ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್: ಕುಂದಾಪುರ ವರಾದೋ ವೆಲ್ಫೇರ್ ಅಸೋಸಿಯೇಷನ್ (ಕೆ.ವಿ.ಡಬ್ಲ್ಯೂ.ಎ) ಅಧ್ಯಕ್ಷೆಯಾಗಿ ಶ್ರೀಮತಿ ನ್ಯಾನ್ಸಿ ಮೆನೆಝೆಸ್ ಮರುಆಯ್ಕೆ

ಡೋನಾಲ್ಡ್ ಮೆಂಡೋನ್ಸಾ ಉಪಾಧ್ಯಕ್ಷ, ರೋಷನ್ ಡಿ'ಸೋಜಾ  ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ : 2008-2010 ಅವಧಿಯ ಸಮಿತಿ ಪ್ರಕಟ

ಕುವೈಟ್, ಮೇ 19: ಕೆ.ವಿ.ಡಬ್ಲ್ಯೂ.ಎ (ಕುಂದಾಪುರ ವರಾದೋ ವೆಲ್ಫೇರ್ ಅಸೋಸಿಯೇಷನ್) ಸಂಘಟನೆಯು ತನ್ನ ವಾರ್ಷಿಕ ಸಮಾರೋಪ ಸಮಾರಂಭವನ್ನು ಕಳೆದ 16ನೇ ಮೇ ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ 2008-2010 ದ್ವೈವಾರ್ಷಿಕ ಅವಧಿಯ ಸಮಿತಿಯನ್ನು ನೇಮಕ ಮಾಡಿಕೊಳ್ಳಲಾಯಿತು.

ಕಾರ್ಯಕ್ರಮವು ಶ್ರೀಮತಿ ಸುನೀತಾ ಮೆಂಡೋನ್ಸಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.  ಬರುವ ದ್ವೈವಾರ್ಷಿಕ ಅವಧಿಯ ಹೊಸ ಸಮಿತಿಯ ನೇಮಕದ ಮುನ್ನುಡಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಆ ಬಳಿಕ ಕಳೆದ 2007-08ರ ಅವಧಿಯ ವಾರ್ಷಿಕ ವರದಿಯನ್ನು ಅಧ್ಯಕ್ಷೆ ಹಾಗೂ ಖರ್ಚುವೆಚ್ಚಗಳ ವಿವರಗಳನ್ನು ಖಜಾಂಚಿಗಳು ಸಭೆಯಲ್ಲಿ ಮಂಡಿಸಿದರು.  ಈ ಖರ್ಚುವೆಚ್ಚಗಳನ್ನು ಲೆಕ್ಕಪರಿಶೋಧಕರು ಪರಿಶೀಲಿಸಿ ಅನುಮೋದಸಿದರು. ಕಳೆದ ಅವಧಿಯಲ್ಲಿ ತಮಗೆ ನೀಡಿದ ಸಹಕರಕ್ಕಾಗಿ ಹಾಗೂ ಸಂಘದ ಕಾರ್ಯಕಲಾಪಗಳು ಸುಗಮವಾಗಿ ನಡೆಸಿಕೊಂಡು ಹೋಗುವಲ್ಲಿ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷೆ ತಮ್ಮ ಧನ್ಯವಾದ ಅರ್ಪಿಸಿದರು.

ಅ ಬಳಿಕ ಹೊಸ ಸಮಿತಿಯ ನೇಮಕ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಿ ಒಂದೇ ಕುಟುಂಬದ ಸದಸ್ಯರು ಒಂದೆಡೆ ಕೂಡಿದ ಅನುಭವವಾಯಿತು. ಕಳೆದ ವರ್ಷ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ನ್ಯಾನ್ಸಿ ಮೆಂಡೋನ್ಸಾ ರವರನ್ನು ಅಧ್ಯಕ್ಷೆಯಾಗಿ  ಮರುಆಯ್ಕೆ ಮಾಡಲಾಯಿತು.

ಸಮಿತಿಯ ಇತರ ಸದಸ್ಯರ ವಿವರಗಳು ಈ ಕೆಳಗಿನಂತಿವೆ:

Nancy Menezes -President
Donald Mendonca -Vice President
Christopher Dias- Auditor
Romel D'Souza -Treasurer
Rainer Crasta -Asst. Treasurer
Roshan D'Souza -General Secretary
Sunitha Mendonca- Asst. General Secretary
Carol Martis -Public Relations/Media
Veena Lewis  -Cultural Secretary
Nelson Mendonca -Asst. Cultural Secretary
Canute Roche -Coordinator-Poor Children's Education
Navin Victor Mendonca -Asst. Coordinator-Poor Children's Education
Sunil Arther Rodrigues -Incharge Members Affairs
Mohan Fernandes- Executive Committee Member
Micheal Oswald Dias  -Executive Committee Member
Mathias Saldanha -Executive Committee Member
Wilson George Plavia- Executive Committee Member
Mergin Dias -Executive Committee Member
Henry Lewis -Executive Committee Member
Nelson Oliveira -Executive Committee Member

ಶ್ರೀಮತಿ ಮೆಂಡೊನ್ಸಾರವರು ಬೇರೊಬ್ಬರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಇಚ್ಛಿಸಿದರೂ ಎಲ್ಲಾ ಸದಸ್ಯರ ಒಕ್ಕೊರಲಿನ ಬೇಡಿಕೆಯ ಮುಂದೆ ತಲೆಬಾಗಲೇ ಬೇಕಾಯಿತು. ಹೊಸ ಸಮಿತಿಯು ಮುಂದಿನ ಅವಧಿಯಲ್ಲಿ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತನ್ಮೂಲಕ ಸಂಘದ ಹಾಗೂ ಸಮಾಜದ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು.

ಮುಂದಿನ ಅವಧಿಯಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ವಿಚಾರವಿನಿಮಯ ನಡೆದು ಆ ಪ್ರಕಾರ ನಡೆದುಕೊಳ್ಳುವುದಾಗಿ ಸದಸ್ಯರು ಭರವಸೆಯಿತ್ತರು.

ಸುಮಾರು ಹನ್ನೊಂದು ಮುಕ್ಕಾಲರವರೆಗೂ ನಡೆದ ಸಂತಸದಿಂದ ಕೂಡಿದ ಕಾರ್ಯಕ್ರಮ ರೋಷನ್ ಡಿ'ಸೋಜಾರವರ ವಂದನಾರ್ಪಣೆಯೊಂದಿಗೆ ಸಮಾಪ್ತಿ ಕಂಡಿತು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕೆ.ವಿ.ಡಬ್ಲ್ಯೂ.ಎ. ಪ್ರಕಟಣೆ
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-05-19


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri