ದೋಹಾ: ತುಳು ಕೂಟ ಕತರ್ ಅಧ್ಯಕ್ಷರಾಗಿ ರವಿಶೆಟ್ಟಿ ಆಯ್ಕೆ : ಹೊಸ ಸಮಿತಿ ಪ್ರಕಟಣೆ |
ಪ್ರಕಟಿಸಿದ ದಿನಾಂಕ : 2008-06-01
ಧರ್ಮಾರ್ಥ ಹಾಗೂ ಸಮಾಜ ಕಾರ್ಯಗಳಿಗೆ ಆದ್ಯತೆ : ಹೊಸ ಸಮಿತಿಯ ಅಧ್ಯಕ್ಷರ ಆಶ್ವಾಸನೆ
ದೋಹಾ, ಜೂನ್ 1: ತುಳು ಕೂಟ ಕತಾರ್ 2008-2010 ರ ದ್ವೈವಾರ್ಶಿಕ ಅವಧಿಗೆ ಹೊಸ ಸಮಿತಿಯನ್ನು ಆಯ್ಕೆ ಮಾಡಿದೆ. ಈ ಬಾರಿ ರವಿಶೆಟ್ಟಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದೋಹಾದ ಇಂಡಿಯನ್ ಕಲ್ಚರಲ್ ಸೆಂಟರ್ (ಐಸಿಸಿ) ಸಭಾಂಗಣದಲ್ಲಿ ನಡೆದ ವಾರ್ಶಿಕೋತ್ಸವ ಸಮಾರಂಭದಲ್ಲಿ ರವಿಶೆಟ್ಟಿಯವರನ್ನು ಬಹುಮತದಿಂದ ಆಯ್ಕೆ ಮಾಡಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ದಿವಾಕರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಿದ್ದ ಹಿಂದಿನ ಸಮಿತಿಗೆ ವಿದಾಯ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದಿವಾಕರ ಪೂಜಾರಿಯವರು ಸ್ವಾಗತಿಸಿ ತಮ್ಮ ಕಾರ್ಯಾವಧಿಯಲ್ಲಿ ನಡೆದ ಕಾರ್ಯಕಲಾಪಗಳ ವಿವರಣೆ ನೀಡಿದರು. ಹಿಂದಿನ ಸಮಿತಿಯ ಕಾರ್ಯದರ್ಶಿಗಳಾದ ರಾಜಶೇಖರ್ ಅವರು ವಾರ್ಷಿಕ ವರದಿ ಹಾಗೂ ಹಿಂದಿನ ಸಭೆಯ ಮಹತ್ವದ ವಿಷಯಗಳನ್ನು ಸಭೆಯಲ್ಲಿ ಅರುಹಿದರು. ಖಜಾಂಚಿಯವರ ಅನಿವಾರ್ಯ ಅನುಪಸ್ಥಿತಿಯಲ್ಲಿ ದಿವಾಕರ ಪೂಜಾರಿಯವರೇ ಹಿಂದಿನ ಅವಧಿಯ ಖರ್ಚುವೆಚ್ಚಗಳನ್ನು ನೀಡಿದರು. ಈ ವಿವರಗಳನ್ನು ಸದಸ್ಯರು ಪರಿಶೀಲಿಸಿ ತಮ್ಮ ಒಪ್ಪಿಗೆ ನೀಡಿದರು. ಆ ಬಳಿಕ ಹೊಸ ಸಮಿತಿಯನ್ನು ಸಭೆಗೆ ಪರಿಚಯಿಸಲಾಯಿತು.
ಹೊಸ ಸಮಿತಿಯ ಸದಸ್ಯರ ವಿವರಗಳು ಈ ಕೆಳಗಿನಂತಿವೆ:
Mr. M. Ravi Shetty - President Mr. Abdulla Mono - Vice President Mr. Dinesh Chandra Shetty- General Secretary Mr. Vivian D'Souza- Join Secretary Mr. Prakash Rao- Treasurer Mr. Mohan J- Sports Secretary Mrs. Sudha Manjunath- Cultural Secretary Mrs. Veena Rao- Ladies Co-ordinator
ಆ ಬಳಿಕ ನವ ಅಧ್ಯಕ್ಷರಾದ ರವಿ ಶೆಟ್ಟಿಯವರು ತಮ್ಮ ಭಾಷಣದಲ್ಲಿ ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದರು. ತಮ್ಮ ಸಮಿತಿಯು ಸಂಘದ ಏಳ್ಗೆಗೆ ಸದಾ ಶ್ರಮಿಸುವುದು ಹಾಗೂ ಧರ್ಮಾರ್ಥ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದು ಎಂದು ಪ್ರಕಟಿಸಿದರು.
ಹಿಂದಿನ ಸಮಿತಿಯ ಕ್ರೀಡಾ ಕಾರ್ಯದರ್ಶಿ ಸುಮನ್ ಲಾಲ್ ಅವರು ವಂದನಾರ್ಪಣೆ ನೀಡಿದರು. ಸಂಘದ ಹಿರಿಯ ಸದಸ್ಯರಾದ ಇಕ್ಬಾಲ್ ಮನ್ನಾ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ, ದೋಹಾ, ಕತರ್. ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-01
|
|
| C N RAO, saudi arabia | 2008-06-01 | | CONGRATULATION TO NEW COMMITTEE MEMBERS, NICE COVERAGE FROM IQBAL MANNA, FROM SAUDI WE ABLE TO SEE THE PICTURES OF AGM FUNCTION.
NICE TO SEE AND READ THE GOOD COVERAGE OF PAST COMMITTEE, HOPE BETTER WORK FROM PRESENT ELECTED COMMITTE. GOD BLESS ALL TULU BANDHAVA\'S.
BEST REGARDS
FROM
C N RAO
K S A. |
|