7 ನೇ ವಾರ್ಷಿಕೋತ್ಸವ- ಕೋಟಿ ಚೆನ್ನಯ್ಯ ಯಕ್ಷಗಾನ ಪ್ರದರ್ಶನ |
ಪ್ರಕಟಿಸಿದ ದಿನಾಂಕ : 2008-05-31
ಕುವೈಟ್ ಇತಿಹಾಸದಲ್ಲಿಯೇ ಪ್ರಥಮ ಪ್ರದರ್ಶನ
ಕುವೈಟ್ : ಮೇ 30 ರ ಶುಕ್ರವಾರದಂದು ಬಂಟರ ಸಂಘ ಕುವೈಟ್ ತನ್ನ ಏಳನೆಯ ವಾರ್ಷಿಕೋತ್ಸವ ಬಂಟೋತ್ಸವ -2008 ಕಾರ್ಯಕ್ರವಮವನ್ನು ವಿಶಿಷ್ಟ ರೀತಿಯಲ್ಲಿ ನೆಡೆಸಿತು. ತುಳುನಾಡಿನ ಯಕ್ಷಗಾನವನ್ನು ಕುವೈಟಿನಲ್ಲಿ ಇದೇ ಪ್ರಥಮ ಬಾರಿಗೆ ಪ್ರದರ್ಶಿಸಿ ತುಳುವರ ಮೆಚ್ಚುಗೆ ಪಡೆಯಿತು.
ಸುಪ್ರಿಯ ವಿ ಶೆಟ್ಟಿ, ನಳಿನಿ ಶೆಟ್ಟಿ ಯವರ ಪ್ರಾರ್ಥನೆ ಮತ್ತು ಲಕ್ಷ್ಮಿ ಶೆಟ್ಟಿ ಯವರ ಸ್ವಾಗತ ನೃತ್ಯದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಅದ್ಯಕ್ಷ ದಿವಿನ್ ಮೆಂಡ ಸದಸ್ಯರನ್ನು ಮತ್ತು ಕಿಕ್ಕಿರಿದ ಸಭಿಕರಿಗೆ ಸ್ವಾಗತ ಬಯಸಿದರು.
ಅತಿಥಿಗಳಾಗಿ ಬಂದ ಲೇಬರ್ ಕಾರ್ಯದರ್ಶಿ ಕೆ.ನರಸಿಂಹ ರಾವ್ ಹಾಗು ಅದ್ಯಕ್ಷ ಮತ್ತು ಕಾರ್ಯಕಾರೀ ಸಮಿತಿ ಸದಸ್ಯರು ದೀಪ ಬೆಳಗಿಸಿ ಬಂಟೋತ್ಸವ ವನ್ನು ಉದ್ಘಾಟಿಸಿದರು.
ಕಳೆದ ಐವತ್ತು ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಪುಂಡು ವೇಷದ ಗಂಡುಗಲಿ, ದಿಗಿಣದ ರಾಜ, ಪುತ್ತೂರ್ದ ಮುತ್ತು, ಯಕ್ಷ ನಾಟ್ಯ ಚತುರ ಎಂಬ ಖ್ಯಾತಿ ಗಳಿಸಿರುವ ಖ್ಯಾತ ಕಲಾವಿದ ಪುತ್ತೂರು ಶ್ರೀಧರ್ ಭಂಡಾರಿಯವರನ್ನು ಸಂಬ್ರಮದಿಂದ ತುಳು ಸಂಸ್ಕೃತಿಯ ಸಂಪ್ರದಾಯದಂತೆ ಅಭಿನಂದಿಸಿ ಗೌರವಿಸಲಾಯಿತು.
ಮನೋರಂಜನ ಕಾರ್ಯಕ್ರಮದಲ್ಲಿ ಶಾಲಿನಿ. ವೈ. ಶೆಟ್ಟಿ , ಅಮಿತ ಎಸ್ ಶೆಟ್ಟಿ, ಅಕ್ಷತ ಎ ಹೆಗ್ಡೆ, ಸುಪ್ರೀತ ವಿ ಶೆಟ್ಟಿ, ಲಕ್ಶ್ಮಿ ಜಿ ಹೆಗ್ಡೆ, ಅಮಿತ ಎಸ್ ಶೆಟ್ಟಿ, ಮರಿಯ ಎಸ್ ಶೆಟ್ಟಿ ಮತ್ತು ಸನ್ಮತಿ ದಿ ಮೆನ್ಡ ರವರ ನೃತ್ಯ ಗಳು ನೆರೆದ ಸಭಿಕರನ್ನು ವಿನೋದಗೊಳಿಸು.
ಕೋಲ ಬಂಟರ ಒಂದು ಸಂಪ್ರದಾಯ. ತುಳು ಕೂಟದ ಕಾರ್ಯಶೀಲ ಸದಸ್ಯರುಗಳಾದ ಅರುನ್ ಶೆಟ್ಟಿ, ಸುದರ್ಶನ್ ರಾಜು ಶೆಟ್ಟಿ, ಯದುನಾತ್ ಆಲ್ವ, ಶಾಲಿನಿ ಯದು ಶೆಟ್ಟಿ, ಚರಿತ್ ಶೆಟ್ಟಿ,ಸನತ್ ಕುಮಾರ್ ಶೆಟ್ಟಿ, ಉಮೇಶ್ ಶೆಟ್ಟಿ, ಅಶ್ವಿನ್ ಕೆ ಆಲ್ವ, ಮದುರಾಜ್ ರೈ, ಕಿಶೋರ್ ಶೆಟ್ಟಿ, ವಿವೇಕ್ ಶೆಟ್ಟಿ, ಕರುಣಾಕರ್ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸುದಾಕರ ಶೆಟ್ಟಿ, ಸತೀಶ್ಚಂದ್ರ ಶೆಟ್ಟಿ, ಕಿಶೊರ ಆಲ್ವ, ಗುರು ಹೆಗ್ಡೆ, ಲೋಕನಾತ್ ಶೆಟ್ಟಿ,ಸುರೇಂದ್ರ ಶೆಟ್ಟಿ ಮತ್ತು ಸಂತೋಶ್ ಶೆಟ್ಟಿ ಯವರು ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಕೋಲ ವನ್ನು ಸಾದರ ಪಡಿಸಿ ಸಾಂಸ್ಕೃತಿಕ ಕಾರ್ಯಕೃಮಕ್ಕೆ ಮೆರಗು ತಂದರು.
ನಂತರ ಎಲ್ಲರೂ ನಿರೀಕ್ಷಿಸುತ್ತಿದ್ದ ’ಅಮರ-ಬೊಳ್ಳಿಲು- ಕೋಟಿ ಚೆನ್ನಯ ’ಯಕ್ಷಗಾನ ವನ್ನು ಸದರ ಪಡಿಸಲಾಯಿತು.
ಖ್ಯಾತ ಕಲಾವಿದ ಪುತ್ತೂರು ಶ್ರೀಧರ್ ಭಂಡಾರಿಯವರೊಂದಿಗೆ -ಭಾವರಸ ಗಾಂಭೀರ್ಯ- ಕೀರ್ತಿಯ ಭಾಗವತರಾದ -ಪದ್ಯನ ಗಣಗತಿ ಭಟ್ ಹಾಗೂ ಹಾಸ್ಯ ಕಲಾವಿದ ಬಂಟ್ವಾಳ ಜಯರಾಂ ಆಚಾರ್ಯ ಮಿಂಚಿದರು.ಇತರ ಕಲಾವಿದರಾದ ಗಣೇಶ್ ಅಡೂರ್, ಜಯರಾಮ್ ಭಟ್, ಜಯಪ್ರಕಾಶ್ ಶೆಟ್ಟಿ, ಪ್ರಜ್ವಲ್ ಕುಮಾರ್ ಹಾಗು ಸುನಿಲ್ ಬಂಡಾರಿ ಯವರು ತಮ್ಮ ಚತುರತೆಯಿಂದ ಲೀಲಾಜಾಲವಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಡಿದರು.ಶಾಲಿನಿ ವಿಜಯ ಶೆಟ್ಟಿಯವರು ಕಾರ್ಯಕೃಮ ನಿರೂಪಿಸಿದ್ದ ಈ ವಿಜ್ರಂಭಣೆಯ ಕಾರ್ಯಕೃಮ ವನ್ನು ದಿವಿನ್ ಕುಮಾರ್ ಮೆಂಡ ಸಂಯೋಜಿಸಿದ್ದರು.
ಇಂತಹ ಒಂದು ಸಂಬ್ರಮದ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ನೀಡಿ ’ಕುವೈಟ್ ಬಂಟ್ಸ’ ಗಲ್ಫ ನಲ್ಲಿ ತುಳುನಾಡಿನ ಹೆಮ್ಮೆಯ ಒಂದು ಸಂಸ್ಥೆ ಯಾಗಿ ಬೆಳೆದಿದೆ.
ವರದಿಯ ವಿವರಗಳು |
 |
ಕೃಪೆ : ದೈಜಿವರ್ಲ್ಡ್.ಕಾಮ್ , ಚಿತ್ರ: ವಿಲ್ಸನ್ ಸಲ್ದಾನ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-05-31
|
|
|