ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ಪ್ರತಿಷ್ಠಿತ 'ಮಯೂರ ಪ್ರಶಸ್ತಿ’ ಗೆ ಶ್ರೀ ಬಿ.ಜಿ. ಮೋಹನದಾಸ ರವರ ಆಯ್ಕೆ

ಶಾರ್ಜಾ, ಡಿಸೆಂಬರ್ ೧೦.  ಕಳೆದ ಕೆಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪರಂಪರೆಯಂತೆ ಈ ವರ್ಷವೂ ಶಾರ್ಜಾ ಕನ್ನಡ ಸಂಘ ಯು.ಎ.ಇ.ಯಲ್ಲಿ ಕನ್ನಡಕ್ಕಾಗಿ ಶ್ರಮಿಸಿ ಕನ್ನಡದ ಏಳಿಗೆಗೆ ತಮ್ಮ ಯೋಗದಾನವನ್ನು ನೀಡಿರುವ ಉದ್ಯಮಿಗಳು, ಕಲಾಕಾರರು, ಸಮಾಜಸೇವಕರು ಹಾಗೂ ಬರಹಗಾರರಿಗೆ ಪ್ರತಿಷ್ಠಿತ ಮಯೂರ ಪ್ರಶಸ್ತಿ ನೀಡುವ ಮೂಲಕ ಅವರ ಸಾಧನೆಗೆ ಮೆರಗು ನೀಡುತ್ತಿದೆ. 

ಈ ಪ್ರಶಸ್ತಿಯು ಶಾರ್ಜಾ ಕನ್ನಡ ಸಂಘದ ಸ್ಥಾಪಕರಲ್ಲೊಬ್ಬರಾದ ದಿವಂಗತ ಉಮೇಶ್ ನಂತೂರ್ ಅವರ ಕಲ್ಪನೆಯ ಕೂಸಾಗಿದ್ದು ಇಂದು ಯು.ಎ.ಇ.ಯಲ್ಲಿ ನೀಡಲ್ಪಡುವ ಪ್ರಮುಖ ಪ್ರಶಸ್ತಿಯಾಗಿದೆ.

ಈ ವರ್ಷ ಸಂಘದ ವಿಶೇಷ ಸಮಿತಿಯು ಅವಿರೋಧವಾಗಿ ದುಬೈ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ, ಯು.ಎ.ಇ ಯ ಭಾರತೀಯ ಔಷಧೀಯ ವೇದಿಕೆಯ ಮಾಜಿ ಅಧ್ಯಕ್ಷರೂ ಆದ ಶ್ರೀ ಬಿ.ಜಿ. ಮೋಹನದಾಸ್ ಅವರನ್ನು ಮಯೂರ ಪ್ರಶಸ್ತಿ-೨೦೦೭ ನೀಡೆ ಸನ್ಮಾನಿಸಲು ನಿರ್ಧರಿಸಿದೆ.

ಈ ಪ್ರಶಸ್ತಿಯನ್ನು ಡಿಸೆಂಬರ್ ೨೧ರಂದು ಶಾರ್ಜಾದ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದಲ್ಲಿ  ಆಯೋಜಿಸಲಾಗಿರುವ ಅದ್ದೂರಿ ಸಮಾರಂಭದಲ್ಲಿ ಪ್ರದಾನಿಸಲು ನಿರ್ಧರಿಸಲಾಗಿದೆ.

ಶ್ರೀ ಬಿ.ಜಿ.ಮೋಹನದಾಸ್ ಅವರ ಪರಿಚಯ:

ಸ್ನೇಹಿತರ ಮತ್ತು ಆತ್ಮೀಯರ ನಡುವೆ ಬೀಜಿ ಎಂದೇ ಪ್ರಖ್ಯಾತರಾಗಿರುವ ಶ್ರೀ ಬಿ.ಜಿ. ಮೋಹನದಾಸ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಜಿಜೂರು ಗ್ರಾಮದಲ್ಲಿ ಜನಿಸಿದ್ದರೂ ಪ್ರಾಥಮಿಕ ಶಿಕ್ಷಣವನ್ನು ಉಡುಪಿಯಲ್ಲಿ ಪಡೆದರು. ಮಣಿಪಾಲದ ಕೆ.ಎಂ.ಸಿ. ವಿದ್ಯಾಲಯದಲ್ಲಿ  ಔಷಧೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಂತರಾಷ್ಟ್ರೀಯ  ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ೧೯೮೨ರಿಂದ ಸೌದಿ ಅರೇಬಿಯಾ ಮೊದಲುಗೊಂಡು ಇತರ ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಅನಿವಾಸಿಗಳಾಗುವ ಮುನ್ನ ಸಮಾಜದ ಏಳ್ಗೆಗಾಗಿ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮಣಿಪಾಲ ಜೇಸೀಸ್ ನಲ್ಲೂ ಕೆಲಕಾಲ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು.

ದುಬೈ ಕರ್ನಾಟಕ ಸಂಘದ ಸ್ಥಾಪನೆಯ ಕಾಲದಿಂದಲೂ ಸಂಘದ ಕಾರ್ಯಕಲಾಪಗಳಲ್ಲಿ ಭಾಗಿಯಾಗಿದ್ದ ಬಿ.ಜಿ. ೧೯೮೯ರಲ್ಲಿ ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ೧೯೮೯ರಿಂದ ೧೯೯೯ರ ದಶಕದಲ್ಲಿ ಕರ್ನಾಟಕ ಸಂಘವು ಇವರ ಅಧ್ಯಕ್ಷತೆ, ಉಪಾಧ್ಯಕ್ಷತೆ, ಹಾಗೂ ಕಾರ್ಯದರ್ಶಿತ್ವದ ಸೇವೆ ಪಡೆದು ಅಪ್ರತಿಮೆ ಏಳಿಗೆ ಸಾಧಿಸಿದೆ. ಈ ದಶಕದಲ್ಲಿ ಅತ್ಯಂತ ಹೆಚ್ಚಿನ ಸದಸ್ಯರ ನೋಂದಣೆ, ಅನೇಕ ಕಾರ್ಯಕ್ರಮಗಳು ಕರ್ನಾಟಕ ಸಂಘವನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದಿತ್ತು. ಈ ಜನಪ್ರಿಯತೆಯೇ ಕರ್ನಾಟಕ ಸಂಘವನ್ನು ಯು.ಎ.ಇ.ಯಲ್ಲಿಯೇ ಪ್ರಮುಖ ಸಂಘವನ್ನಾಗಿ ಪರಿಗಣಿಸಲು ಸಾಧ್ಯವಾಗಿದೆ.

೧೯೮೯ರಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರತಿ ಬುಧವಾರ ಪ್ರಕಟವಾಗುವ ಗಲ್ಫ್ ವಾರ್ತಾ ಸಂಚಯ ಅಂಕಣವನ್ನು ಪ್ರಾರಂಭಿಸಿ ಗಲ್ಫ್ ಕನ್ನಡಿಗರ ಚಟುವಟಿಕೆಗಳಿಗೆ ಕರ್ನಾಟಕದಲ್ಲಿ ವೇದಿಕೆ ಒದಗಿಸಿ ಗಲ್ಫ್ ಕನ್ನಡಿಗರಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿತೆಂದರೆ ತಪ್ಪಾಗಲಾರದು. ಯು.ಎ.ಇ. ದೇವಾಡಿಗ ಸಂಘದ ಸ್ಥಾಪನೆಗೂ ಬಿ.ಜಿ.ಯವರ ಕೊಡುಗೆ ಪ್ರಧಾನವಾಗಿದೆ.

ಇತ್ತೀಚಿನವರೆಗೂ ಗಲ್ಫ್ ಪ್ರಾಂತದಲ್ಲಿ ಪ್ರಖ್ಯಾತವಾಗಿರುವ ನ್ಯೂ ಮೆಡಿಕಲ್ ಸೆಂಟರ್ ಆರೋಗ್ಯಸಂಸ್ಥೆಯಲ್ಲಿ ಔಷಧೀಯ ವಿಭಾಗದಲ್ಲಿ  ಕಾರ್ಯನಿರ್ವಾಹಕರಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಇದೇ ಅವಧಿಯಲ್ಲಿ ಯು.ಎ.ಯಿ ಭಾರತೀಯ ಔಷಧೀಯ ವೇದಿಕೆಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿರುವ ಮಣಿಪಾಲ ವಿಶ್ವವಿದ್ಯಾಲಯ ೨೦೦೨ರಲ್ಲಿ ಅತ್ಯುತ್ತಮ ಕೆ.ಎಂ.ಸಿ.ಪೂರ್ವ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಿದೆ.

