ಸಾರಿಗೆ ಕಾನೂನುಗಳ ಅನುವಾದ ಅಗತ್ಯ: ಏಶಿಯಾ ಮೂಲದ ಅನಿವಾಸಿಗಳ ಬೇಡಿಕೆ |
ಪ್ರಕಟಿಸಿದ ದಿನಾಂಕ : 2007-12-10
ದೋಹಾ, ಡಿಸೆಂಬರ್ ೧೦. ಪ್ರಸ್ತುತ ಸಾರಿಗೆ ಕಾನೂನುಗಳು ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರವಿದ್ದು ಈ ಎರೆಡೂ ಭಾಷೆಗಳ ಕನಿಷ್ಟ ಅರಿವಿರುವ ಹೆಚ್ಚಿನ ಸಂಖ್ಯೆಯ ಏಶಿಯ ಮೂಲದ ಅನಿವಾಸಿಗಳಿಗೆ ಅರ್ಥವಾಗದಿರುವುದು ಇವುಗಳ ಆಯಾ ದೇಶಗಳ ಭಾಷೆಗಳಿಗೆ ಅನುವಾದ ಮಾಡಬೇಕೆಂದು ಅನಿವಾಸಿ ಪಂಗಡಗಳ ನಾಯಕರು ಅಭಿಪ್ರಯ ಪಟ್ಟಿದ್ದಾರೆ
ಕಾನೂನುಗಳಲ್ಲಿ ಇತ್ತೀಚೆಗೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು ಅವುಗಳ ಸಮರ್ಪಕ ವಿವರಣೆ ಸಿಗದಿದ್ದಲ್ಲಿ ಕಾನೂನುಗಳ ಪೂರ್ಣವಾಗಿ ಪಾಲನೆ ಸಾಧ್ಯವಾಗಲಾರದು. ಆ ಪ್ರಕಾರ ಆಯಾ ಭಾಷೆಗಳಿಗೆ ಈ ಕಾನೂನುಗಳನ್ನು ಅನುವಾದಿಸುವ ಮೂಲಕ ಪ್ರತಿಯೊಬ್ಬರೂ ಕಾನೂನಿನ ಸ್ಪಷ್ಟ ಅರಿವು ಪಡೆದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿವಿಧ ಪಂಗಡಗಳ ನಾಯಕರ ಸಮಿತಿಯೊಂದು ಕಳೆದ ದಿನಗಳಲ್ಲಿ ಆಂತರಿಕ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ತನ್ನ ಈ ಬೇಡಿಕೆ ಸಲ್ಲಿಸಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಇಂತಹದ್ದೊಂದು ಪ್ರಸ್ತವನೆ ಸಿಕ್ಕಿರುವುದಾಗಿ ಸಚಿವಾಲಯ ತಿಳಿಸಿದೆ. ಈ ಭೇಟಿಯಲ್ಲಿ ಸಾರಿಗೆ ಸಚಿವಾಲಯ ಮತ್ತು ಗಸ್ತು ಪೋಲೀಸ್ ವಿಭಾಗದ ಮುಖ್ಯಸ್ಥರಾದ ಕರ್ನಲ್ ಮೊಹಮ್ಮದ್ ಸಾಅದ್ ಅಲ್ ಖರ್ಜಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮುಖ್ಯಸ್ಥರಾದ ಲೆಫ್ಟಿನಿಂಟ್ ಕರ್ನಲ್ ಅಬ್ದುಲ್ಲಾ ಅಲ್ ಮುಫ್ತಾ ಅವರು ಹಾಜರಿದ್ದರು.
ಈ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವಾಲಯ ತಿಳಿಸಿದೆ.
ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಮಲೇಶಿಯಾ ಮತ್ತು ಫಿಲಿಪ್ಪೀನ್ಸ್ ದೇಶಗಳ ನಾಯಕರು ಈ ಭೇಟಿಯಲ್ಲಿ ಭಾಗಿಯಾಗಿದ್ದರು.
ವರದಿಯ ವಿವರಗಳು |
 |
ಕೃಪೆ : ದಿ ಪೆನಿನ್ಸುಲಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-10
|
|
|