ದೋಹ: ಕರ್ನಾಟಕ ಶಾಸ್ತ್ರೀಯ ಸಂಗೀತಪ್ರಿಯರಿಗೆ ಅಪರೂಪದ ಉಪಚಾರ |
ಪ್ರಕಟಿಸಿದ ದಿನಾಂಕ : 2007-12-11
ದೋಹಾ, ಡಿಸೆಂಬರ್ ೧೦. ದೋಹಾದಲ್ಲಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಿಯರಿಗೆ ಇಂದು ನಡೆದ ಸಂಗೀತಸಭೆಯಲ್ಲಿ ಖ್ಯಾತ ಸಂಗೀತಕಾರ ಪದ್ಮಭೂಷಣ ಟಿವಿ ಶಂಕರನಾರಾಯಣ ಅವರು ಅತ್ಯಮೋಘ ಪ್ರದರ್ಶನ ನೀಡಿದರು.
ಟಿವಿಎಸ್ ಅವರೊಂದಿಗೆ ಪತ್ನಿ ವಿಜಯಾ, ಮೃದಂಗಂ ವಾದಕ ಬಾಲಾಜಿ ಹಾಗೂ ಪಿಟೀಲು ವಾದಕ ಶ್ರೀರಾಮ್ ಉಪಸ್ಥಿತರಿದ್ದರು.
ಭಾರತೀಯ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಮ್ಯೂಸಿಕ್ ಲವರ್ಸ್ ಸಂಘಟನೆ ಆಯೋಜಿಸಿದ್ದ ಅಪರೂಪದ ಸಂಗೀತಸಭೆಯಲ್ಲಿ ಟಿವಿಎಸ್ ಎಂದೇ ಪ್ರಖ್ಯಾತರಾಗಿರುವ ಖ್ಯಾತ ಸಂಗೀತಕಾರ ಪದ್ಮಭೂಷಣ ಟಿವಿ ಶಂಕರನಾರಾಯಣ ಅವರು ತಮ್ಮ ಸೊಗಸಾದ ಹಾಡುಗಾರಿಕೆಯಿಂದ ಸಂಗೀತಪ್ರಿಯರನ್ನು ರಂಜಿಸಿದರು.
ಪ್ರತಿ ರಾಗವನ್ನೂ ಅತ್ಯಂತ ಸಮರ್ಪಕವಾಗಿ ಹಾಡಿದ ಟಿವಿಎಸ್ ಅವರಿಗೆ ಅವರ ಪತ್ನಿ ವಿಜಯಾ ಶಂಕರನಾರಾಯಣ ಅವರು ತಮ್ಮ ದನಿಗೂಡಿಸಿ ಸಂಗೀತಸಭೆಯನ್ನು ಸ್ಮರಣಾರ್ಥವನ್ನಾಗಿಸುವಲ್ಲಿ ಯಶಸ್ವಿಯಾದರು.
ಮೃದಂಗಂ ಹಾಗೂ ಪಿಟೀಲು ವಾದಕರೂ ಈ ಯಶಸ್ಸಿಗೆ ತಮ್ಮ ಅಮೋಘ ಕಾಣಿಕೆ ಸಲ್ಲಿಸಿದರು.
ಮ್ಯೂಸಿಕ್ ಲವರ್ಸ್ ಸಂಘಟನೆಯ ವತಿಯಿಂದ ಕತಾರ್ ಭಾರತೀಯ ರಾಯಭಾರಿಯಾಗಿರುವ ಶ್ರೀ ಜಾರ್ಜ್ ಜೋಸೆಫ್ ಅವರು ಸಂಗೀತಸಭೆಯ ಬಳಿಕ ಟಿವಿಎಸ್ ರವರಿಗೆ ಶಾಲು ಹೊದಿಸಿ ಸಾಂಪ್ರಾದಾಯಿಕ ಸನ್ಮಾನ ನೀಡಿದರು. ದೋಹಾ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕರಾದ ಆರ್. ಸೀತಾರಾಮನ್ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-11
|
|
|