ಬಿಡುವಿನ ವೇಳೆಯಲ್ಲಿ ಕರ್ನಾಟಕ ಮತ್ತು ಕನ್ನಡ ವಿಷಯಾಧಾರಿತ  ಅಂತರ್ಜಾಲ ತಾಣಗಳನ್ನು ನಿರ್ದೇಶಿಸುವ ಮೂಲಕ ತಮ್ಮನ್ನು ತಾವು ಕನ್ನಡಸೇವೆಗೆ ಅರ್ಪಿಸಿಕೊಂಡಿದ್ದಾರೆ. ಆಂಗ್ಲಭಾಷೆಯ ಮೇಲೆ ಅತ್ಯುತ್ತಮ ಹಿಡಿತವಿರುವ ಇವರು ಸ್ವತಂತ್ರ ಬರಹಗಾರರೂ ಆಗಿದ್ದಾರೆ.

ಗಲ್ಪ್ ಕನ್ನಡಿಗ ಬಾತ್ಮಿದಾರರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾ ತಮ್ಮ ಸಂತೋಷದ ಈ ಕ್ಷಣಗಳನ್ನು ಹಂಚಿಕೊಂಡರು. ತಾವು ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳಿಂದ  ದುಬೈ ನಲ್ಲಿ ಕನ್ನಡ ಸೇವೆ ನಡೆಸುತ್ತಾ ಬಂದಿದ್ದು ಈ ವರ್ಷ ಮಯೂರ ಪ್ರಶಸ್ತಿ ಸಿಗುತ್ತಿರುವುದು ಪ್ರಥಮ ಪ್ರಶಸ್ತಿಯಾಗಿದ್ದು ಈ ಅನುಗ್ರಹ ತಮಗೆ ಅತೀವ ಹರ್ಷ ತಂದಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಸಾಧನೆಗಳನ್ನು ಗುರುತಿಸಿದ ಶಾರ್ಜಾ ಕರ್ನಾಟಕ ಸಂಘಕ್ಕೆ ತಮ್ಮ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಾನೊಬ್ಬ ಕನ್ನಡ ಅಭಿಮಾನಿಯಾಗಿದ್ದು ತನ್ನಂತೆಯೇ  ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನವುಳ್ಳ ಕನ್ನಡಿಗರಿಂದ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ತಮ್ಮ ಸುಯೋಗ ಎಂದು ತಿಳಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸುಜಯ ಬೆಂದೂರ್
ವರದಿಗಾರರು : ಅರ್ಶದ್ ಹುಸೈನ್
ಪ್ರಕಟಿಸಿದ ದಿನಾಂಕ : 2007-12-10

