ಬಹರೇನ್: ನೀ ಕುಣಿದಾಗ - ಕನ್ನಡ ಸಂಘ ಬಹರೇನ್ ಆಯೋಜಿಸಿದ ನೃತ್ಯಸ್ಪರ್ಧೆ |
ಪ್ರಕಟಿಸಿದ ದಿನಾಂಕ : 2008-05-22
ಐವತ್ತಕ್ಕೂ ಹೆಚ್ಚು ಸ್ಪರ್ಧಿಗಳಿಂದ ಸಂಭ್ರಮಿಸಿದ ಕಾರ್ಯಕ್ರಮ
ಬಹರೇನ್, ಮೇ 21: ಬಹರೇನಿನ ಕನ್ನಡ ಸಂಘ ಕಳೆದ್ ಮೇ 15ರಂದು ತನ್ನ ಸದಸ್ಯರಿಗಾಗಿ ವಿಶೇಷ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಿತ್ತು. - ನೀ ಕುಣಿದಾಗ - ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಐವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ತೀರ್ಪುಗಾರರ ಕೆಲಸವನ್ನು ಕ್ಲಿಷ್ಟವಾಗಿಸಿದರು. ಸಂಘದ ಶರಾವತಿ ಬಳಗ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಸದಸ್ಯರು ಆಗಮಿಸಿ ತಮ್ಮ ಸ್ಪರ್ಧಿಗಳನ್ನು ಹುರಿದುಂಬಿಸಿದರು.
ಸ್ಪರ್ಧೆಯಲ್ಲಿ ಹಲವು ಕನ್ನಡ ಹಾಗೂ ಹಿಂದಿ ಹಾಡುಗಳಿಗೆ ನರ್ತಿಸಿದ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಮೆರೆದರು. ತೀರ್ಪುಗಾರರಾಗಿ ಶಾಂತಿ ರಾಜಾ, ಮೊನಾಲಿಸಾ ಗುಹಾ ಹಾಗೂ ಜಾಕೊಬ್ ಪಿ.ಜೆ ಯವರು ವಿಜೇತರನ್ನು ಪ್ರಕಟಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿಗಳು ಸದಸ್ಯರನ್ನು ಸ್ವಾಗತಿಸಿದರು ಹಾಗೂ ಹಂಗಾಮಿ ಅಧ್ಯಕ್ಷರಾದ ರಮೇಶ್ ಮಂಜೇಶ್ವರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಎಲ್ಲಾ ವಿಜೇತರನ್ನು ಸೂಕ್ತ ಬಹುಮಾನಗಳೊಂದಿಗೆ ಸತ್ಕರಿಸಲಾಯಿತು.
ಕಾರ್ಯದರ್ಶಿಗಳಾದ ದೂಮಣ್ಣ ರೈ ವಂದನಾರ್ಪಣೆ ಸಲ್ಲಿಸಿದರು.
ವಿಜೇತರ ವಿವರಗಳು ಇಂತಿವೆ: (ಮಕ್ಕಳಿಗೆ)
ಮೂರರಿಂದ ಐದು ವರ್ಷಗಳು: ವಿಜೇತ: ಸಮೀಕ್ಷಾ ಶೆಟ್ಟಿ ಎರಡನೆಯ ಸ್ಥಾನ: ದಿಯಾ ಗಿರೀಶ್
ಇಅದರಿಂದ ಎಂಟು ವರ್ಷಗಳು: ವಿಜೇತ: ತಾನ್ಯಾ ಗಿರೀಶ್ ಎರಡನೆಯ ಸ್ಥಾನ: ಸಫಿಯಾ ಘನಿ ಮೂರನೆಯ ಸ್ಥಾನ: ದೀಪ್ತಾ ಎಸ್. ಶೆಟ್ಟಿ ಸಮಾಧಾನಕರ ಬಹುಮಾನ: ಕೌಶಿಕಾ ಬಿ.ಕೆ
ಎಂಟರಿಂದ ಹನ್ನೆರೆಡು ವರ್ಷಗಳು: ವಿಜೇತ: ಸಮೀಕ್ಷಾ ಶೆಟ್ಟಿ ಎರಡನೆಯ ಸ್ಥಾನ: ಸಲ್ಮಾ ಸಿಮಿನ್ ಮೂರನೆಯ ಸ್ಥಾನ: ಸ್ಮೃತಿ ಶೆಟ್ಟಿ ಸಮಾಧಾನಕರ ಬಹುಮಾನ: ವೈಶಾಲಿ ನಾಯಕ್ ಹಾಗೂ ಆಸ್ಥಾ ಸತೀಶ್
ಹನ್ನೆರಡರಿಂದ ಹದಿನೆಂಟು ವರ್ಷಗಳು: ವಿಜೇತ: ಸಂಪತ್ ಜತ್ತಣ್ಣ ಎರಡನೆಯ ಸ್ಥಾನ: ಸುನೈನ್ ಕೆ.ಬಿ. ಮೂರನೆಯ ಸ್ಥಾನ: ಶೃದ್ಧಾ ರಘುಪತಿ ಸಮಾಧಾನಕರ ಬಹುಮಾನ: ಪ್ರಜ್ವಿತಾ ಶೆಟ್ಟಿ
ಹದಿನೆಂಟು ವರ್ಷಗಳಿಗೆ ಮೇಲ್ಪಟ್ಟು ವಿಜೇತ: ಅರುಣ್ ಶೆಟ್ಟಿ
ಡುಯೆಟ್, ಐದರಿಂದ ಹತ್ತು ವರ್ಷಗಳು: ಸಲ್ಮಾ ಸಿಮಿನ್ ಹಾಗೂ ಸಮೀಕ್ಷಾ
ವರದಿಯ ವಿವರಗಳು |
 |
ಕೃಪೆ : ದೈಜಿ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-05-22
|
|
|