ವೈಭವದ ಹಾಗೂ ಸಂಗೀತಮಯ =ಕುಟುಂಬ ಉತ್ಸವ= ಆಚರಿಸಲು ಶಾರ್ಜಾ ಕನ್ನಡ ಸಂಘ ಸಜ್ಜು. |
ಪ್ರಕಟಿಸಿದ ದಿನಾಂಕ : 2007-12-09
ಶಾರ್ಜಾ, ಡಿಸೆಂಬರ್ ೮. ಬರುವ ೨೧ನೆಯ ಡಿಸೆಂಬರ್ ಶುಕ್ರವಾರದ ಸಂಜೆಯನ್ನು ಶಾರ್ಜಾ ಕನ್ನಡ ಸಂಘ ವೈಭವದಿಂದ ಮತ್ತು ಸಂಗೀತಮಯವಾಗಿ ಆಚರಿಸಲು ಯೋಜನೆಗಳನ್ನು ಹಮ್ಮಿಕೊಂಡಿದೆ.
ಈ ಬಾರಿಯ ಈದ್ ರಜಾದಿನಗಳನ್ನು ಸಂಘದ ಐದನೆಯ ವಾರ್ಷಿಕೋತ್ಸವವನ್ನು ಮಹಾ ಸಾಂಸ್ಕೃತಿಕ ಹಾಗೂ ಸಂಗೀತಮಯ =ಕುಟುಂಬ ಉತ್ಸವ=ವನ್ನಾಗಿ ಆಚರಿಸಲು ನಿರ್ಧರಿಸಿರುವುದಾಗಿ ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಅಂಬಲ್ತೆರೆ ಹಾಗೂ ಪ್ರಮುಖ ಸದಸ್ಯರ ಸಮಿತಿಯು ಪತ್ರಿಕಾ ಪ್ರಕಟಣೆ ನೀಡಿದೆ. ಉತ್ಸವವು ಶಾರ್ಜಾದ ಗೋಲ್ಡ್ ಸೆಂಟರ್ ಬಳಿಯಿರುವ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದ ಆವರಣದಲ್ಲಿ ಆಚರಿಸಲಾಗುವುದು.
ಕನ್ನಡದ ಹೆಸರಾಂತ ಗಾಯಕಿಯರಾದ ಬಿ.ಆರ್. ಛಾಯಾ ಹಾಗೂ ಕಾಸರಗೋಡು ಚಿನ್ನಾ ಅವರು ಈ ಉತ್ಸವಕ್ಕೆ ಆಗಮಿಸಲಿದ್ದು ಹಳೆಯ, ಹೊಸ ಕನ್ನಡ ಗೀತೆಗಳಿಂದ ಮತ್ತು ಹಾಸ್ಯಮಯ ಪ್ರದರ್ಶನಗಳಿಂದ ಕನ್ನಡಿಗರನ್ನು ರಂಜಿಸಲಿದ್ದಾರೆ.
ಇವರ ತಂಡವು ಈ ಮೊದಲೂ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದ್ದು ನೆರೆದ ಜನರನ್ನು ತಾಳಕ್ಕೆ ತಕ್ಕನಾಗಿ ಕುಣಿಯುವಂತೆ ಪ್ರೇರೇಪಿಸಿದೆ. ಹಳೆಯ ಹಾಗೂ ಹೊಸ ಹಾಡುಗಳ ಸಮ್ಮಿಳನ ಹಳೆಯ ನೆನಪುಗಳ ಮಧುರ ಲೋಕಕ್ಕೆ ಕರೆದೊಯ್ಯುವಂತಿದೆಯೆಂದರೆ ಅತಿಶಯೋಕ್ತಿಯಾಗಲಾರದು.
ಉತ್ಸವಕ್ಕೆ ಕಿರೀಟವಿಟ್ಟಂತೆ ಕರ್ನಾಟಕದ ವಿಶೇಷ ಅಡುಗೆಗಳ ಮಳಿಗೆಗಳು ಸ್ಥಾಪಿತಗೊಳ್ಳಲಿದ್ದು ಕರ್ನಾಟಕದ ಅದರಲ್ಲೂ ವಿಶೇಷವಾಗಿ ಮಂಗಳೂರು ಕಡೆಯ ಅಡುಗೆಗಳು ಲಭ್ಯವಾಗಲಿದ್ದು ಜಿಹ್ವಾ ಚಾಪಲ್ಯವನ್ನು ತಣಿಸಲು ಒಂದು ಉತ್ತಮ ಅವಕಾಶವಾಗಿದೆ.
ಬಿ.ಆರ್.ಛಾಯಾ-ಕಾಸರಗೋಡು ಚಿನ್ನಾ ಮಾತ್ರವಲ್ಲದೆ ಕನ್ನಡ ಸಂಘದ ಪ್ರತಿಭಾವಂತ ಸದಸ್ಯರೂ ಕಿರುನಾಟಕ, ಹಾಸ್ಯಪ್ರಸಂಗ, ನೃತ್ಯ ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳನ್ನು ನೀಡಿ ಉತ್ಸವವು ಸದಾಕಾಲ ನೆನಪಿನಲ್ಲಿ ಉಳಿಯುವಂತೆ ಪ್ರದರ್ಶಿಸಲಿರುವರು.
ಎಲ್ಲಾ ಕಾರ್ಯಕ್ರಮಗಳು ಅಬಾಲವೃದ್ಧರೆಗೆಲ್ಲರಿಗೂ ಸ್ವೀಕಾರಾರ್ಹವಾಗುವಂತೆ ಆಯೋಜಿಸಲಾಗಿದೆ. ಸಂಘದ ಸಂಪ್ರದಾಯದಂತೆ ಈ ಬಾರಿಯೂ ಉತ್ತಮ ಸಾಧನೆಮಾಡಿದ ಕನ್ನಡಿಗರಿಗೆ ಮಯೂರ ಪ್ರಶಸ್ತಿ-೨೦೦೭ ನೀಡಿ ಸನ್ಮಾನಿಸಲಾಗುವುದು.
ಎಲ್ಲಾ ಕನ್ನಡಿಗರಿಗೆ ಪ್ರವೇಶ ಮುಕ್ತವಾಗಿದ್ದು ಯಾವುದೇ ಪ್ರವೇಶ ಶುಲ್ಕ ನೀಡಬೇಕಾಗಿಲ್ಲ.
ಉತ್ಸವದ ಆಯೋಜಕರು ೨೧ನೆಯ ಡಿಸೆಂಬರ್ ಶುಕ್ರವಾರ ಸಂಜೆ ೪ ಘಂಟೆಯಿಂದ ರಾತ್ರಿ ೧೧ರ ವರೆಗೂ ನಡೆಯಲಿರುವ ಈ ಉತ್ಸವಕ್ಕೆ ಎಲ್ಲಾ ಕನ್ನಡಿಗರನ್ನು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಸುಜಯ್ ಬೆಂದೂರ್ ವರದಿಗಾರರು : ಅರ್ಶದ್ ಹುಸೈನ್
ಪ್ರಕಟಿಸಿದ ದಿನಾಂಕ : 2007-12-09
|
|
| Manjunatha Holenarasipura, Abu Dhabi | 2007-12-15 | | Wish u all the best on this occasion and pray the god to give all of u a lot of energy, enthusiasm to conduct more programes like this in future and keep the kannadigas alive in the UAE.
Thanks |
| shilpa, dubai | 2007-12-15 | | first of all thanks to the news. i hope this media is very effective to unite all kannadigas.please inform these kind of progammes to all of them so that we will not get any oppertunity to think that we are ajnabees here.
thanks |
|