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಅಸ್ಥಿಪಂಜರವಾಗುವ ವಿಚಿತ್ರ ಖಾಯಿಲೆಗೆ ತುತ್ತಾದ ಸೌದಿ ಯುವಕ
»ಭಾರತದಲ್ಲಿ ನಿಷೇಧಿಸಲ್ಪಟ್ಟ ಆರ್ಯುವೇದ ಔಷಧಿ ಯುಎಇಯಲ್ಲಿ ಮುಕ್ತ ಮಾರಾಟ
»ನಕಲಿ ಸಿಐಡಿಗಳಿಂದ ಮಹಿಳೆಯ ಸಾಮೂಹಿಕ ಅತ್ಯಾಚಾರ
»ಅರಬ್‍ ಕವಿ ಅಲ್‍ ಅಖೈಲ್‍ ಹೆಸರಲ್ಲಿ ಸಾಂಸ್ಕೃತಿಕ ಸಂಗ್ರಹಾಲಯ
»ಉಮ್‍ ಅಲ್ ರಮೂಲ್ ಎರಡು ಗೋದಾಮಿಗೆ ಭಾರೀ ಬೆಂಕಿ
»ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
»ನಿಷೇಧಿತ ಕ್ರಿಮಿನಾಶಕ ಸಿಂಪಡಣೆ:10 ಮಂದಿ ಆಸ್ಪತ್ರೆಗೆ !
»ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
»ಎವರೆಷ್ಟ್ ಶಿಖರದ ಶಿರಕ್ಕೆ ದುಬೈ ಭಾವುಟ ಕಿರೀಟಧಾರಣೆಗೆ ಕ್ಷಣಗಣನೆ
»1 ದಿರಹಂ ಈಗ 15 ರೂಪಾಯಿ..!
»ಚಲಿಸುತ್ತಿದ್ದ ವಿಮಾನದಿಂದ ಧುಮುಕಿದ ದುಬೈ ಇಂಜಿನೀಯರ್
»500 students stranded by Ajman private university closure
»ಏನ್‍ ಉಡುಗೆ.. ಇದು ಏನ್‍ ನಡಿಗೆ...?!
»ಭಾರತ ರಾಯಭಾರಿ-ಸಲಹೆಗಾರರ ಸಾರ್ವಜನಿಕ ಭೇಟಿಗೆ ದಿನ ನಿಗಧಿ
»ಯಜಮಾನನ ಮನೆಯನ್ನೇ ದೋಚಿದ ಕೆಲಸದಾಕೆಗೆ ಶಿಕ್ಷೆ
»ಕರ್ನಾಟಕ ಸಂಘ ಶಾರ್ಜಾ ದಶಮಾನೋತ್ಸವ ಸಂಭ್ರಮ, ಕನ್ನಡ ಸಾಂಸ್ಕೃತಿಕ ವೈಭವಕ್ಕೆ ವೇದಿಕೆ ಸಜ್ಜು...
»ಗರಿಗಟ್ಟಿ ಸ್ಫುಟಿದ ದೇವಾಡಿಗರ ಉತ್ಸುಕತೆ. ಚಿತ್ತಾಕರ್ಷಕವಾಗಿ ಸಂಯೋಜಿಸಿ ಕಿಕ್ಕಿರಿದ ಸದಸ್ಯರ ಮನ ರಂಜಿಸಿದ 20ನೇ ವಾರ್ಷಿಕೋತ್ಸವ ಕಾರ್ಯಕ್ರಮ (Updated)
»ಅಬುಧಾಬಿ: ಭಾರತಕ್ಕೆ ಪ್ರಯಾಣಿಸುವ ದಿನದ ಹಿಂದೆ ಭಾರತೀಯನ ದುರ್ಮರಣ !
»ಅಬುದಾಬಿ: ಶಾಲಾ ಬಸ್‍-ಟ್ರಕ್ ಡಿಕ್ಕಿ: ಚಾಲಕ ದುರ್ಮರಣ
»ದುಬೈ : ಆನ್ ಲೈನ್ ಟಿಕೇಟು ಖರೀದಿದಾರರೇ ಎಚ್ಚರ : ಮಧ್ಯವರ್ತಿ ವಂಚಕ ಏಜೆ೦ಟರಿದ್ದಾರೆ
»ದುಬೈ: 'ಒಂಟೆ ರಾಣಿ'ಗೊಂದು ಮಗುವಿನ ಕನಸು..!
»ಮಕ್ಕಳನ್ನು ಇಂಟರ‍್ ನೆಟ್‍ ಸಂಪರ್ಕದಿಂದ ದೂರವಿಡಿ
»ಸಂಚಾರಿ ನಿಯಮ ಉಲ್ಲಂಘಿಸಿದ ಅಗ್ರ 10ರ ಪಟ್ಟಿಯಲ್ಲಿ ಭಾರತೀಯ ಮಹಿಳೆ !
»ದುಬೈ ಪ್ರಾಣಿ ಸಂಗ್ರಹಾಲಯ ಇದೀಗ ಸಫಾರಿ..!
»ಯು.ಎ.ಇ. ಬಂಟರ 38ನೇ ಸ್ನೇಹಮಿಲನ. ಮನಸೆಳೆದ ಚಿಣ್ಣರ ಜಾನಪದ ಕಲಾ ವೈಭವ...
»ನಕಲಿ ಪಾಸ್ಪೋರ್ಟ್‍ ಹೊಂದಿದ್ದೀರಾ? ದುಬೈಯಲ್ಲಿ ಎಚ್ಚರ !
»'ಬಾತ್‍ ಟಬ್‍' ಗೆ ಬಿದ್ದು ಹಸುಳೆ ದುರ್ಮರಣ..!
»ಭಯಾನಕ ಕಾರು ಅಪಘಾತ : ತಾಯಿ-ಮಗು ಪಾರು !
