ಜೆದ್ದಾ: ಬಾಂಗ್ಲಾದೇಶಿ ಕಾರ್ಮಿಕರ ಕನಿಷ್ಟ ವೇತನ 550ಕ್ಕೆ ಏರಿಕೆ |
ಪ್ರಕಟಿಸಿದ ದಿನಾಂಕ : 2008-05-30
ಹೆಚ್ಚಿನವರಿಗೆ ಕರಾರುಪತ್ರದಲ್ಲಿ ನಮೂದಿಸಿದ ವೇತನಕ್ಕಿಂತ ಕಡಿಮೆ ವೇತನ : ಹೊಸ ವೇತನ ಜೂನ್ 1 ರಿಂದ ಜಾರಿ
ಜೆದ್ದಾ, ಮೇ ೩೦: ಬಾಂಗ್ಲಾದೇಶದ ಅಕುಶಲಕರ್ಮಿ ಕಾರ್ಮಿಕರಿಗೆ ಜೂನ್ ಒಂದರಿಂದ ಕನಿಷ್ಟ 550 ರಿಯಾಲ್ ವೇತನ ನೀಡುವಂತೆ ಆದೇಶ ನೀಡಲಾಗಿದೆ. ಸೌದಿ ಅರೇಬಿಯಾದಲ್ಲಿ ಬಾಂಗ್ಲಾದೇಶದ ಕಾರ್ಮಿಕ ರಾಯಭಾರಿಯಾಗಿರುವ ಎಸ್.ಎಮ್. ಹಾರೂನ್ ಅವರು ಈ ವಿಷಯವನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ.
ಸೌದಿಯಲ್ಲಿ ಉದ್ಯೋಗದಲ್ಲಿರುವ ಶೇಖಡಾ ಐವತ್ತಕ್ಕಿಂತಲೂ ಹೆಚ್ಚು ಅಕುಶಲಕರ್ಮಿಗಳನ್ನು ಅವರ ಕಾರಾರಿನ ಮೊತ್ತಕ್ಕಿಂತಲೂ ಕಡಿಮೆ ಸಂಬಳ ನೀಡಿ ಶೋಷಣೆಗೊಳಗಾಗಿಸುತ್ತಿದ್ದು ಈಗ ಈ ಪ್ರಕ್ರಿಯೆಗೆ ಕಡಿವಾಣ ಹಾಕಿದಂತಾಗಿದೆ.
ಕಡಿಮೆ ವೇತನದ ಕಾರಣ ಹಲವು ಬಾಂಗ್ಲಾದೇಶಿ ಕಾರ್ಮಿಕರು ಹಲವು ಕುಕೃತ್ಯಗಳಲ್ಲಿ ಭಾಗಿಯಾಗಿರುವುದು ರಿಯಾದ್ ಪೋಲೀಸ್ ವಿಭಾಗ ಪ್ರಕಟಿಸಿರುವ ಅಂಕಿಅಂಶಗಳು ಸಾದರಪಡಿಸುತ್ತವೆ, ಹಾಗೂ ಹಲವರು ಬಾಂಗ್ಲಾದೇಶಿ ಕಾರ್ಮಿಕರನ್ನು ಕರೆತರುವ ಪ್ರಕ್ರಿಯೆಗೆ ತಿಲಾಂಜಲಿ ನೀಡಲೂ ಕರೆಯಿತ್ತಿದ್ದಾರೆ ಎಂದು ಪ್ರಖ್ಯಾತ ಸಂಸ್ಥೆಯ ಕಾರ್ಮಿಕ ಕಲ್ಯಾಣ ಅಧಿಕಾರಿಯಾಗಿರುವ ಜಮಾನ್ ಅಲ್ ಜಹರಾನಿ ತಿಳಿಸಿದ್ದಾರೆ.
ಹೊಸ ವೇತನ ನಿಗದಿ ಎಲ್ಲಾ ಬಾಂಗ್ಲಾದೇಶಿ ಕಾರ್ಮಿಕರಲ್ಲಿ ಹರ್ಷ ಮೂಡಿಸಿದೆ.
ವರದಿಯ ವಿವರಗಳು |
 |
ಕೃಪೆ : ರಿಯಾದ್ ಡೇಲಿ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-05-30
|
|
|