ ಅತ್ಯುತ್ತಮ ಸಾಧನೆ ಸಾಧಿಸಿದೆ. ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿನ ಜಯ ಸಾಧಿಸಲು ತುದಿಗಾಲಿನಲ್ಲಿ ನಿಂತಿದೆ.
ಫೋಟೋಗಳ ವಿವರ ಹೀಗಿದೆ:
ಬಿ. ಸಾಯಿಶಿವಪ್ರಸಾದ್, ಮೇಘನಾ ಮೆನನ್, ಜೋಸೆಲೀನ್ ಮೋನಿ, ಫವಾಜ್ ಮೊಹಮ್ಮದ್, ಗಾಧಕೃಷ್ಣ, ನಿಸರ್ಗ್ ಸಂಚೇಲಾ ಮತ್ತು ವಿದ್ಯಾ ವೆಂಕಟೇಶನ್.
ವರದಿಯ ವಿವರಗಳು |
 |
ಕೃಪೆ : ಕುವೈಟ್ ಸಮಾಚಾರ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-11
|
|
|
|
|