»ದುಬೈ: ಜುಲೈ 21 ರಿಂದ ಪವಿತ್ರ ರಂಜಾನ್ ...
»ದುಬೈ 'ಅಲ್ ಖೈಲ್' ರಸ್ತೆ 2012 ರ ಅಂತ್ಯಕ್ಕೆ ಸಂಪೂರ್ಣ ಸಿದ್ಧ !
»ಯು. ಎ. ಇ. ಬಂಟರ 38 ನೇ ಸ್ನೇಹಮಿಲನ ಮೇ 11 ರಂದು ದುಬಾಯಿಯಲ್ಲಿ...
»ದುಬೈ ದೇವಾಡಿಗ ಸಂಘದ 20ನೇ ವಾರ್ಷಿಕೋತ್ಸವ: ಜನಮನ ರಂಜಿಸಲಿರುವ ಅದ್ದೂರಿಯ ಸಾಂಸ್ಕೃತಿಕ ಮತ್ತು ಮನೋರಂಜನ ಕಾರ್ಯಕ್ರಮಕ್ಕೆ ರಂಗ ಸಜ್ಜು
»2 Omanis shot dead in Al Ain
»Woman raped on arrival in UAE
»Indian social worker who campaigned against money lenders found dead in UAE
»ಮೇ 4ರಂದು ದುಬೈಯಲ್ಲಿ ಯಶಸ್ವಿಯಾಗಿ ನಡೆದ ಯು.ಎ.ಇ.ಬಂಟ್ಸ್ ರಕ್ತದಾನ ಶಿಭಿರ
»ಗಂಡು ಗಂಡನಲ್ಲ, ಹೆಂಡತಿ ಹೆಂಡತಿಯಲ್ಲ, ಇದೆಂಥ ಮದುವೆ?...
»ಮೇ.18: ಶಾರ್ಜಾ ಕರ್ನಾಟಕದ ದಶಮಾನೋತ್ಸವ; ಮೂವರು ಸಾಧಕರಿಗೆ ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ
»Former Ombudsman of Krnataka Justice N.Santhosh Hegde to attend Tulu Koota Function
»New Pharmacy inaugurated and Seminar on Management of Stroke, Compound Fractures held at GMC, Sharjah
»Designs of the new Trans-UAE train revealed...
»Indian rupee slumps to Rs14.54 vs. Dh1; may soon fall to Rs15.25
»Know your child better - GMC Hospital hosts Annual Healthy Baby Contest & Exhibition, 2012
»Dh1 billion drug haul by Dubai Customs
»ಕೇಳಿ! ನೋಡಿ!! ...ದುಬೈಯಲ್ಲಿ ಅಣ್ಣಾಬಾಂಡ್ !
»ದುಬೈ: ಗಣೇಶ್ ಶೆಟ್ಟಿಗಾರ್ ( 29 ) ಅವರ ಅಕಾಲಿಕ ಮೃತ್ಯು
»Dubai-bound Air India flight escapes disaster
»ರಂಜಿಸಿದ ಟೆಂಪ್ಟೇಷನ್ 2012: ನಾಡಿನ ಹೆಸರಾಂತ ಕನ್ನಡ ಚಿತ್ರ ಕಲಾವಿದರು ಸ್ರಷ್ಟಿಸಿದ ವರ್ಣರಂಜಿತ ಸಂಗೀತ–ನೃತ್ಯ ಲೋಕ; ರಸಿಕರನ್ನು ಮೋಡಿಮಾಡಿದ ಧಿಗಂತ್, ಹರ್ಷಿಕಾ, ಪೂಜಾ ಗಾಂಧಿ
»Massive fire destroys cargo dhow in Dubai
»ಯು ಎ ಯಿ ಎ.ಎಕ್ಸ್ ಚೇಂಜ್ ನ ಶ್ರೀ ವೈ. ಸುಧೀರ್ ಶೆಟ್ಟಿಯವರಿಗೆ Jeevaragam Global Personality ಪ್ರಶಸ್ತಿ ಪ್ರಧಾನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri